ಬೆಳಕು-ಬಳ್ಳಿ

ಕಾವ್ಯ ಭಾಗವತ 40: ಸಮುದ್ರ ಮಥನ –2

Share Button


ಅಷ್ಟಮ ಸ್ಕಂದ – ಅಧ್ಯಾಯ -2
ಸಮುದ್ರ ಮಥನ –2

ಅಮೃತ ಪ್ರಾಪ್ತಿಗಾಗಿ ಸಮುದ್ರ ಮಥನ
ಮಹಾ ಪ್ರಯಾಸಕರ ಕಾರ್ಯ
ಸಾಧನೆಗೆ ದೇವ, ದೈತ್ಯ ದಾನವರ ಸಂಯುಕ್ತ ಕಾರ್ಯ
ದವಶ್ಯಕತೆಗೆ
ಬಲಾಢ್ಯ ದೈತ್ಯರ ಮನವೊಲಿಸಿ
ಕಾರ್ಯಸಾಧನೆಯ ಅನಿವಾರ್ಯತೆಯನರಿತು
ಸಮುದ್ರ ಮಥನ ಮಾಡಬೇಕಿದೆ

ಒಳಿತು ಕೆಡಕುಗಳ ಮಥನ ಮಾಡಿ
ಅಮೃತೋತ್ಪತ್ತಿಯಾಗಬೇಕಿದೆ
ಮಂದಾರ ಪರ್ವತದ ಕಡೆಗೋಲಿನಲಿ
ವಾಸುಕಿಯ ಹಗ್ಗದಲಿ
ಸಮುದ್ರವ ದೇವದಾನವರು
ಮಥಿಸೆ ಮೊದಲ್ಗೆ
ಕಾಲಕೂಟವಿಷದ್ಭುದವ
ತದನಂತರ, ಮನೋಹಾರಕ ವಸ್ತುಗಳು
ನಂತರದಿ
ಅಂತ್ಯದಲಿ ಅಮೃತೋದ್ಭವ
ಅಮೃತ
ಬಲ ವೀರ್ಯ ತೇಜಸ್ಸು
ರಾಜೈಶ್ವರ್ಯ, ಶತ್ರುಜಯ
ಗಳೆಂಬ ಸಕಲಾಭಿಷ್ಟಗಳ
ಪೂರೈಪ ಅಮೃತದ ಉದ್ಭವ

ನಾರಾಯಣನ ಭಗವತ್ ಸಂದೇಶವಂ
ಪಾಲಿಸುತ
ದೇವೇಂದ್ರ, ದೈತ್ಯ ಸಾರ್ವಭೌಮ
ಬಲಿ ಚಕ್ರವರ್ತಿಯ ಮನವೊಲಿಸಿ
ದೇವ ದಾನವರ ಸಂಧಿಯಿಂದ
ಸಮುದ್ರ ಮಥನಕೆ
ನಾಂದಿಯಾದ ಕ್ಷಣ ಅಪೂರ್ವ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :  http://surahonne.com/?p=42439
(ಮುಂದುವರಿಯುವುದು)

-ಎಂ. ಆರ್.‌ ಆನಂದ, ಮೈಸೂರು

4 Comments on “ಕಾವ್ಯ ಭಾಗವತ 40: ಸಮುದ್ರ ಮಥನ –2

  1. ಅಪೂರ್ವ ಕ್ಷಣಕ್ಕೆ ನಾಂದಿ ಹಾಡಿದ ಕಾವ್ಯ ಭಾಗವತದ ಈ ಕಾವ್ಯವೂ ಸುಂದರವಾಗಿ ಮೂಡಿ ಬಂದಿದೆ.

  2. ಅಪೂರ್ವವಾದ ಸಮುದ್ರ ಮಥನಕೆ ನಾಂದಿ ಹಾಡಿದ ಕಾವ್ಯ ಭಾಗವತದ ಭಾಗ ಚೆನ್ನಾಗಿದೆ ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *