Monthly Archive: July 2022
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಭಾಗ್ಯಳು ಗೌರಿಯಮ್ಮನ ಆಣತಿಯಂತೆ ನಾಲ್ಕು ವರ್ಷಗಳ ಸತತ ಕಲಿಕೆ, ಅಭ್ಯಾಸಗಳನ್ನು ಮಾಡಿದ ನಂತರವೇ ವಿದ್ವತ್ ಪರೀಕ್ಷೆಯನ್ನು ತೆಗೆದುಕೊಂಡು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾಗಿ ಎಲ್ಲರಿಗೂ ಸಂತೋಷವನ್ನು ತಂದಿತ್ತಳು. “ನಾನು ನಿನಗೆ ಕಲಿಸಿದ್ದಕ್ಕೂ ಸಾರ್ಥಕವಾಯಿತು. ಇನ್ನು ಮುಂದೆ ನೀನೂ ಈ ವಿದ್ಯೆಯನ್ನು ಉಳಿಸಿಕೊಂಡು...
ಕಾಡಿನೊಳಗೆ ನುಗ್ಗಿ…. ಉತ್ತರ ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯವು ತನ್ನ ಅತಿ ದಟ್ಟ ರೆಡ್ ವುಡ್ ಕಾಡುಗಳಿಗೆ ಬಹಳ ಹೆಸರುವಾಸಿಯಾಗಿದೆ. ಇಲ್ಲಿಯ ಮೂಲನಿವಾಸಿಗಳು ವಾಸವಾಗಿದ್ದ ಕಾಲದಲ್ಲಿ ಅವರಿಂದಲೇ ರೂಪಿಸಲ್ಪಟ್ಟ ಈ ಅರಣ್ಯ ಪ್ರದೇಶವು 1850ರ ಕಾಲಘಟ್ಟದಲ್ಲಿ ಸುಮಾರು 20 ಲಕ್ಷ ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಬಹಳ ದಟ್ಟವಾಗಿ ಹಬ್ಬಿತ್ತು....
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸತ್ಯಾಗ್ರಹಿ-ವಿಜ್ಞಾನಿಗಳು: 1767ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ “Survey of India” ಎಂಬ ಸಂಸ್ಥೆಯನ್ನು ಆರಂಭಿಸಿತ್ತು. ಇಲ್ಲಿ ಗಣಿತಜ್ಞರಾಗಿ ನೇಮಕ ಆಗಿದ್ದವರು ರಾಧಾನಾಥ ಸಿಕ್ದರ್. ಈ ಸಂಸ್ಥೆಯು ಕಂಪೆನಿಯ ವಶದಲ್ಲಿದ್ದ ಭಾರತ ಉಪಖಂಡದ ಎಲ್ಲಾ ಭಾಗದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಿತು. ಈ ಸಂಸ್ಥೆಯಲ್ಲಿ ಕಷ್ಟಪಟ್ಟು...
ಮುಂಜಾನೆ ಆರೂವರೆಯಾಗಿತ್ತು. ಅಂದು ಶುಕ್ರವಾರವಾಗಿದ್ದರಿಂದ ಯೋಗಕೇಂದ್ರದಲ್ಲಿ ಧ್ಯಾನ ಮತ್ತು ಪ್ರಾಣಾಯಾಮದ ತರಗತಿ ನಡೆದಿತ್ತು. ಶೀಲ ಮೇಡಂ ಜೊತೆ ಎಲ್ಲರೂ ಒಟ್ಟಾಗಿ ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಪಕ್ಕದಲ್ಲಿ ಪಾರಿವಾಳವೊಂದು ಪಟಪಟನೇ ರೆಕ್ಕೆ ಬಡಿಯುತ್ತಾ ದೊಪ್ಪೆಂದು ಕೆಳಗೆ ಬಿತ್ತು. ತಕ್ಷಣವೇ ಜಯಮ್ಮ ಪಾರಿವಾಳವನ್ನು ಮಗುವಿನಂತೆ ಎತ್ತಿಕೊಂಡರು, ವೀಣಾ...
ರಾಜ್ಯಾಡಳಿತವು ಸುಗಮವಾಗಿ ಸಾಗಬೇಕಾದರೆ; ರಾಜನ ಮುಖ್ಯಮಂತ್ರಿಯು ಸರ್ವರೀತಿಯಿಂದಲೂ ಯೋಗ್ಯನಾಗಿರಬೇಕು. ರಾಜಸಭೆಯಲ್ಲಿ ಮಂತ್ರಿಯಾಗುವವನಿಗೆ ಕೆಲವಾರು ಯೋಗ್ಯತಾ ನಿಯಮಗಳಿರುತ್ತವೆ. ಅದು ಅವಶ್ಯವೂ ಹೌದು. ಸುಯೋಗ್ಯ ಮಂತ್ರಿಯು ಇರುವಲ್ಲಿ ರಾಜನು ಒಂದು ವೇಳೆ ಸುಗುಣರಹಿತನಾದರೂ ರಾಜ್ಯವು ಸುಭಿಕ್ಷವಾಗಿ ಪ್ರಜೆಗಳು ನಿಶ್ಚಿಂತೆಯಿಂದ ಬದುಕಬಹುದು. ಯಾಕೆಂದರೆ, ಮಂತ್ರಿ ಚಾಣಾಕ್ಷನಾದರೆ, ರಾಜನನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಚತುರನಾಗಿರುತ್ತಾನೆ....
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..“ಓ ಹೌದೇ ! ಮಹಡಿ ಮೇಲಿರುವ ಹೊರಾಂಗಣ ಪ್ರಶಸ್ಥವಾಗಿದೆ. ಗಾಳಿ ಬೆಳಕು ಯಥೇಚ್ಛವಾಗಿ ಬರುತ್ತದೆ. ಸುತ್ತಲೂ ಗೋಡೆಯಮೇಲೆ ಚಜ್ಜಾ ಇರುವುದರಿಂದ ಮಳೆಗಾಲದಲ್ಲೂ ತೊಂದರೆಯಾಗದು. ಕೆಳಮನೆಯಲ್ಲಿ ಯಾರೇ ಬಂದರೂ ತೊಂದರೆಯಾಗುವುದಿಲ್ಲ.”ಎಂದರು ಜೋಯಿಸರು. ಶ್ರೀನಿವಾಸನಿಗೂ ಅದೇ ಸಮ್ಮತವಾಯಿತು. ಇನ್ನು ಪ್ರರಂಭಿಸುವ ದಿನ “ನಾಳಿದ್ದು ಸೋಮವಾರ, ಒಳ್ಳೆಯದು....
ಜನನ ಮರಣಗಳಊರುಗಳ ನಡುವೆಅನಿರೀಕ್ಷಿತ ತಿರುವುಗಳಜೀವನದ ಪಯಣವು. ಸೋಲು ಗೆಲುವುಗಳಪಂದ್ಯಾವಳಿ ನಡುವೆಅನಿರೀಕ್ಷಿತ ತೀರ್ಪುಗಳಜೀವನದ ಆಟವು. ವಾಸ್ತವ ಭ್ರಮೆಗಳತಿಕ್ಕಾಟದ ನಡುವೆಅನಿರೀಕ್ಷಿತ ಪಾತ್ರಗಳಜೀವನದ ನಾಟಕವು. ಬೇಕು ಬೇಡಗಳಕಗ್ಗಟ್ಟಿನ ನಡುವೆಅನಿರೀಕ್ಷಿತ ದಾಳಿಗಳಜೀವನದ ಕದನವು. ನಿನ್ನೆ ಇಂದು ನಾಳೆಗಳಲೆಕ್ಕಾಚಾರದ ನಡುವೆಅನಿರೀಕ್ಷಿತ ಫಲಗಳಜೀವನದ ಪಾಠವು. –ಶಿವಮೂರ್ತಿ.ಹೆಚ್. ದಾವಣಗೆರೆ +17
ಮೊನ್ನೆ ಕಂಡವರು ಇಲ್ಲೆ ಕುಳಿತವರುತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರುಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆತಲೆಯ ಒಲೆತದ ಭಂಗಿ ಕಣ್ತುಂಬಿ ನಿಂತಿದೆಪರಿಚಿತದ ಮೈಗಂಧ ನಾಸಿಕವ ಬಿಟ್ಟಿರದುಸ್ನೇಹ ಸ್ಪರ್ಶದ ಬಿಸುಪು ಆರದಿಹುದುಮೈಕುಲುಕು ನಗೆಯ ಅಲೆ ವರ್ತುಲದಿ ಸುತ್ತಿಹುದು ಸಾವೆಂಬ ಸಂಗಾತಿ ಕರೆದ ಮಾತ್ರಕೆ ಹೀಗೆ...
ತಾನು ಉಂಡೆನೋ ತಿಂದೆನೋ ಗೊತ್ತಿಲ್ಲದವಳುಮನೆ ಮಂದಿಗೆಲ್ಲ ಹೊಟ್ಟೆಯ ತುಂಬಾ ತುತ್ತನಿಟ್ಟಳು ತಾನು ಮಲಗಿದೆನೋ ಎದ್ದೇನೋ ಗೊತ್ತಿಲ್ಲದವಳುಊರ ಕೋಳಿ ಕೂಗಿಗು ಮೊದಲೇ ಏಳುತ್ತಿದ್ದಳು ತಾನು ದಣಿದೆನೋ ತಣಿದೆನೋ ಗೊತ್ತಿಲ್ಲದವಳುಮಳೆಯೆನ್ನದೇ ಬಿಸಿಲೆನ್ನದೇ ಹೊಲದ ತುಂಬಾ ದುಡಿದಳು ಬೆನ್ನಿಗೆ ಚುಚ್ಚು ಮಾತಿನ ಚೂರಿಗಳಿದ್ದರು ಗೊತ್ತಿಲ್ಲದವಳುಎಲ್ಲರನೂ ತನ್ನವರೆಂದು ಭಾವಿಸಿ ನಂಬಿದಳು ತಾನು ನಕ್ಕಳೋ...
ಕಡಲ್ಗುದುರೆಯ ಬೆನ್ನೇರಿ..! ನೋಡಿದಷ್ಟೂ ಮುಗಿಯದ ಮಾಂಟೆರೆ ಅಕ್ವೇರಿಯಂನ ಇನ್ನೊಂದು ಬಹುದೊಡ್ಡ ಗಾಜಿನ ತೊಟ್ಟಿಯಲ್ಲಿದೆ.. ದೊಡ್ಡ ಹಾಗೂ ಸಣ್ಣ ಅಕ್ಟೋಪಸ್ ಗಳು. ಅದರ ಗಡ್ಡೆಯಂತಿರುವ ತಲೆಯ ಎದುರು ಭಾಗದಲ್ಲಿರುವ ಕಪ್ಪಗಿನ ಎರಡು ದೊಡ್ಡ ಕಣ್ಣುಗಳು ನಮ್ಮನ್ನೇ ನುಂಗುವಂತೆ ದಿಟ್ಟಿಸುವುದನ್ನು ನೋಡುವಾಗ ಸ್ವಲ್ಪ ಭಯವೂ ಆಗದಿರುವುದಿಲ್ಲ. ಪ್ರಾಣಿಶಾಸ್ತ್ರದಲ್ಲಿ ಅವುಗಳಿಗೆ ನಾಲ್ಕು...
ನಿಮ್ಮ ಅನಿಸಿಕೆಗಳು…