ಗೊತ್ತಿಲ್ಲದವಳು
ತಾನು ಉಂಡೆನೋ ತಿಂದೆನೋ ಗೊತ್ತಿಲ್ಲದವಳು
ಮನೆ ಮಂದಿಗೆಲ್ಲ ಹೊಟ್ಟೆಯ ತುಂಬಾ ತುತ್ತನಿಟ್ಟಳು
ತಾನು ಮಲಗಿದೆನೋ ಎದ್ದೇನೋ ಗೊತ್ತಿಲ್ಲದವಳು
ಊರ ಕೋಳಿ ಕೂಗಿಗು ಮೊದಲೇ ಏಳುತ್ತಿದ್ದಳು
ತಾನು ದಣಿದೆನೋ ತಣಿದೆನೋ ಗೊತ್ತಿಲ್ಲದವಳು
ಮಳೆಯೆನ್ನದೇ ಬಿಸಿಲೆನ್ನದೇ ಹೊಲದ ತುಂಬಾ ದುಡಿದಳು
ಬೆನ್ನಿಗೆ ಚುಚ್ಚು ಮಾತಿನ ಚೂರಿಗಳಿದ್ದರು ಗೊತ್ತಿಲ್ಲದವಳು
ಎಲ್ಲರನೂ ತನ್ನವರೆಂದು ಭಾವಿಸಿ ನಂಬಿದಳು
ತಾನು ನಕ್ಕಳೋ ಅತ್ತಳೋ ಗೊತ್ತಿಲ್ಲದವಳು
ಪೌಡರಿನ ಬದಲು ಮುಖಕೆ ಮಂದಹಾಸ ಹಚ್ಚಿಕೊಂಡವಳು
ಹಳೆಯ ಪೆಟ್ಟಿಗೆಯ ತುಂಬಾ ಧರಿಸದ ಹೊಸ ಸೀರೆಗಳು
ಈಡೇರದ ಕನಸುಗಳ ಉಟ್ಟುಕೊಂಡೆ ಕಣ್ಣುಮುಚ್ಚಿದಳು
– ನವೀನ್ ಮಧುಗಿರಿ
ನಿಸ್ವಾರ್ಥ… ಹೆಣ್ಣು ಮಗಳೊಬ್ಬಳ…ಯಶೋಗಾಥೆ…ಚೆನ್ನಾಗಿದೆ.. ಧನ್ಯವಾದಗಳು ಸಾರ್
Beautiful
ಎಲ್ಲಾ ಅಮ್ಮಂದಿರ ಪಾಡು…ಚಂದದ ಕವಿತೆ
ಸೂಪರ್ ಕವನ
ಹೃದಯ ಸ್ಪರ್ಶಿ ಕವಿತೆ
ಮಹಿಳೆಯೊಬ್ಬಳ ಜೀವನಗಾಥೆ…ಚೆನ್ನಾಗಿದೆ ಕವನ.
ಆರ್ದ್ರ ಅಭಿವ್ಯಕ್ತಿ!
ಹೆಣ್ಣಿನ ಮನದಾಳವನ್ನು ಗುರುತಿಸಿದ ಚಂದದ ಕವಿತೆ.
ನನ್ನಮ್ಮನ ಬದುಕಿನ ವಾಸ್ತವದ ಕತೆಯೇ ಈ ಕವಿತೆ. ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು..
– ನವೀನ್ ಮಧುಗಿರಿ