Monthly Archive: May 2023
ದೇವರನಾಡಲ್ಲಿ ಒಂದು ದಿನ – ಭಾಗ 6
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಗದ ಚಕ್ಷು ನಿದಿರೆಗೆ ಜಾರಿದ ಸೂರ್ಯನ ತಾಪದಿಂದ ಬಳಲಿ ಬೆಂಡಾದ ಹೆಂಗಳೆಯರ ಮೊಗವೆಲ್ಲಾ ತಲೆತಗ್ಗಿಸಿದ ಸೂರ್ಯಕಾಂತಿಯ ಹೂವಂತಾಗಿದ್ದವು. ನಾವು ಅಂದು ಉಳಿದುಕೊಳ್ಳುವ ಜಾಗಕ್ಕೆ ಕಾತರಿಸಿದೆವು. ಅಂತೂ ಇಂತೂ ಹೋಂ ಸ್ಟೇ ಬಂತು. ಮಾನತ್ ವಾಡಿಯದಲ್ಲಿ ಹೋಂ ಸ್ಟೇ ಮಾಡಲಾಗಿತ್ತು. ಐದೈದು ಜನಕ್ಕೆ ಒಂದು ಕೋಣೆಯ...
ತಡ ಮಾಡು; ಪವಾಡ ನೋಡು
ಹತ್ತು ನಿಮಿಷ ನಿಧಾನಿಸು, ಸುಮ್ಮನಿದ್ದು ಧ್ಯಾನಿಸು;ನಿನ್ನ ಕುರಿತು ಬಂದ ಮಾತಿಗೆ ; ಮಂದಿ ಮನಸಿಗೆ ! ಹರಿವ ನೀರನು ನೆನಪಿಸು, ಕಸಕಡ್ಡಿ ತೇಲುವ ತಾಮಸವ ಗಮನಿಸುನಿನ್ನನೇ ‘ಲೋಕಿʼಸುವ, ಅವಲೋಕಿಸುವ ಏಕಾಗ್ರತೆಗೆ ; ಜಾಗ್ರತೆಗೆ ! ಹತ್ತು ನಿಮಿಷ ನಿಧಾನಿಸು, ನೀ ಪ್ರತಿಕ್ರಿಯಿಸುವ ಮುನ್ನ ;ಪ್ರತಿಬಿಂಬಿಸುವ ನಿನ್ನ ಕನ್ನಡಿ...
‘ಮಯೂರವರ್ಮ ಮೈದಳೆದಿದ್ದಾನೆ.’
ಹೌದು..! ಲೇಖಕ ಸಂತೋಷಕುಮಾರ ಮೆಹಂದಳೆಯವರ ವೈಜಯಂತಿಪುರ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಸಾಮ್ರಾಜ್ಯವಾದ ಕದಂಬ ರಾಜ ಮನೆತನದ ಸ್ಥಾಪಕ ಮಯೂರವರ್ಮನ ಸಾಹಸಗಾಥೆ.. ಈ ಕೃತಿಯನ್ನು ಓದುತ್ತಿದ್ದರೆ ಮಯೂರನ ಜೀವನದ ನಿಜ ಘಟನೆಗಳು ಕಣ್ಣ ಮುಂದೆ ಕಟ್ಟಿದಂತೆ, ಮಯೂರನೇ ಮೈದಳೆದು ಕಣ್ಣ ಮುಂದೆ ಬಂದು ತನ್ನ ಕಥೆಯನ್ನು ತಾನೇ...
ಗೌತಮ ಋಷಿಯ ಗಣ್ಯ ಗುಣ
‘ದಾನ’ ಎಂಬುದು ಜೀವನ ಮೌಲ್ಯಗಳಲ್ಲಿ ಒಂದು. ‘ಇದ್ದಾಗ ದಾನವನು ಮಾಡದವ ಹೊಲೆಯ’ ಎಂದು ಸರ್ವಜ್ಞ ವಚನವಿದೆ. ದಾನಗಳಲ್ಲಿ ಹಲವು ವಿಧ. ಅಶನ,ವಸನ, ವಸತಿ,ಭೂಮಿ,ಧನ, ಕನಕ, ವಿದ್ಯೆ ಹೀಗೆ ಅವರವರ ಶಕ್ತಿ ಭಕ್ತ್ಯಾನುಸಾರ ದಾನ ಮಾಡಬಹುದು. ಆದರೆ ಎಲ್ಲಾ ದಾನಗಳಿಂದಲೂ ಅನ್ನದಾನವೇ ಶ್ರೇಷ್ಠವೂ ಸರಳವೂ ಆಗಿದೆ. ಯಾಕೆಂದರೆ ಹಸಿದು...
ವಾಟ್ಸಾಪ್ ಕಥೆ 18 : ಜವಾಬ್ದಾರಿ
ಒಬ್ಬ ವಿದ್ಯಾವಂತ ಯುವಕ ಒಂದು ಪ್ರಸಿದ್ಧವಾದ ಕಂಪೆನಿಯ ಕೆಲಸಕ್ಕೆ ಸಂದರ್ಶನಕ್ಕಾಗಿ ಬಂದಿದ್ದ. ಅವನು ತುಂಬ ಬುದ್ಧಿಶಾಲಿ. ಮೇಧಾವಿ. ಆಯ್ಕೆ ಸಮಿತಿಯವರು ಏರ್ಪಡಿಸಿದ್ದ ಎಲ್ಲ ಪರೀಕ್ಷೆಗಳಲ್ಲೂ ಒಳ್ಳೆಯ ರೀತಿಯಲ್ಲಿ ತೇರ್ಗಡೆಯಾದನು. ಇನ್ನು ಅಂತಿಮವಾಗಿ ಮೌಖಿಕ ಪರೀಕ್ಷೆ ಮಾತ್ರ ಬಾಕಿಯಿತ್ತು. ಇದರಲ್ಲಿ ಕಂಪೆನಿಯ ಮುಖ್ಯಸ್ಥರೇ ಅಭ್ಯರ್ಥಿಗೆ ಪ್ರಶ್ನೆಗಳನ್ನು ಕೇಳಿ ನಿರ್ಧರಿಸುತ್ತಿದ್ದರು....
ಜನಪದ ಸಾಹಿತ್ಯ-ಕಥನಗೀತೆ-ದೃಢವತಿ ಸಂಪನ್ನೆ
ಜನಪದ ಖಂಡಕಾವ್ಯ: ಡಾ. ಜೀಶಂಪ ರವರು ಸಂಪಾದಿಸಿದ, ಚೇತನ ಬುಕ್ ಹೌಸ್, ಮೈಸೂರು ಇವರು 2002 ರಲ್ಲಿ ಪ್ರಕಟಿಸಿದ ಕೃತಿ ”ಜನಪದ ಖಂಡಕಾವ್ಯ”. ಜನಪದ ಸಾಹಿತ್ಯದ ಬಹು ಮುಖ್ಯ ಅಂಗ ಕಥನ ಗೀತೆಗಳು; ಇವು ಹೆಣ್ಣುಮಕ್ಕಳು ತಮ್ಮ ಬದುಕಿಗೆ ಹತ್ತಿರವಾದ, ತಮ್ಮ ಹೃದಯದ ರಾಗಭಾವಗಳಿಗೆ ಸಮೀಪವರ್ತಿಯಾದ ಸಂಗತಿಗಳನ್ನು...
ನಾನೂ ನಾಗಲಿಂಗಪುಷ್ಪವೂ
ದಿನವೂ ಭೇಟಿಯಾಗುವ, ಜೊತೆಯಲ್ಲೇ ಇರುವ ವ್ಯಕ್ತಿಗಳ ಸಾಂಗತ್ಯ ಬೀರುವ ಪ್ರಭಾವ ಒಂದು ರೀತಿಯದಾದರೆ ಎಂದೋ ಒಮ್ಮೆ ಬಾಳಿನಲ್ಲಿ ಎದುರಾಗುವ ಕೆಲವು ಅನಿರೀಕ್ಷಿತ ವಸ್ತು ವಿಷಯ ವ್ಯಕ್ತಿಗಳು ಬೀರುವ ಪ್ರಭಾವದ ವೈಶಿಷ್ಟ್ಯವೇ ಬೇರೆ . ಜೀವನದಲ್ಲಿ ಬಾಲ್ಯವೆಂದರೆ ಹೂವಿನ ಹಾಗೆ ಸ್ನಿಗ್ಧ ಕೋಮಲ ಅನ್ನುತ್ತಾರೆ . ಹಾಗೆ ನನ್ನ...
ಮಲೆನಾಡಿನ ಜೀವನಾಡಿಗಳು ;ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅಂಕ-5
ಕಲ್ಯಾಣ ಕರ್ನಾಟಕದ ಜೀವನಾಡಿಯಾದ ನದಿ ತುಂಗಭದ್ರಾ. ಮಲೆನಾಡಿನ ಪಶ್ಚಿಮಘಟ್ಟಗಳಲ್ಲಿ ಜನಿಸಿದವಳಾದರೂ ಬಯಲು ಸೀಮೆಯತ್ತಲೇ ಇವಳ ಒಲವು. ಶಿವಮೊಗ್ಗಾದ ಸನಿಹದಲ್ಲಿ ಅವಳಿ ಸೋದರಿಯರಾದ – ತುಂಗ ಮತ್ತು ಭದ್ರೆಯರು ಕೂಡುವ ಪುಣ್ಯಕ್ಷೇತ್ರವೇ ಕೂಡಲಿ. ಇವಳು ಸಾಗುವ ಹಾದಿ ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಹಲವು ತಿರುವುಗಳನ್ನು ಪಡೆಯುತ್ತಾ ಸಾಗುತ್ತಾಳೆ. ದಾರಿಯುದ್ದಕ್ಕೂ...
ದೇವರನಾಡಲ್ಲಿ ಒಂದು ದಿನ – ಭಾಗ 5
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೈ ಬೀಸಿ ಕರೆವ ಕುರುವಾ ಪ್ರಕೃತಿ ಸೌಂದರ್ಯಕ್ಕೆ ಪ್ರತೀ ಪ್ರದೇಶವೂ ಹೇಳಿಮಾಡಿಸಿದ್ದು. ನಮಗೆ ಸವಿಯುವ ಮನಸ್ಸು ಮತ್ತು ಆಂತರಿಕ ಕಣ್ಣು ಎರಡೂ ಮುಖ್ಯ. ನಮ್ಮ ಊರಿನ ಹೊರಗಿನ ದಿಬ್ಬದಲ್ಲೊ, ಮನೆಯ ಮೇಲೆ ನಿಂತರೆ ಕಾಣುವ ಸೂರ್ಯೋದಯ, ಸೂರ್ಯಾಸ್ತ ಎರಡೂ ವಿಶೇಷ ಅನಿಸಲ್ಲ. ಏಕೆಂದರೆ ದಿನನಿತ್ಯ ನೋಡುವ ದೃಶ್ಯಗಳು...
ನಿಮ್ಮ ಅನಿಸಿಕೆಗಳು…