Daily Archive: October 19, 2023
ವಿಶ್ವವಿಖ್ಯಾತ ಮೈಸೂರು ದಸರಾ ಬಂದಿದೆ. ನಗರದ ಅನೇಕ ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ!. ಆಹಾರಮೇಳ, ಪುಸ್ತಕ ಮೇಳ, ಫಲ ಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ನಾಡು- ನುಡಿ ಪ್ರತಿಬಿಂಬಿಸುವ ಚಿತ್ರಕಲೆಗಳು, ಜೊತೆಗೆ ಅನೇಕ ಕಲಾವಿದರುಗಳಿಗೆ ವೇದಿಕೆಯಾಗಿದೆ. ಪ್ರವಾಸಿಗರ ಸ್ವರ್ಗ, ರಾಜರಾಳಿದ ನಾಡು, ಮೈಸೂರಿನ ಅಧಿದೇವತೆ ಚಾಮುಂಡಿ, ಮೈಸೂರಿನ...
ಒಬ್ಬರಾಜನು ತನ್ನ ಗುರುಗಳಾದ ಸಂನ್ಯಾಸಿಯೊಬ್ಬರನ್ನು ತನ್ನ ಅರಮನೆಗೆ ಬರಬೇಕೆಂದು ಆಗಾಗ ಒತ್ತಾಯಿಸುತ್ತಲೇ ಇದ್ದನು. ಸಂನ್ಯಾಸಿಗೆ ರಾಜವೈಭವವನ್ನು ನೋಡಬೇಕೆಂಬ ಕುತೂಹಲವಿಲ್ಲದಿದ್ದರೂ ಶಿಷ್ಯನನ್ನು ತೃಪ್ತಿಪಡಿಸುವ ಸಲುವಾಗಿ ಒಮ್ಮೆ ಅರಮನೆಗೆ ತೆರಳಿದರು. ರಾಜನು ತನ್ನ ಅರಮನೆಯ ಆಸ್ಥಾನದ ವೈಭವ, ಪೀಠೋಪಕರಣಗಳು, ಗಜಸಂಪತ್ತು, ಗೋಸಂಪತ್ತು, ಅಶ್ವಸಂಪತ್ತು, ಎಲ್ಲವನ್ನೂ ಸಂನ್ಯಾಸಿಗೆ ತೋರಿಸಿದ. ಆದರೂ ಗುರುವಿನ...
ಉತ್ತರ ಐರ್‌ಲ್ಯಾಂಡಿನ ಕಡಲ ಕಿನಾರೆಯಲ್ಲಿ ಕಂಡು ಬರುವ ಚಪ್ಪಟೆಯಾದ ಆರುಭುಜದ ಶಿಲೆಗಳು ಒಂದು ಪ್ರಾಕೃತಿಕ ವಿಸ್ಮಯವೇ ಸರಿ. ಕರ್ನಾಟಕದ ಉಡುಪಿಯಲ್ಲಿರುವ ಮಲ್ಪೆ ಬೀಚಿನ ಬಳಿ ಇರುವ ಸೇಂಟ್ ಮೇರೀಸ್ ದ್ವೀಪದಲ್ಲಿಯೂ ಇಂತಹದೇ ಆರುಮೂಲೆಯುಳ್ಳ ಎರಡು ಅಡಿ ವಿನ್ಯಾಸವುಳ್ಳ ಶಿಲೆಗಳು ಸಮುದ್ರ ತೀರದಲ್ಲಿ ರಾಶಿ ರಾಶಿ ಬಿದ್ದಿವೆ. ರೇಖಾಗಣಿತದ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಜೂನ್ 11ರ ಮಂಗಳವಾರ…ಬೆಳಗ್ಗೆ ಹನ್ನೊಂದು ಗಂಟೆಯ ಸಮಯ… ಹೊಟ್ಟೆ ತುಂಬಿಸಿಕೊಂಡು ಮಹಾನಗರ ವಾಷಿಂಗ್ಟನ್ ಡಿ.ಸಿ. ಯನ್ನು ಸುತ್ತಲು ಹೊರಟಾಗ ನನಗೋ ವಿಶೇಷವಾದ ಕುತೂಹಲ… ಯಾಕೆಂದರೆ, ಹಿಂದಿನ ದಿನ ತಡವಾದ್ದರಿಂದ ಹಾಗೂ ಕತ್ತಲಾದ್ದರಿಂದ ಯಾವುದನ್ನೂ ಸರಿಯಾಗಿ ವೀಕ್ಷಿಸಲು ಆಗಿರಲಿಲ್ಲ. ಈಗಲಾದರೂ ಮನ:ಪೂರ್ತಿ ವೀಕ್ಷಿಸಬಹುದಲ್ಲಾ ಎಂಬ...
ಭಾರತೀಯ ಆಸ್ತಿಕ ಸಮಾಜ ಜನಸಾಮಾನ್ಯರನ್ನು ಜಾಗೃತವಾಗಿರಿಸಲು ಶ್ರಾವ್ಯ ಮಾಧ್ಯಮವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಅದು ಹಾಡಿಕೆ ಮತ್ತು ಕಥನ ಎರಡನ್ನೂ ಒಳಗೊಳ್ಳುವುದರ ಮೂಲಕ ಕೇಳುಗರಿಗೆ ವಿಷಯದಲ್ಲಿ ಮನಸ್ಸನ್ನು ಇಡಲು ಮತ್ತು ಕೇಳಿದುದನ್ನು ವಿಶ್ಲೇಷಣೆ ಮಾಡಲು ಪ್ರೇರಣೆಯನ್ನು ಕೊಡುತ್ತದೆ. ಸಾಮಾನ್ಯವಾಗಿ ಈ ಶ್ರಾವ್ಯ ಮಾಧ್ಯಮ ಹರಿಕಥೆಯಾಗಿರುವುದೇ ಹೆಚ್ಚು. ಕರ್ನಾಟಕದ ಕರಾವಳಿಯ...
ಎಲ್ಲವನ್ನೂ ಬಲ್ಲ ಸಕಲಗುಣ ಸಂಪನ್ನರೆಂದು ಮಾನವರಿಗೆ ಕರೆಸಿಕೊಳ್ಳುವುದಕ್ಕೆ ಕಷ್ಟ ಸಾಧ್ಯವೇ ಸರಿ. ಯಾರೂ ಪರಿಪೂರ್ಣರಾಗಲಾರರು. ಹಾಗೆಯೇ ಸಮಯ,ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ; ಬಾಲ್ಯದಲ್ಲೇ ಮಂದಬುದ್ಧಿಯೆನಿಸಿಕೊಂಡವರು ಮುಂದೆ ಚುರುಕು ಬುದ್ಧಿಯವರಾಗಬಹುದು. ಚುರುಕಿನವರು ಬುದ್ಧಿಹೀನರೂ ಸೋಮಾರಿಗಳೂ ಆಗಬಹುದು, ಉತ್ಸಾಹಿಯಾಗಿದ್ದವ ನಿರುತ್ಸಾಹಿಯಾಗಬಹುದು. ಅಂತೆಯೇ ಅರೆಹುಚ್ಚನಂತೆ ಕಾಣಿಸುತ್ತ ಅಪ್ರಯೋಜಕನೆನಿಸಿದವನೊಳಗೆ ಆತ್ಮಜ್ಞಾನ ತುಂಬಿದ್ದು, ಮುಂದೆ ಸಮಾಜೋದ್ಧಾರಕನಾಗಬಹುದು....
ನಿಮ್ಮ ಅನಿಸಿಕೆಗಳು…