ಅವನೆಡೆಗೆ
ಒಂದಲ್ಲ ಒಂದು ದಿನ
ಇಂದಲ್ಲ ನಾಳೆ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ನನ್ನದು ನಿನ್ನದು ಅವನದು
ಎಂದೆಲ್ಲಾ ಮೆರೆದ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ಬಂಧು ಮಿತ್ರರ ಬಾಂಧವ್ಯ
ಬಂಧನ ತೊರೆದು ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ಮನೆ ಮಡದಿ ಮಕ್ಕಳು
ಏನಿದ್ದರೂ ಕೂಡ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ಆಸ್ತಿ ಅಂತಸ್ತು ಸುಖದ ಬಾಳಿನ
ಸುಸ್ತಿ ಬಡ್ಡಿಯ ಕಟ್ಟಲು ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ಹೆಣ್ಣು ಹೊನ್ನು ಮಣ್ಣಿನ ಭಾಗ್ಯವ
ಕಣ್ಮುಚ್ಚುವ ಮುನ್ನ ಪಡೆದ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ಬರಿಗೈಯಲ್ಲಿ ಧರೆಗೆ ಬಂದು
ಬರಿಗೈಯಲ್ಲಿ ಧರೆಯಿಂದ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ದೈವ ಪಿತೃ ಋಷಿ ಋಣವ ತೀರಿಸಿ
ಜೀವನ ಸಾರ್ಥಕಗೊಳಿಸಿ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
ಜಗಕ್ಕೆ ಅಳುತ್ತಲೇ ಅಡಿಯಿಟ್ಟು
ಜಗವೇ ಅಳುವಂತೆ ಮಾಡಿ ನಾವೆಲ್ಲ
ಹೋಗಲೇಬೇಕು ಅವನೆಡೆಗೆ.
–ಶಿವಮೂರ್ತಿ.ಹೆಚ್.
ಹೌದು ಸತ್ಯವಾದ ಮಾತುಗಳು ಅಳುತ್ತಾ ಬರುವ ನಾವು ನಾವು ಹೋದಾಗ ನಾವು ಮಾಡಿದ ಕಾರ್ಯ ನೆಡೆಸಿದ ಬದುಕು ನೆನೆದು ಅಳುವಂತೆ ಮಾಡುವುದು ಇನ್ನೂ ಸ್ವಲ್ಪ ದಿನ ಇದ್ದರೆ ಚೆನ್ನಾಗಿತ್ತು ಎಂದು ಬಯಸುವ ಹಾಗಿರಬೇಕು..ಸರಳ ಸುಂದರ ಕವನ ಚೆನ್ನಾಗಿದೆ ಸಾರ್
ಸಹೃದಯ ಪ್ರೋತ್ಸಾಹಕ್ಕೆ ಧನ್ಯವಾದಗಳು ಮೇಡಂ
ವಾಸ್ತವ ದ ಅನಾವರಣ, ಸೊಗಸಾದ ಕವನ
ಸಹೃದಯ ಪ್ರೋತ್ಸಾಹಕ್ಕೆ ಧನ್ಯವಾದಗಳು ಮೇಡಂ
ಜೀವನದ ನಿಜಾರ್ಥವನ್ನು ತೆರೆದಿಟ್ಟ ಭಾವಪೂರ್ಣ ಕವಿತೆ.
ಹೃತ್ಪೂರ್ವಕ ಧನ್ಯವಾದಗಳು
ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಹೆಣೆದ ಕವನ ನಶ್ವರ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮನಸ್ಸನ್ನು ಚಿಂತನೆಗೆ ಹಚ್ಚುವಂತಿದೆ
ಹೃತ್ಪೂರ್ವಕ ಧನ್ಯವಾದಗಳು ಮೇಡಂ
ತತ್ವಜ್ಞಾನಿಯು ಕಂಡ ಬದುಕಿನಂತೆ
ಅರ್ಥಪೂರ್ಣವಾದ ಕವನ
ಹೃತ್ಪೂರ್ವಕ ಧನ್ಯವಾದಗಳು ಮೇಡಂ
ಚಿಂತನೆ ಚೆನ್ನಾಗಿದೆ
ಹೃತ್ಪೂರ್ವಕ ಧನ್ಯವಾದಗಳು ಮೇಡಂ