ಪರಸ್ಪರ

Share Button

ಹಕ್ಕಿಗೆ ಮರದ , ಮರಕ್ಕೆ
ಹಕ್ಕಿಯ ಹಂಗಿಲ್ಲ  ಎಂದರು
ಹಿರಿಯರು.
ಅವರಿಗೆ ನಮಸ್ಕಾರ
ಆದರೆ
ಮರದ ಬೀಜ ಹಕ್ಕಿಯ ಒಡಲಲ್ಲಿ
ಎಲ್ಲೋ  ದಾಟಿ ಮೊಳೆತು
ಮತ್ತೆ ಮರ

ಮರದ ಪೊಟರೆ ಕೊಂಬೆಗಳಲ್ಲಿ
ಹಕ್ಕಿ ಗೂಡಾಗಿ ಮೊಟ್ಟೆ ಮರಿ
ಮಾಡಿ-ಸಂಸಾರ
ಹೀಗೆ ಸ್ಥಾವರ- ಜಂಗಮ ಜೀವ
ಸಂಚಾರ

ನನ್ನೊಬ್ಬ ಗೆಳೆಯ ಹೇಳುತ್ತಿದ್ದ
ರಾತ್ರಿ ಹಗಲಿನ ಕತ್ತಲನ್ನು
ಪಡೆದು ಇರುಳು
ಹಗಲು ರಾತ್ರಿಯ ಬೆಳಕನ್ನು
ಹೀರಿ…

ಒಂದು ಇನ್ನೊಂದರ ಪೊರೆದು
ಆಧಾರ
ಹಂಗೆಂದರೆ ಹಂಗು
ಅಲ್ಲವೆ.ಕಂಡಂತೆ
ಕಾಣ್ಕೆ
.

– ಗೋವಿಂದ ಹೆಗಡೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: