Monthly Archive: August 2023

4

ಸ್ವಾತಂತ್ರ್ಯ ಮೀಮಾಂಸೆ

Share Button

ಸ್ವಾತಂತ್ರ್ಯ ಎಂದಾಗ ನೆನಪಿಗೆ ಬಂದದ್ದು ನಮ್ಮ ಮನೆಗೆ ಸ್ನೇಹಿತರೊಬ್ಬರು ಬಂದಾಗ ನಡೆದ ಪ್ರಸಂಗ. ನಮ್ಮ ಮನೆಗೆ ಆಕಸ್ಮಿಕವಾಗಿ ಸ್ನೇಹಿತರೊಬ್ಬರು ಬಂದರು. ಅವರಿಗೆ ತಮಗೆ ಡಯಾಬಿಟೀಸ್‌  ಇದೆ ಎನ್ನುವುದು ಕೆಲವು ದಿನಗಳ ಹಿಂದೆ ಮಾತ್ರ ಗೊತ್ತಾಗಿತ್ತು. ಸ್ವಲ್ಪ ಸಕ್ಕರೆ ಹಾಕಿ ಟೀ ಕೊಡಿ ಎಂದು ಪದೇ ಪದೇ ಸೂಚನೆ...

7

ನ್ಯಾನೋ ಕತೆಗಳು : ಹಸಿವು, ಅಪರಿಚಿತ

Share Button

1.ಹಸಿವು “ಇಲ್ಲ ಇನ್ನು ಈ ರೀತಿ ಸಾಗುವುದಿಲ್ಲ . ಎಳೆ ಬಾಣಂತಿ ಹೆಂಡತಿ ಮೊದಲ ಮಗುವಿನ ಹಸಿದ ಮುಖ ನೋಡಲಾಗುತ್ತಿಲ್ಲ.  ಎಲ್ಲಿ ಹೋದರೂ ಹತ್ತು ರೂಪಾಯಿ ಸಾಲ ಹುಟ್ಟುತ್ತಿಲ್ಲ. ಏನು ಮಾಡಲಿ.”  ತಲೆಕೆಟ್ಟು ಹೋಗಿತ್ತು ಸುರೇಶನಿಗೆ.  ” ಅಮ್ಮ ಹಸಿವೂ”  ಮಗಳ ಆಕ್ರಂದನ ಇನ್ನೂ ಕೇಳಲಾಗಲಿಲ್ಲ.  ರೂಮಿನ...

4

ಸಮಕಾಲೀನ ಮೌಲ್ಯಗಳಿಗೂ ಸ್ಪಂದಿಸುವ ಕೃತಿ : “ಗೌರಿ ಕಲ್ಯಾಣ”

Share Button

ತೆಲುಗಿನಲ್ಲಿ ಪುಟ್ಟಗಂಟಿ ಗೋಪಿಕೃಷ್ಣರ  “ಗೌರಿ ಕಳ್ಯಾಣಂ” ಕಾದಂಬರಿಯನ್ನು  ಕನ್ನಡಕ್ಕೆ ಅನುವಾದಿಸಿರುವವರು ಶ್ರೀಮತಿ ಟಿ.ಎಸ್.ಲಕ್ಷ್ಮೀದೇವಿಯವರು. ತೆಲುಗು ಮನೆ ಮಾತಾಗಿರುವ ಲಕ್ಷ್ಮೀದೇವಿಯವರು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಅನನ್ಯ ಕೊಡುಗೆ ಸಲ್ಲಿಸಿರುವ ಹಿರಿಯ ಸಾಹಿತಿಗಳಾದ ದಿ.ಟಿ.ಎಸ್.ವೆಂಕಣ್ಣಯ್ಯನವರ ಸೋದರ  ದಿ.ತ.ಸು. ಶಾಮರಾಯರ ಮಗಳು.  ಹೀಗಾಗಿ ಕನ್ನಡ ಭಾಷಾ ಶ್ರೀಮಂತಿಕೆ ಇವರಿಗೆ ಸಹಜವಾಗಿ ಮೈಗೂಡಿದೆ....

6

ಕಾದಂಬರಿ : ‘ಸುಮನ್’ – ಅಧ್ಯಾಯ 12

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಸಂದರ್ಶನ “ಅಮ್ಮ, ಅಪ್ಪ ಎಲ್ಲಿ?” ಮಗಳ ಧ್ವನಿ ಕೇಳಿ ರಾಜಲಕ್ಷ್ಮಿ ತಿರುಗಿದರು. ಕಣ್ಣು ಕೆಂಪಾಗಿ ಬಾಡಿದ ಸುಮನ್ ಮುಖದಲ್ಲಿ ಏನೋ ಒಂದು ನಿರ್ಧಾರ. “ವಾಕಿಂಗ್ ಹೋಗಿದಾರೆ ಮರಿ” ಕಕ್ಕುಲತೆಯಿಂದ ಉತ್ತರಿಸಿದರು. ಕಾಫಿ ಲೋಟ ಹಿಡಿದು ಟಿವಿ ಮುಂದೆ ಕುಳಿತಳು. ಸುಮನ್ ಮುಂದಿನ ಹೆಜ್ಜೆಯ ಬಗ್ಗೆ...

10

ಅಂತ್ಯ ಸಂಸ್ಕಾರಕ್ಕೆ ಅಡ್ವಾನ್ಸ್ ಬುಕಿಂಗ್ !

Share Button

ಸೂರ್ಯ ಮುಳುಗುತ್ತಿದ್ದ. ಸ್ಕಾಟ್‌ಲ್ಯಾಂಡಿನಲ್ಲಿ ನೆಲೆಸಿದ್ದ ಮಗನ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದೆ. ರಾತ್ರಿ ಹತ್ತಾಗಿತ್ತು. ಇಲ್ಲಿ ಜುಲೈ ತಿಂಗಳಿನಲ್ಲಿ ಮುಂಜಾನೆ ನಾಲ್ಕಕ್ಕೇ ಉದಯಿಸುವನು ರವಿ, ರಾತ್ರಿ ಹತ್ತಕ್ಕೆ ನಿರ್ಗಮಿಸುವನು. ಹಾಗಾಗಿ ರಾತ್ರಿ ಹತ್ತಕ್ಕೆ ಮುಳುಗುತ್ತಿರುವ ಭಾಸ್ಕರನನ್ನು ನೋಡುತ್ತಿರುವಾಗ, ಟಿ.ವಿ.ಯಲ್ಲಿ ವಿಚಿತ್ರವಾದ ಜಾಹಿರಾತೊಂದು ಕಣ್ಣಿಗೆ ಬಿತ್ತು ಬನ್ನಿ, ನಿಮ್ಮ...

14

ಜೀವಿಗಳ ಹೃನ್ಮನಗಳನ್ನು ಬೆಸೆಯುವ ಅಪೂರ್ವ ಕೊಂಡಿ ಸ್ನೇಹ.

Share Button

ಸ್ನೇಹ ಎಂಬ ಎರಡು ಅಕ್ಷರದ ಪದವು ವಿಶಾಲವಾಗಿ ಹರಡಿಕೊಂಡಿರುವ ಆತ್ಮೀಯ ಸಂಬಂಧಗಳನ್ನು ಪರಿಚಯಿಸುತ್ತದೆ. ವಿಜ್ಞಾನದ ಮಾಹಿತಿಯ ಪ್ರಕಾರ ಶುದ್ಧವಾದ ನೀರಿಗೆ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ ಎಂದೆಲ್ಲ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ಶುದ್ಧ ಸ್ನೇಹಸಂಬಂಧಕ್ಕೆ ಲಿಂಗಭೇದ, ವರ್ಣಭೇದ, ಸಿರಿತನ-ಬಡತನದ ಭೇದ, ಸಾಮಾಜಿಕ ಅಂತಸ್ಥುಗಳ ಭೇದ ಯಾವುವೂ ಇಲ್ಲ. ಅದಕ್ಕೆ...

14

ಮಹಾವೀರ ಜಸ್ವಂತ್‌ಸಿಂಗ್ ರಾವತ್

Share Button

ನವೆಂಬರ್ ಒಂಭತ್ತು 2022 ಬುಧವಾರ ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನ. ಅಂದು ಭಾರತ ಮಾತೆಯ ಮಹಾವೀರ ಪುತ್ರ ಜಸ್ವಂತ್ ಸಿಂಗ್ ರಾವತ್ ಅವರ ಸ್ಮರಣೆಯ ಸ್ಥಳ ಜಸವಂತಗಢ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ. ಭಾವನೆಗಳ ಮಹಾಪೂರದಲ್ಲಿ ಕೊಚ್ಚಿ ಹೋದೆ. ಅಲ್ಲಿ ಕಾಲಿಟ್ಟ ಕೂಡಲೇ ಕಣ್ಣುಗಳು...

13

ಗಝಲ್

Share Button

ಸೋಗೆಮನೆ ಸೋರಿದರೂ ಸೋಲದೆ ಬಾಳ ಕಟ್ಟಿರುವೆಯಲ್ಲ ನೀನುಸೋನೆಮಳೆ ಸುರಿದರೂ ತಪ್ಪದೆ ಗುರಿ ಮುಟ್ಟಿರುವೆಯಲ್ಲ ನೀನು ಬುವಿಯಲ್ಲಿ ಬವಣೆ ನರಕದಿಂದ ಮುಕ್ತಿ ಯಾರಿಗಿದೆ ಹೇಳುನವೆಯದೆ ಸುಖವುಂಟೇ ಅಳುಕದೆ ಹೆಜ್ಜೆ ಇಟ್ಟಿರುವೆಯಲ್ಲ ನೀನು ಸಪ್ತವರ್ಣದ ಮಳೆಬಿಲ್ಲ ನೋಡದೆ ಮುಚ್ಚಿಕೊಳ್ಳುವವರುಂಟೆ ಕಣ್ಣಸುಪ್ತಮನದ ಮಾತಕೇಳಿ ಅಂಜದೆ ಕನಸ ಮೆಟ್ಟಿರುವೆಯಲ್ಲ ನೀನು ಇಷ್ಟಗಳ ಬದಿಸರಿಸಿ...

6

ಕಾದಂಬರಿ : ‘ಸುಮನ್’ – ಅಧ್ಯಾಯ 11

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಮನ್ : ಗ್ರಹಣ ಅಂದು ಸಂಜೆಯಾದರೂ ಸುಮನ್ ಅವಳ ಕನಸಿನಿಂದ ಹೊರ ಬಂದಿರಲಿಲ್ಲ. ಅದನ್ನು ಮೆಲಕು ಹಾಕಿ ಸಂತೋಷಪಡುತ್ತಿದ್ದಳು. ಇಲ್ಲಿಯವರೆಗೂ ದೂರ ಓಡುತ್ತಿದ್ದ ಕಂದ ಅಂದಿನ ಕನಸಿನಲ್ಲಿ ಅವಳ ಕೈಗೆ ಸಿಕ್ಕಿ ಬಿದ್ದಿದ್ದ. ಮಗುವನ್ನು ಮುದ್ದಾಡಿದ್ದಳು ಕನಸಿನಲ್ಲಿ. ಫೋನ್ ಟ್ರಿನ್‍ಗುಟ್ಟಿತು. ಎತ್ತಿ “ಹಲೋ” ಎಂದಳು. ...

6

ಅವಿಸ್ಮರಣೀಯ ಅಮೆರಿಕ – ಎಳೆ 55

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹಾರ್ಸ್ ಶೂ ಜಲಪಾತದತ್ತ ತೇಲುತ್ತ …. ಕೇವಲ ಅರ್ಧಗಂಟೆಯ ರಸ್ತೆ ಪಯಣದಲ್ಲಿ ನಾವು ನಯಾಗರದ ಸರಹದ್ದಿನ ಬಳಿ ತಲಪಿಯಾಗಿತ್ತು. ಅತ್ಯಂತ ಕುತೂಹಲ… ಮೈಯೆಲ್ಲಾ ಪುಳಕ…ಹೇಳಲಾಗದ ಸಂತಸದ ಅನುಭವ! ನಾವು ಪಯಣಿಸುತ್ತಿದ್ದ ರಸ್ತೆಯ ಎಡ ಪಕ್ಕಕ್ಕೆ ಇದ್ದಂತಹ ಅತ್ಯಂತ ವಿಶಾಲವಾದ ನದಿಯ ಹರಿವು  ಮುಂದಕ್ಕೆ ಚಲಿಸುತ್ತಿದ್ದಂತೆ ...

Follow

Get every new post on this blog delivered to your Inbox.

Join other followers: