Daily Archive: December 19, 2019
ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್....
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಪ್ರತಿಷ್ಟಿತ ಬ್ಯಾಂಕೊಂದು ಗೃಹಸಾಲ ಮೇಳವೊಂದನ್ನು ಹಮ್ಮಿಕೊಂಡಿತ್ತು. ಅಲ್ಲಿಗೆ ಬರುವ ಜನರಿಗೆ ಮನರಂಜನೆ ಸಿಗಲೆಂದೋ ಏನೋ, ಚಲನಚಿತ್ರ ಹಾಡುಗಳ ಗಾಯನ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿತ್ತು. ನಾನು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗ ಹಾಗೂ ಆರನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳನ್ನು...
ಯಾವುದು ಧರಿಸಿ ನಿಲ್ಲುತ್ತದೋ ಅದೇ ಧರ್ಮ. ಮನುಷ್ಯನನ್ನೂ ಸಮಾಜವನ್ನೂ ಮಾನವತೆಯಿಂದ ಮಾಧವತೆಯೆಡೆಗೆ ಕೊಂಡೊಯ್ಯುವ ದೈವನಿರ್ಮಿತವಾದ ಸೇತುವೆಯೇ ಧರ್ಮ, ಸಮಾಜವನ್ನು ಹಲವು ಕಾಲ ನಿಲ್ಲಿಸಬಲ್ಲದ್ದು ಧರ್ಮ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಸುಭಾಷಿತವಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆಯಂತೆ. ಸತಿಧರ್ಮ, ಪತಿ ಧರ್ಮ, ಸುತನ ಧರ್ಮ,...
ಫೇಸ್ಬುಕ್ ಒಂದು ಅಗಾಧ ಸಾಗರ .ಇಲ್ಲಿ ಬೆಸೆಯುವ ಸ್ನೇಹ ತಂತುಗಳು ನೂರಾರು, ಸಾವಿರಾರು. ಒಳಿತು ಎಷ್ಟಿದೆಯೋ ಅಷ್ಟೇ ಕೆಡುಕು ತುಂಬಿರುವ ಜಾಲತಾಣ. ಯಾವುದನ್ನು ಸ್ವೀಕರಿಸಬೇಕು, ಯಾವುದನ್ನು ಬಿಡಬೇಕು ಅನ್ನುವ ವಿವೇಚನೆ, ವಿವೇಕ ಇಲ್ಲಿ ನಮ್ಮ ನಮ್ಮ ಮನಸಿಗೆ ಬಿಟ್ಟದ್ದು. ಇದೊಂದು ಬಣ್ಣ ಬಣ್ಣದ ಪ್ರಪಂಚ. ಒಂದು ರೀತಿಯಲ್ಲಿ...
ಭಾವಲೋಕದ ಬದುಕಿನಲಿ ಕನಸಿನ ಸಿಹಿ ಸಿಂಚನ . ಬಯಕೆ ತುಂಬಿದ ಮನದ ಗೂಡಲಿ ಕನಸಿನ ಗಿರಿಶೃಂಗದ ಸೌಂದರ್ಯದ ಸಂಗಮ . ಇರುಳ ಬೆಳಕಲಿ ಕನಸುಗಳ ಗಿರಿಯೇರುವ ಮನದಲಿ ಯುದ್ಧ ಸಾರುವ ಪಯಣ.. . ಮುಸ್ಸಂಜೆಯ ಮಂದಹಾಸಕೆ ಕನಸುಗಳ ಭಾವನೆಯ ಕಲರವಕೆ ಸುಖ ದುಃಖದ ಹಾದಿಯ ಸವೆದು ಗುರಿ...
1 ಬದುಕಿನ ಸೀಳುದಾರಿಗಳಲ್ಲಿ ತಲೆಗೊಂದು ದಾರಿ ಸಂಧಿಸಿದಷ್ಟು ಹೊತ್ತು ಹಿಡಿಯುವುದಿಲ್ಲ ಬಿಡು ಬೇರೆಯಾಗಲು 2 ಒಂದು ನಿಷ್ಕ್ರಮಣದ ಬಳಿಕ ಒಂದು ಸಂಭಾಷಣೆಯ ಕಡೆಯ ಸಾಲಿನ ನಂತರ ಏನುಳಿಯುತ್ತದೆ ಎಂದು ಆಲೋಚಿಸುತ್ತಿರುತ್ತೇನೆ ಒಂದು ನೆರಳಾ? ಮತ್ತೊಂದು ಕಿರುನಗೆಯಾ? ಇನ್ನೊಂದು ಹೇಳದೆ ಉಳಿದ ಮಾತಾ? 3 ಹೇಗಿದ್ದರೂ ಹೊರಟುಬಿಡುತ್ತೇವೆ ಇಲ್ಲಿ ಮರಗಳಲ್ಲಿ ಕೆಲವು...
ಕಿಸೆಗಳ್ಳರ ಕಿತಾಪತಿ..! ಅದಾಗಲೇ ಬೆಳಗ್ಗಿನ ಗಂಟೆ ಒಂಭತ್ತೂವರೆ..ಬಿಸಿಲ ಶಾಖ ಏರುತ್ತಲೇ ಇತ್ತು. ಇತ್ತ ನಾವು ಕಾಳಿ ದೇಗುಲದ ಆವರಣದಲ್ಲಿ ಬಾಲಣ್ಣನವರಿಗಾಗಿ ಕಾದು ಕುಳಿತಿದ್ದಾಗ ಯಾರೋ ಅಂದರು..”ಅನತಿ ದೂರದಲ್ಲೇ ನದಿ ಇದೆ, ಹೋಗಿ ನೋಡಿ ಬರಬಹುದಿತ್ತು”. ಸರಿಯೆಂದು ಅಲ್ಲಿದ್ದ ಸ್ವಲ್ಪ ಮಂದಿ ಎದ್ದು ಹೊರಟಾಗಲೇ ಗಣೇಶಣ್ಣನ ಬುಲಾವ್ ಬಂತು..”ಎಲ್ರೂ...
ಕಪ್ಪು ಕಪ್ಪೆಂದು ದೂರಾಗಬ್ಯಾಡಣ್ಣ ಕಪ್ಪೆoಬುದು ನೆತ್ತಿಯ ಸುಪ್ಪತ್ತಿಗೆ ಬಣ್ಣ ||ಪ|| . ಬಿಳಿಬಿಳಿಯೆಂದು ಹಿಂದೋಡಬ್ಯಾಡ ಬರಿಬೂದಿಬಣ್ಣ ಕಣ್ಣಲ್ಲಿ ಸುಣ್ಣ ಬಿಳಿಬಣ್ಣ ನಾನು ಜರಿತಿಲ್ಲೊ ಅಣ್ಣ ಯಾವುದೂ ಜಗದಲ್ಲಿ ಮೇಲಲ್ಲ ಕಾಣಾ , ಕಪ್ಪುನೆಲವಿಲ್ಲಿ ಭತ್ತವ ಬೆಳೆತೈತಿ ಬೆಳೆದ ಬಿಳಿಅಕ್ಕಿ ಹಸಿವನ್ನ ನೀಗೈತಿ ಯಾವುದು ಮೇಲಲ್ಲ ಯಾವುದು...
ನಿಮ್ಮ ಅನಿಸಿಕೆಗಳು…