
ಹಸಿರೆಲೆ ಒಳಗೆ
ಗೂಡಿನ ಹಾಡು
ಹಕ್ಕಿಯ ಬದುಕಿನ
ಸಂತಸ ನೋಡು
ಮರವದು ನೆರಳು
ಮಣ್ಣದು ಮಡಿಲು
ಬಣ್ಣದ ರಂಗು
ಹೂವಿನ ಹೂವಿನ ಎಸಳು
ಎಳೆ ಎಳೆಯಾಗಿ ಚಿಗುರಿ
ಹಬ್ಬುವುದು ಉಸಿರು
ಮನಸಿನ ತುಂಬೆಲ್ಲಾ
ಒಲವಿನ ಹೆಸರು
ನಿಲುವೊಂದು ಬಾಳು
ಬಂಧವೊಂದು ಬೆರಗು
ಹಚ್ಚಿಕೊಳ್ಳುವುದು ಜಾಲ
ಉಳಿಸಿಕೊಳ್ಳುವುದು ಕಾಲ
ನಗುವೆಂಬ ಚಿತ್ರದೊಳಗೆ
ಗೆರೆಗಳ ಪ್ರತಿಬಿಂಬ
ಅರಿವೆಂಬ ಗೆಲುವೊಳಗೆ
ಸದಾ ಇರಲಿ ಬಿಂಬ
ಹೆಜ್ಜೆ ಹೆಜ್ಜೆಗೂ
ನಿಲುವು ತಾಳಿದ ಬದುಕು
ಅಡಿಪಾಯ ಸೂತ್ರಕೆ
ನಲಿವಾಗುವ ಜೀವಿತ
–ನಾಗರಾಜ ಬಿ.ನಾಯ್ಕ, ಕುಮಟಾ.
ಪ್ರಕೃತಿಯನ್ನು ಪ್ರಶಂಸುತ್ತಲೇ ಬದುಕಿನ ಅಡಿಪಾಯದ ಸೂತ್ರವನ್ನೂ ಹೇಳಿ ಬಿಟ್ಟ ಚಂದದ ಕವಿತೆ.
ಧನ್ಯವಾದಗಳು ತಮ್ಮ ಓದಿಗೆ
ಪ್ರಕೃತಿಯ ವರ್ಣನೆಯಲ್ಲಿ ಬದುಕಿನ ಅನಾವರಣ.
ಚಂದದ ಕವಿತೆ.
ಆಪ್ತ ಓದಿಗೆ ಧನ್ಯವಾದಗಳು
ಪ್ರಕೃತಿ ಯ ವರ್ಣನೆ ಹಾಗೇ ಬದುಕಿನತ್ತ ಒಂದು ಚಿತ್ತ ಚೆನ್ನಾಗಿದೆ ಸಾರ್
ಧನ್ಯವಾದಗಳು…..
Beautiful
ಧನ್ಯವಾದಗಳು
ಗೂಡಿನ ಹಾಡು ಲಯಬದ್ಧ; ಚಿಂತನಶೀಲ.
ಎಲ್ಲ ಜೀವಿಗಳ ಬದುಕಿಗನ್ವಯಿಸಿದ ಸಾರ್ವತ್ರೀಕರಣ.
ವೀಕ್ಷಣ, ಸಂವೇದನ, ಸಂತುಲನ ಈ ಮೂರೂ
ಈ ಕವಿತೆಯ ಸಾಲುಗಳಲಿ ಸುಪ್ತ; ಬಾಯಿ ಬಿಟ್ಟು
ಓದಿಕೊಂಡರೆ ಆಪ್ತ. ಚೆನ್ನಾಗಿದೆ ಸರ್. ಅಭಿನಂದನೆ.
ಧನ್ಯವಾದಗಳು ಸರ್
ಭಾವಪೂರ್ಣ ಕವನ ಚೆನ್ನಾಗಿದೆ.
ಧನ್ಯವಾದಗಳು