Yearly Archive: 2021

12

ಅವನೆಡೆಗೆ

Share Button

ಒಂದಲ್ಲ ಒಂದು ದಿನಇಂದಲ್ಲ ನಾಳೆ ನಾವೆಲ್ಲಹೋಗಲೇಬೇಕು ಅವನೆಡೆಗೆ. ನನ್ನದು ನಿನ್ನದು ಅವನದುಎಂದೆಲ್ಲಾ ಮೆರೆದ ನಾವೆಲ್ಲಹೋಗಲೇಬೇಕು ಅವನೆಡೆಗೆ. ಬಂಧು ಮಿತ್ರರ ಬಾಂಧವ್ಯಬಂಧನ ತೊರೆದು ನಾವೆಲ್ಲಹೋಗಲೇಬೇಕು ಅವನೆಡೆಗೆ. ಮನೆ ಮಡದಿ ಮಕ್ಕಳುಏನಿದ್ದರೂ ಕೂಡ ನಾವೆಲ್ಲಹೋಗಲೇಬೇಕು ಅವನೆಡೆಗೆ. ಆಸ್ತಿ ಅಂತಸ್ತು ಸುಖದ ಬಾಳಿನಸುಸ್ತಿ ಬಡ್ಡಿಯ ಕಟ್ಟಲು ನಾವೆಲ್ಲಹೋಗಲೇಬೇಕು ಅವನೆಡೆಗೆ. ಹೆಣ್ಣು ಹೊನ್ನು...

9

ಕನ್ನಡದೊಂದಿಗೆ ನಾನು

Share Button

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಸ್ವಂತ ಭಾಷೆ ಹಾಗೂ ಬೇರೆಬೇರೆ ಭಾಷಾ ಪ್ರಭೇದಗಳನ್ನು ಹೊಂದಿರುತ್ತದೆ.ಭಾಷೆ ನಿಂತ ನೀರಲ್ಲ.ಅದು ಸದಾ ಪ್ರವಹಿಸುತ್ತಲೇ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತದೆ. ಸಮಾಜದಲ್ಲಿ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ಬದಲಾಗುತ್ತಾ ಬೆಳೆದುಬರುವಂತೆಯೇ ಭಾಷೆಯೂ ನಿರಂತರವಾಗಿ ಬದಲಾಗುತ್ತಾ ಬೆಳೆಯುತ್ತಿರುತ್ತದೆ....

11

ಅಕ್ಷರ ಸಂತ ಹಾಜಬ್ಬ

Share Button

“ಚಿತ್ತುಪ್ಪುಳಿ ಬೋಡಯೇ?…ಇಂದೇ..ಎಡ್ಡೆ ಚೀಪೆ ಉಂಡು!” (ಕಿತ್ತಳೆ ಹಣ್ಣು ಬೇಕಾ?..ಇಕೊಳ್ಳಿ..ಒಳ್ಳೆ ಸಿಹಿ ಇದೆ!)..ಇದು 1978 ನೇ ಇಸವಿಯ ಸುಮಾರಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯಪಟ್ಟಣ ಮಂಗಳೂರಿನ ಕೇಂದ್ರಸ್ಥಾನವಾದ ಹಂಪನಕಟ್ಟೆಯಲ್ಲಿ, ಬಿದಿರಿನಬುಟ್ಟಿ ತುಂಬಾ ಕಿತ್ತಳೆಹಣ್ಣನ್ನು ತುಂಬಿಕೊಂಡು, ತಲೆ ಮೇಲೆ ಹೊತ್ತು, ರಸ್ತೆ ಪಕ್ಕದಲ್ಲಿ ಓಡಾಡುತ್ತಾ ಮಾರಾಟ ಮಾಡುತ್ತಿದ್ದ, ಶಾಲೆಯ ಮುಖವನ್ನೇ...

17

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 2

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮಾರನೆಯ ದಿನ ಬೆಳಗ್ಗೆಯೇ ತಿಂಡಿ ತಿಂದು, ನೇಪಾಳದ ಎರಡು ಬಸ್ಸುಗಳಲ್ಲಿ ಎಲ್ಲರೂ ಜೈ ಭೊಲೇನಾಥ್, ಓಂ ನಮಃ ಶಿವಾಯ – ಎನ್ನುತ್ತಾ ಪ್ರಯಾಣ ಆರಂಭಿಸಿದಾಗ ಉತ್ಸಾಹ ಪುಟಿಯ ತೊಡಗಿತು. ಅಲ್ಲಿಂದ ಸುಮಾರು 6 – 8 ಗಂಟೆಗಳಷ್ಟು ಪ್ರಯಾಣ ಮಾಡಿ, ಸಂಜೆ...

12

ಯಾರಿವನು ಅಪರಿಚಿತ?

Share Button

ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು...

4

ಕೃತಿ ಪರಿಚಯ:’ಸಂಜೀವಿನಿ’, ಲೇ: ಸಂಜೋತಾ ಪುರೋಹಿತ

Share Button

ಇದು ತೆಳು ಮನಸಿನ ಮೆಲು ಹುಡುಗಿ ಸಂಜೋತಾ ಪುರೋಹಿತ ರವರ ಮೊದಲ ಪ್ರೀತಿಯನ್ನು ಸದಾ ಜೀವಂತವಾಗಿರಿಸುವ ‘ಸಂಜೀವಿನಿ’ ಕಾದಂಬರಿ. ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು. ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಅಂತರ್ಜಾಲ ಪತ್ರಿಕೆಗಳಲ್ಲಿ...

7

ಗೈರ ಸಮಜೂತಿ -ಒಂದು ಮಹತ್ವದ ಕಾದಂಬರಿ

Share Button

ಜೈವಿಕವಾಗಿ ತಮ್ಮ ಒಡಹುಟ್ಟಿದ ಸೋದರಿಯರಿಗೆ ಮತ್ತು ಕನ್ನಡ ಭಾಷೆ ಕಾರಣವಾಗಿ ಒಡಹುಟ್ಟಿದ ಸಂಬಂಧವುಳ್ಳ ಲೇಖಕಿಯರಿಗೆ ಬಾಗಿನವಾಗಿ ಅರ್ಪಿಸಿದ ಬರಹಗಾರನೊಬ್ಬನ ( ಲೇ: ರಾಘವೇಂದ್ರ ಪಾಟೀಲ) ಈ ಕೃತಿ ಹೆಂಗರುಳ ಅಂತ:ಕರಣಕ್ಕೆ, ಒಳತಿಳಿವಿನ ಬೆಳಕಿಗೆ ಪ್ರಾಶಸ್ತ್ಯವನ್ನೀಯುವ ಮಹತ್ವದ ಕಾದಂಬರಿ. ‘ಗೈರಸಮಜೂತಿ’ ಎಂದರೆ ತಪ್ಪು ತಿಳುವಳಿಕೆ. ಈ ತಪ್ಪುತಿಳುವಳಿಕೆ ಮತ್ತು...

9

ಕನ್ನಡ ಸೌರಭ

Share Button

ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದುಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡಚಿಗುರುಲೆಗೆ ಸುಣ್ಣ ಲೇಪನ ಮಾಡಿ ಮಲೆನಾಡ ಅಡಕೆ ಜೊತೆ ಮೆದ್ದಾಗ ಮೂಡುವ ಕಡುಕೆಂಪು ಈ ಕನ್ನಡಹಂಸಗಾಮಿನಿ ಬಾಲೆ ಕಸೆ ಲಂಗ ಹಳದಿ ಕುಸುರಿ ಕುಪ್ಪಸ ತೊಟ್ಟುಲಜ್ಜೆಯಿಂದ ಬಳ್ಳಿಯಂತೆ ಬಳುಕಿ ನಡೆಯುವಾಗಬರುವ ಗೆಜ್ಜೆಯ...

9

ನೆನಪುಗಳ ಮರೆಯುವುದಾದರೂ ಹೇಗೆ!

Share Button

ನನ್ನಲ್ಲೇ ತುಂಬಿಕೊಂಡಿದ್ದನೆನಪುಗಳನ್ನೆಲ್ಲಾ ಗುಡಿಸಿಕಸದಬುಟ್ಟಿಯಲ್ಲಿ ಸುರಿದುಖುಷಿಯಿಂದ ಬೀಗುತಾ ಒಳಬಂದುನಿರಮ್ಮಳವಾಗಿ ಉಸಿರುತ್ತಾ ಕಣ್ಮುಚ್ಚಿ ಕುಳಿತೆ! ಕಿಟಕಿಯಿಂದ ನುಸುಳಿಬಂದ ಗಾಳಿಯು ನನ್ನಕಿವಿಯಲ್ಲಿ ಅದೇನೋನಿನ್ನ ಕುರಿತಾಗಿಯೇ ಉಸುರಿತ್ತುಮೌನವಾಗಿದ್ದ ಮನಸ್ಸನ್ನು ಕೆದಕಿ ಬೆದಕಿನನ್ನನ್ನೇ ನೋಡಿ ನಕ್ಕು ಸಾಗಿತ್ತು. ಮನದ ಅಂಗಳದಿಂದಸರಿಸಿ ಎಸೆದಿದ್ದು ಮತ್ತೆನನ್ನನ್ನೇ ಆವರಿಸಿಕೊಂಡಿತ್ತುಅರೆ! ಇದೆಂತಹ ಅಚ್ಚರಿಯಂದುಮನದೊಳಗೆಲ್ಲಾ ದಿಗಿಲುಸುಳಿವು ನೀಡದೆ ಸುನಾಮಿಯಂತೆಭುಗಿಲೆದ್ದು ಕುಣಿದಿತ್ತು. ಗಾಳಿ, ಮಳೆ ಬೀಸಿದಂತೆನನ್ನಲ್ಲೂ ನಿನ್ನ...

6

ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 1

Share Button

ಮೈಸೂರು ಸಾಹಿತ್ಯ ದಾಸೋಹಿಗಳ,ಸವಿಗನ್ನಡ ಪತ್ರಿಕಾ ಬಳಗದ, ವನಿತಾ ಸದನ ಶಾಲಾ ಬಳಗದ,ಕುಟುಂಬದ ಸದಸ್ಯರ, ಬಂಧುಗಳ, ಸ್ನೇಹಿತರ, ಶುಭ ಹಾರೈಕೆಗಳೊಂದಿಗೆ, 8 – 10 ವರ್ಷಗಳ ಕನಸನ್ನು ನನಸಾಗಿಸಿಕೊಳ್ಳಲು, ಜೂನ್ 7, 2019ರ ಶುಕ್ರವಾರದಂದು ಮೈಸೂರಿನಿಂದ ಬೆಂಗಳೂರಿಗೆ ಹೊರಟಾಗ ಮನದಲ್ಲಿ ಧನ್ಯತಾ ಭಾವ, ಧಾರ್ಮಿಕ ಭಾವ, ಸಂತೋಷ, ಕುತೂಹಲ,...

Follow

Get every new post on this blog delivered to your Inbox.

Join other followers: