Monthly Archive: March 2023

12

ಪರೀಕ್ಷೆಯೆಂಬ ಪೆಡಂಭೂತ.

Share Button

ಮಧ್ಯಮ ವರ್ಗದ ಕುಟುಂಬಗಳಲ್ಲಿ ತಂದೆತಾಯಿಗಳು ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂದು ಬಯಸುವುದು ಸಹಜ. ಅವರಿಗೆ ಮುಂದೆ ಮಕ್ಕಳಿಗೆ ಜೀವನದಲ್ಲಿ ಒಂದು ಭದ್ರತೆ ಇದರಿಂದಾಗಿ ಸಿಗುತ್ತದೆ ಎಂಬ ಆಲೋಚನೆ. ಹೆಣ್ಣುಮಕ್ಕಳಿಗೆ ವಿದ್ಯಾವಂತ ವರ ದೊರಕಬಹುದೆಂಬ ಆಸೆ. ಆದರೆ ಮನೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವರನ್ನೆಲ್ಲ ವಿದ್ಯಾಭ್ಯಾಸ ಮಾಡಿಸಲು...

20

ಅಂತರ್ಜಲಕ್ಕಾಗಿ ಭೂಮಿಯ ಒಳಕ್ಕೆ ಚಾಚಿದ ಹಸ್ತ.

Share Button

ಬಾವಿ ಎಂದಕೂಡಲೇ ಕಣ್ಣಮುಂದೆ ತರಹೇವಾರಿ ಬಾವಿಗಳ ಚಿತ್ರ ಮೂಡುತ್ತದೆ. ಸೇದುವ ಬಾವಿ, ಏತದ ಬಾವಿ, ಕಪಿಲೆ ಬಾವಿ, ಪಂಪ್‌ಸೆಟ್ ಬಾವಿ. ಕೊಳವೆ ಬಾವಿ ಇತ್ಯಾದಿ. ಇವುಗಳಿಂದ ಕುಡಿಯಲು ಮನೆಬಳಕೆಗೆ ನೀರು, ವ್ಯವಸಾಯಕ್ಕೆ ನೀರು ದೊರೆಯುತ್ತದೆ. ಇಷ್ಟೆಲ್ಲ ಉಪಯೋಗಗಳು ಇರುವ ಬಾವಿಯ ಪರಿಕಲ್ಪನೆ ಮನುಷ್ಯನಿಗೆ ಆದಿಯಲ್ಲಿ ಹೇಗೆ ಬಂದಿರಬಹುದು?...

7

ತ್ರಿಮೂರ್ತಿ ರೂಪ ದತ್ತಾತ್ರೇಯ

Share Button

ಅಧಿಕಾರ ಮತ್ತು ಸದವಕಾಶಗಳು ಸಿಕ್ಕಿದಾಗ ಹೆಣ್ಣು ಮಕ್ಕಳನ್ನು ಸತ್ವ ಪರೀಕ್ಷೆಗೊಡ್ಡುವುದು, ಪಾತಿವ್ರತ್ಯ ಪರೀಕ್ಷಿಸುವುದು ಮೊದಲಾದ ದೃಷ್ಟಾಂತಗಳು ನಮ್ಮ ಪುರಾಣದಲ್ಲಿ ಸಾಕಷ್ಟು ಸಿಗುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪರೀಕ್ಷೆಗೊಳಗಾದವರಲ್ಲಿ  ಸೀತೆ ಮೊದಲಿನವಳಾದರೆ; ಅತ್ರಿ ಮುನಿಯ ಪತ್ನಿ ಅನಸೂಯಾ, ಹರಿಶ್ಚಂದ್ರನ ಹೆಂಡತಿ ಚಂದ್ರಮತಿ ಮೊದಲಾದವರು ನೆನಪಿಗೆ ಬರುತ್ತಾರೆ. ಕೆಲವೊಮ್ಮೆ ಹೀಗೆ ಪರೀಕ್ಷೆ...

17

ಇಂದು – ಅಂದು

Share Button

ಮಾರ್ಚ್‌ ತಿಂಗಳು ಬಂದಿತೆಂದರೆ ಎಲ್ಲೆಲ್ಲೂ ಪರೀಕ್ಷೆಗಳ ವಿಚಾರಗಳೇ ಹರಿದಾಡುತ್ತಿರುತ್ತವೆ.  ಮೊನ್ನೆ ನಮ್ಮವರು ಬೆಳಗಿನ ವಾಯು ವಿಹಾರ ಮುಗಿಸಿ ಬಂದಾಗ, ಜೊತೆಗೊಬ್ಬ ವ್ಯಕ್ತಿಯನ್ನೂ ಕರೆತಂದು, ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದಾಗ ನೆರೆಮನೆಯವರಾಗಿದ್ದ ನಾರಾಯಣ್‌ ಅಂಕಲ್‌ ಅವರ ಮಗ, ನರಹರಿ ಎಂದೂ, ಈಗ ಈ ಊರಿನಲ್ಲೇ ಇದ್ದಾರೆಂದೂ, ಸಿಟಿಯಲ್ಲಿರುವ ಬ್ಯಾಂಕಿನ ಶಾಖೆಯಲ್ಲಿ...

20

ತಿಂಡಿಯೊಂದು, ಘಮ ಹಲವು!

Share Button

ಮಾನವ ಬದುಕಬೇಕಾದರೆ ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ತುತ್ತಿನ ಚೀಲ ತುಂಬಿಸುವಾಗ ನಾಲಗೆಯ ರಸಗ್ರಂಥಿಗಳಿಗೂ ತೃಪ್ತಿಯಾಯಿತೆಂದರೆ ಮನಸ್ಸಿಗೇನೋ ಖುಷಿ.  ಅದರಲ್ಲೂ ಮನೆಯಲ್ಲೇ ತಯಾರಿಸಿದ ಊಟ, ತಿಂಡಿ ತಿನಸುಗಳ ಸೇವನೆ ಹೊಟ್ಟೆಗೂ ಹಿತ, ದೇಹಕ್ಕೂ ಒಳ್ಳೆಯದು. ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಸಹಾಯಕಾರಿಯೂ ಹೌದು. ಶುಚಿ, ರುಚಿ, ಬಣ್ಣ, ಘಮ...

7

‘ಸಾಂದೀಪನಿ’ ಮಹರ್ಷಿ ಅಪೇಕ್ಷಿಸಿದ ಗುರುದಕ್ಷಿಣೆ

Share Button

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು . ಹಾಗೆಯೇ ವಿದ್ಯಾರ್ಜನೆ ಮಾಡಿದ ಮೇಲೆ ಗುರುದಕ್ಷಿಣೆಯನ್ನೂ ಕೊಡಬೇಕು. ಗುರುವಿಲ್ಲದೆ ಅಥವಾ ಗುರುದಕ್ಷಿಣೆ ಇಲ್ಲದೆ ಕಲಿತ ವಿದ್ಯೆ ಸಿದ್ಧಿಸಲಾರದು. ಅಥವಾ ಪ್ರಯೋಜನಕ್ಕೆ ಬಾರದು. ಇದು ಸನಾತನದಿಂದಲೇ ಬಂದ ಅನುಭವ. ಇಂತಹ ಗುರುದಕ್ಷಿಣೆಯನ್ನು ಯಾವ ರೂಪದಿಂದಲೂ ಕೊಡುತ್ತಿದ್ದರು. ಧನ, ಕನಕ, ಭೂಮಿ, ವಸ್ತ್ರ...

11

ಮಹಿಳಾ ಶಕ್ತಿ

Share Button

ಸರ್ವ ಶಕ್ತಿ ಆದಿಶಕ್ತಿ ರೂಪ ಎಂದೆನ್ನ ಕರೆಯುವರುಇವಳೇ ಸಂಸಾರದ ಕಣ್ಣು ಬಾಳಿನ ದೀಪ ಎಂದೆಲ್ಲಾ ಹೊಗಳುವರು ಇವಳಿದ್ದ ಕಡೆ ಶಾಂತಿ ನಲಿವು ನೆಮ್ಮದಿ ಎಂದು ಕೊಂಡಾಡುವರು ಆದರೂ ಇಂದಿಗೂ ನಿಂತಿಲ್ಲ ನನ್ನ ಶೋಷಣೆಇನ್ನೂ ಕೊನೆಗೊಂಡಿಲ್ಲ ಎನ್ನ ತೀರದ ಬವಣೆ ಸರಿಸಮನಾಗಿ ದುಡಿಯಲು ಬಂದರೆ ನೂರಾರು ಅಡೆತಡೆಗಳುಮನೆಯವರಿಂದಲೇ ಮೂದಲಿಕೆಯ...

4

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

Share Button

ಸ್ತ್ರೀ ಪರ ಲೇಖನಗಳನ್ನು ಬರೆದು ಅವಳ ಮೇಲಾಗುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ಬರೆಯುವಾಗ ಗೆಳತಿ ಮಂಜುಳಾಕುಮಾರಿ ಈ ವಿಷಯದ ಬಗ್ಗೆ ನನ್ನ ಗಮನ ಸೆಳೆದಳು. ಗಂಡು ಮಕ್ಕಳ ಬಗೆಗಿನ ಪಕ್ಷಪಾತ ಭಾವನೆಯಾಗಲಿ ಮನೆಗೆ ಬಂದ ಸೊಸೆಯ ಮೇಲಿನ ಹಿಂಸಾತ್ಮಕ ಪ್ರವೃತ್ತಿಯಾಗಲಿ ಇವೆಲ್ಲವೂ ಮನೆಗಳಲ್ಲಿ ಬೇರೂರುವುದು ಮನೆಯ ವಾತಾವರಣದಿಂದ...

12

ವಾಟ್ಸಾಪ್ ಕಥೆ 12: ಆಸರೆ.

Share Button

ಎಂಟು ವರ್ಷದ ಬಾಲಕ ವಿವೇಕನನ್ನು ಅವನ ತಾಯಿ ಒಂದು ಪ್ರಶ್ನೆ ಕೇಳಿದಳು. ‘ಮಗೂ ನಮ್ಮ ದೇಹದ ಅತ್ಯಮೂಲ್ಯವಾದ ಭಾಗ ಯಾವುದು?’ ಬಾಲಕನು ಸ್ವಲ್ಪ ಹೊತ್ತು ಯೋಚಿಸಿ ‘ಕಿವಿಗಳು’ ಎಂದನು. ‘ಮಗೂ ಲೋಕದಲ್ಲಿ ಕೇಳಿಸಿಕೊಳ್ಳಲಾಗದ ನೂರಾರು ಜನರಿದ್ದಾರೆ. ಆದರೂ ಅವರು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಕಿವಿಗಳು ಅತ್ಯಮೂಲ್ಯವಾದವು...

10

ಯಮಕಿಂಕರರೊಂದಿಗೆ ಒಂದು ಕ್ಷಣ..

Share Button

ಅಂದು ಬಾನುವಾರ. ಮುಂಜಾನೆ ನನ್ನ ದಿನಚರಿಯಂತೆ ವಿನೋಭನಗರದ ಎ.ಪಿ.ಎಮ್.ಸಿ. ಯಾರ್ಡ್‌ನಲ್ಲಿ ವಾಕ್ ಹೊರಟಿದ್ದೆ. ಹಾದಿಯುದ್ದಕ್ಕೂ ದೊಡ್ಡ ದೊಡ್ಡ ಮರಗಳು, ತಂಪಾದ ಗಾಳಿ ಮನಸ್ಸಿಗೆ ಮುದನೀಡುತ್ತಿತ್ತು. ಇದ್ದಕ್ಕಿದ್ದಂತೆ ಕಟಕಟ ಎಂಬ ರೆಂಬೆ ಮುರಿಯುವ ಸದ್ದು ಕೇಳಿತು. ನಾನು ತಲೆಯೆತ್ತಿ ನೋಡಿದೆ, ಮರುಕ್ಷಣ ಮರದ ಮೇಲಿನಿಂದ ದೊಡ್ಡ ರೆಂಬೆಯೊಂದು ನನ್ನ...

Follow

Get every new post on this blog delivered to your Inbox.

Join other followers: