Monthly Archive: March 2018

1

ಕ್ರೈಸ್ತರ ಪವಿತ್ರ ಹಬ್ಬ, ಗುಡ್ ಫ್ರೈಡೆ

Share Button

 ‘ ಗುಡ್ ಫ್ರೈಡೆ ದಿನ ಕ್ರಿಶ್ಚಿಯನ್ನರಿಗೆ ವಿಶೇಷ ದಿವಸವಲ್ಲವೇ? ಆ ದಿನ ಶುಭಾಶಯ ಹೇಳಲಿಕ್ಕಿಲ್ಲ ಎಂದು ಯಾರೋ ಅಂದರು. ಯಾಕೆ ಎಂದು ನನ್ನ ಮಿತ್ರರೊಬ್ಬರು ಕೇಳಿದರು. ಶುಭಾಶಯ ಹೇಳಿದರೆ ಅಪರಾಧವೇನೂ ಅಲ್ಲ. ಆದರೆ ಇದು ಸಂಭ್ರಮಿಸುವ ಹಬ್ಬವಲ್ಲ. ದುಃಖದಿಂದ, ಅತೀವ ಭಕ್ತಿಯಿಂದ ಆಚರಿಸುವ ಅತಿ ಮಹತ್ವದ ಹಬ್ಬ....

2

ತೂಗುವ ಸೇತುವೆಗಳೂ ಬಾಗುವ ಮನಗಳೂ

Share Button

ಕರ್ನಾಟಕ ಹಾಗೂ ಭಾರತದ ಇತರ ರಾಜ್ಯಗಳಲ್ಲಿ ಈಗಲೂ, ನದಿದಂಡೆಗಳಲ್ಲಿರುವ ಹಳ್ಳಿಗಳು ಮಳೆಗಾಲದಲ್ಲಿ ಉಕ್ಕಿ ಹರಿವ ಪ್ರವಾಹದಿಂದಾಗಿ ಸುತ್ತುಮುತ್ತಲಿನ ಸಂಪರ್ಕ ಕಳೆದುಕೊಂಡು ಅಕ್ಷರಶ: ದ್ವೀಪಗಳಾಗುವುದಿದೆ.  ಅರ್ಧ ಗಂಟೆ ವಿದ್ಯುತ್, ಇಂಟರ್ನೆಟ್ ಇಲ್ಲದಿದ್ದರೆ  ಚಡಪಡಿಸುವ ಈಗಿನ ಕಾಲದಲ್ಲಿ ದಿನಗಟ್ಟಲೆ ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿರುವುದು ಎಷ್ಟು ಕಷ್ಟ!. ಊಹಿಸಿಕೊಳ್ಳಿ!  ಮಕ್ಕಳು...

0

ಕಾವ್ಯಕನ್ನಿಕೆ

Share Button

ಕಲ್ಪನೆಯ ಕೂಸಾಗಿ ಜನಿಸಿರುವೆ ಮನದೊಳಗೆ ಚಿಗುರೊಡೆದು ಸಸಿಯಾಗಿ ಭಾವನೆಗಳ ಮರವಾಗಿ ಬೆಳದಿರುವೆ ಅರಳಿವೆ ಪದಗಳು ಮೊಗ್ಗಾಗಿ ಹೂವಾಗಿ ಕಂಪ ಬೀರುತಿವೆ ಇಂದು ನಾಳೆ ಎಂದೆಂದೂ ಕೈ ಬೀಸಿ ಕರೆಯುತಿವೆ ಕಾವ್ಯಕನ್ನಿಕೆಯಾಗಿ ಲಗ್ಗೆಯಿಟ್ಟು  ಮನೆಮಾಡಿ ಸದಾ ಗುನುಗುತಿವೆ ಸಹೃದಯಿಗಳ ಅಂತರಂಗದೊಳಗೆ –  ಶ್ರೀನಿವಾಸ್ ಕೆ.ಎಮ್  +7

0

ಬದಲಾಗದ ಬದಲಾವಣೆ

Share Button

ನಾವೆಲ್ಲರೂ ಸಮಾಜದಲ್ಲಿ ಬದುಕುತ್ತಿದ್ದೇವೆ ನಮ್ಮಲ್ಲಿ ಹಲವಾರು ನಿರೀಕ್ಷೆಗಳು ಇರುವುದು ಸಹಜ. ವ್ಯಕ್ತಿ ತಾನು ವಾಸಿಸುವ ಸಮಾಜ ಹೀಗೆಯೇ ಇರಬೇಕು ಎಂದು ಕನಸು ಕಾಣುವುದು ತಪ್ಪಲ್ಲ. ನಮ್ಮ ಸುತ್ತಲೂ ಒಳ್ಳೆಯ ಆಶಾದಾಯಕ ಸುಧಾರಣೆ ಆಗಬೇಕೆಂದು ಒಬ್ಬ ಚಿಂತಕ ಸದಾ ಚಿಂತಿಸುತ್ತಾನೆ. ಆ ಪ್ರಗತಿಪರ ಬದಲಾವಣೆಗಾಗಿ ತನ್ನನ್ನು ತಾನು ಕಾರ್ಯೊನ್ಮುಕಾಗಿಸಿಕೊಳ್ಳುತ್ತಾನೆ....

1

ವಿಶ್ವ ಜಲ ದಿನ…

Share Button

ನೀರು..ನೀರು,,, ನೀರು ನೀರು ನೀರ ಜೊತೆ ಸಂಬಂಧ ಅವಿನಾಭಾವ ಹಾಹಾಕಾರ ನೀರಿಗೆ ಎಲ್ಲೆಲ್ಲೂ ನೀರ ಅಭಾವ,, ನಗರಗಳಲಿ ಕಾವೇರಿದಾಗ ಕಾವೇರಿ, ಜಲಮಂಡಳಿಯ ಸಿಹಿನೀರು, ತೊಳೆಯಲು ಕೊಳವೆ ಬಾವಿಯ ಉಪ್ಪು ನೀರು,, ಬಯಲ ನಾಡಲ್ಲಿ ನದೀಪಾತ್ರದ, ಗುಂಡಿಗೆ ಅದುರುವಂತೆ ಗುಂಡಿ ತೋಡಿದರೂ ಬರದ ನೀರು,, ಬಾಯಾರಿ ಬಂದವರಿಗೆ ಬೆಲ್ಲದ...

1

ಧಾರೆ

Share Button

ಧಾರೆಯದು ಧಾರೆ,ಅಪ್ಪ ಅಮ್ಮರ ಒಲವೆರೆವ  ಧಾರೆ. ಸುಮಹೂರ್ತದಲಿ ಸುದಿನದಿ ಸಂತಸದಿ ನಡೆವ  ಧಾರೆ. ಸಂಪ್ರದಾಯದ ಚಪ್ಪರದ ನೆರಳೊಳಗೆ ಎರೆವ ಧಾರೆ. ಮನ ಮನಗಳೊಂದಾಗೆ  ಸಪ್ತಪದಿಯೊಳೊಂದಾಗೊ ಧಾರೆ. ಕಂಪು ಸೂಸುವ ಮಲ್ಲೆ ಮಾಲೆ,ನವನವೀನ ಶೃಂಗಾರದಲವಳು ಮಿನುಗುತಾರೆ. ಕೈಯಲ್ಲಿ ಮಾಂಗಲ್ಯ ಮನದೊಳಗೆ ಪುಳಕ ತನ್ನವಳ ನಾಚಿಕೆಗೆ ವರನವನು ಸೂರೆ. ರಂಗೇರಿದ ಸಂಭ್ರಮದಲಿ,ಬಂಧುಮಿತ್ರರುಪಸ್ಥಿತಿಯ...

3

ಬೇಸಿಗೆಯಲ್ಲಿ ಶಾರೀರಿಕ ನಿರ್ಜಲೀಯತೆ (ಡಿಹೈಡ್ರೇಷನ್)

Share Button

ಬೇಸಿಗೆ ಶುರುವಾದೊಡನೆ ಎಲ್ಲರಿಗೂ ತಿರುಗಾಟದ ಸಂಭ್ರಮ. ಆದರೆ ಸಮಸ್ಯೆ, ಸೆಕೆ..ಬಾಯಾರಿಕೆ…ಸುಸ್ತು..!! ಇದಕ್ಕೆ ಕಾರಣ ಅತಿಯಾದ ತಾಪಮಾನ ಹಾಗೂ ಬೇಸಿಗೆಯಲ್ಲಿ ಹಗಲು ದೀರ್ಘವಾಗಿರುವುದು. ಇದರಿಂದಾಗಿ ದೇಹವು ಉಷ್ಣತೆಯನ್ನು ಕಡಿಮೆಗೊಳಿಸುವುದಕ್ಕೋಸ್ಕರ ಅತಿಯಾಗಿ ಬೆವರುತ್ತದೆ. ದೇಹದ 60-65 % ಭಾಗವು ನೀರಿನಿಂದ ಕೂಡಿದೆ.ಹಾಗಾಗಿ ಶರೀರದಿಂದ ಎಷ್ಟು ಪ್ರಮಾಣದ ನೀರು ಹೊರ ಹೋಗುತ್ತದೋ...

0

ಪರಸ್ಪರ

Share Button

ಹಕ್ಕಿಗೆ ಮರದ , ಮರಕ್ಕೆ ಹಕ್ಕಿಯ ಹಂಗಿಲ್ಲ  ಎಂದರು ಹಿರಿಯರು. ಅವರಿಗೆ ನಮಸ್ಕಾರ ಆದರೆ ಮರದ ಬೀಜ ಹಕ್ಕಿಯ ಒಡಲಲ್ಲಿ ಎಲ್ಲೋ  ದಾಟಿ ಮೊಳೆತು ಮತ್ತೆ ಮರ ಮರದ ಪೊಟರೆ ಕೊಂಬೆಗಳಲ್ಲಿ ಹಕ್ಕಿ ಗೂಡಾಗಿ ಮೊಟ್ಟೆ ಮರಿ ಮಾಡಿ-ಸಂಸಾರ ಹೀಗೆ ಸ್ಥಾವರ- ಜಂಗಮ ಜೀವ ಸಂಚಾರ ನನ್ನೊಬ್ಬ...

0

ಕಾಡೊಳಗಿದ್ದು ಆನೆಗಳಿಗಂಜಿದೊಡೆಂತಯ್ಯ..

Share Button

ದಟ್ಟ ಹಸಿರಿನ ಕಾಡಿನ ನಡುವೆ ಇರುವ ಆ ಪುಟ್ಟ ಹೆಂಚಿನ ಬಿಡಾರಗಳಲ್ಲಿ ತಂಗುವುದು ಅದೆಷ್ಟು ವಿಶಿಷ್ಟ ಅನುಭವ! ದೂರದಿಂದ ಕೇಳಿ ಬರುವ ನವಿಲು ಹಾಗೂ ಇತರ ಪಕ್ಷಿಗಳ ಕೂಜನಕ್ಕೆ ಕಡವೆ/ಸಾಂಬಾರ್ ಮೃಗದ ದ್ವನಿಯ ಹಿಮ್ಮೇಳ..ಯಾವುದೋ ಮರಕ್ಕೆ ಸುತ್ತಿಕೊಂಡ ಬೃಹದಾಕಾರದ ಬಳ್ಳಿ, ಬಿಡಾರದ ಮಾಡಿನ ಮೇಲೆ ತಟತಟನೆ ಬೀಳುವ...

0

ಸೇತೂರಾಮ್ ಅವರ ಕೃತಿ: ‘ನಾವಲ್ಲ’

Share Button

ದೂರದರ್ಶನದ  ಪರದೆಯ ಮೇಲೆ ಆಗಾಗ ವಿಭಿನ್ನ ಪಾತ್ರ್ರಗಳಲ್ಲಿ ಕಾಣಿಸಿಕೊಂಡು, ವಿಶಿಷ್ಟ ಛಾಪನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸಿರುವ ಕಲಾವಿದ ಶ್ರೀ ಸೇತುರಾಮ್ ಅವರು ಹೆಣೆದ ಆರು ಕಥೆಗಳ ಸಂಕಲನ “ನಾವಲ್ಲ” . ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯಿನಿ ಹಾಗೂ ನಾವಲ್ಲ – ಎಂಬ ಶೀರ್ಷಿಕೆಗಳುಳ್ಳ ಆರು ಕಥೆಗಳ...

Follow

Get every new post on this blog delivered to your Inbox.

Join other followers: