ಕಾವ್ಯಕನ್ನಿಕೆ
ಕಲ್ಪನೆಯ ಕೂಸಾಗಿ ಜನಿಸಿರುವೆ ಮನದೊಳಗೆ
ಚಿಗುರೊಡೆದು ಸಸಿಯಾಗಿ
ಭಾವನೆಗಳ ಮರವಾಗಿ
ಬೆಳದಿರುವೆ
ಅರಳಿವೆ
ಪದಗಳು ಮೊಗ್ಗಾಗಿ ಹೂವಾಗಿ
ಕಂಪ ಬೀರುತಿವೆ
ಇಂದು ನಾಳೆ ಎಂದೆಂದೂ
ಕೈ ಬೀಸಿ ಕರೆಯುತಿವೆ
ಕಾವ್ಯಕನ್ನಿಕೆಯಾಗಿ
ಲಗ್ಗೆಯಿಟ್ಟು ಮನೆಮಾಡಿ
ಸದಾ ಗುನುಗುತಿವೆ
ಸಹೃದಯಿಗಳ ಅಂತರಂಗದೊಳಗೆ
– ಶ್ರೀನಿವಾಸ್ ಕೆ.ಎಮ್