ಕಪ್ಪು ಬಿಳುಪು
ಕಪ್ಪು ಕಪ್ಪೆಂದು ದೂರಾಗಬ್ಯಾಡಣ್ಣ
ಕಪ್ಪೆoಬುದು ನೆತ್ತಿಯ ಸುಪ್ಪತ್ತಿಗೆ ಬಣ್ಣ ||ಪ||
.
ಬಿಳಿಬಿಳಿಯೆಂದು ಹಿಂದೋಡಬ್ಯಾಡ
ಬಿಳಿಬಿಳಿಯೆಂದು ಹಿಂದೋಡಬ್ಯಾಡ
ಬರಿಬೂದಿಬಣ್ಣ ಕಣ್ಣಲ್ಲಿ ಸುಣ್ಣ
ಬಿಳಿಬಣ್ಣ ನಾನು ಜರಿತಿಲ್ಲೊ ಅಣ್ಣ
ಯಾವುದೂ ಜಗದಲ್ಲಿ ಮೇಲಲ್ಲ ಕಾಣಾ
,
ಕಪ್ಪುನೆಲವಿಲ್ಲಿ ಭತ್ತವ ಬೆಳೆತೈತಿ
ಕಪ್ಪುನೆಲವಿಲ್ಲಿ ಭತ್ತವ ಬೆಳೆತೈತಿ
ಬೆಳೆದ ಬಿಳಿಅಕ್ಕಿ ಹಸಿವನ್ನ ನೀಗೈತಿ
ಯಾವುದು ಮೇಲಲ್ಲ ಯಾವುದು ಕೀಳಲ್ಲ
ನೋಡುವ ನೋಟದ ಮ್ಯಾಲನಿಂತೈತಿ
.
ಕರಿಕುರಿಯಲ್ಲೂ ಬಿಳಿಹಾಲು ಬರುತೈತಿ
ಕರಿಕುರಿಯಲ್ಲೂ ಬಿಳಿಹಾಲು ಬರುತೈತಿ
ಬಿಳಿಬೇಕು ಅಂದೊರ ನಾಲಿಗೆ ರುಚಿಸೈತಿ
ಕಪ್ಪುಮೋಡವು ನಮಗಿಂತ ಮೇಲೈತಿ
ಕರುಗುತಲಿ ಭುವಿಗೆ ಬಿಳಿ ಬಣ್ಣ ತೋರೈತಿ
.
ಕಪ್ಪುಕೊಣೆಯಲವ್ವ ನವಮಾಸ ಕಳೆದವಳೆ
ಕಪ್ಪುಕೊಣೆಯಲವ್ವ ನವಮಾಸ ಕಳೆದವಳೆ
ಬಿಳಿಮೊಗದ ಜನ್ಮಕ್ಕೆ ಬಿಳಿಹಾಲ ಎರೆದವಳೆ
ಯಾವುದು ಮೇಲಲ್ಲ ಯಾವುದು ಕೀಳಲ್ಲ
ನೋಡುವ ನೋಟಾದ ಮ್ಯಾಲನಿಂತೈತಿ
.
ಎಲ್ಲವೂ ನೋಡುವ ನೋಟದ ಮ್ಯಾಲೈತಿ
ಎಲ್ಲವೂ ನೋಡುವ ನೋಟದ ಮ್ಯಾಲೈತಿ
ನೋಡುವ ಕಣ್ಣೊಳಗೆ ಎರಡು ಬಣ್ಣ ತುಂಬೈತಿ..
.
-ಶಿವಾನಂದ್ ಕರೂರ್ ಮಠ್ , ದಾವಣಗೆರೆ.
ಸುಪರ್ಬ್. ನಾನೇ ಶ್ರೇಷ್ಠ ಅನ್ನುವ ಮನಸಿನ ಅಹಂ ಗೆ ಏಟು ನೀಡಿ , ತಗ್ಗಿ ಬಗ್ಗಿ ನಡೆ ಅನ್ನುವುದನ್ನು ಕಲಿಸುವಂತಹ ಸಾಲುಗಳು
ಧನ್ಯವಾದಗಳು
super
Superb sir
Superb sir its meaningful words fabulous
Superb sir
ಚೆನ್ನಾಗಿ ದೆ ಕವನ
ಕಪ್ಪು ಕಪ್ಪೆಂದು ಹೀಗಳೆವವರ ಕಣ್ತೆರೆಸುವ ಸಾಲುಗಳು ಚೆನ್ನಾಗಿವೆ.