Daily Archive: January 27, 2022

11

ಕಾದಂಬರಿ: ನೆರಳು…ಕಿರಣ2

Share Button

–ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಗಂಡನ ಮಾತನ್ನು ಕೇಳಿದ ಲಕ್ಷ್ಮಿಗೆ ಹಾಲುಕುಡಿದಷ್ಟು ಸಂತಸವಾಯ್ತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ”ದೇವರೇ, ನನ್ನ ಗಂಡನಿಗೆ ಈಗಲಾದರೂ ತನ್ನ ಸಂಸಾರದ ಬಗ್ಗೆ ಯೋಚಿಸುವಷ್ಟು ಬುದ್ಧಿ ಕೊಟ್ಟೆಯಲ್ಲ. ನಿನಗೆ ಕೋಟಿ ನಮನಗಳು” ಎಂದು ಅಗೋಚರ ಶಕ್ತಿಗೆ ತಲೆಬಾಗಿದಳು. ನಂತರ ಗಂಡನಿಗೆ ”ಯೋಚಿಸಬೇಡಿ, ನೀವೇನೂ ನೇಗಿಲು ಹಿಡಿದು...

8

‘ಮುಂಗ್ಪೂ’ವಿನ ಕಬಿಗುರು ರಬೀಂದ್ರ ಭವನ

Share Button

ಎರಡು ವರುಷದ ಹಿಂದೆ ನಾವು ಪೂರ್ವ ಭಾರತ ಪ್ರವಾಸ ಹೋಗಿದ್ದೆವು.ಸಿಕ್ಕಿಂ ರಾಜಧಾನಿ ಗ್ಯಾಂಗ್ಟೋಕ್ ನೋಡಿಕೊಂಡು ಡಾರ್ಜಿಲಿಂಗಿಗೆ ಹೊರಡುತ್ತಲಿದ್ದೆವು. ಪಕ್ಕದಲ್ಲಿ ದಾರಿಯುದ್ಧ ನಮ್ಮ ಜತೆಯೇ ಸ್ಪರ್ಧೆ ನೀಡುವಂತೆ ಹರಿದು ಬರುತ್ತಿದ್ದ ತೀಸ್ತಾ ನದಿ, ಅದರ ಹಿನ್ನಲೆಯಲ್ಲಿ ಹಿಮಾಲಯ ಎಂಬ ಹೆಸರಿನಂತೆ     ಹಿಮಾಚ್ಛಾದಿತವಲ್ಲದಿದ್ದರೂ ಅಡಿಯಿಂದ ಮುಡಿಯವರೆಗೆ ಹಸಿರು ವನಸಿರಿಯನೇ ಹೊದ್ದ...

12

ಅವಿಸ್ಮರಣೀಯ ಅಮೆರಿಕ-ಎಳೆ 7

Share Button

ಉಲ್ಟಾ…ಪಲ್ಟಾ..!! ಪ್ರಪಂಚದ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಒಂದು ಕಾನೂನಾದರೆ, ಅಮೆರಿಕದಲ್ಲಿ ಅದು ತದ್ವಿರುದ್ಧವಾಗಿರುವುದನ್ನು ಕಾಣಬಹುದು.. ತನ್ನ ಕತ್ತೆಗೆ ಮೂರೇ ಕಾಲು ಎನ್ನುವಂತೆ. ನಮ್ಮಲ್ಲಿಯ ರಸ್ತೆ ನಿಯಮದಂತೆ, ನಡೆದಾಡುವಾಗ ಅಥವಾ ವಾಹನದಲ್ಲಿ, ರಸ್ತೆಯ ಎಡಭಾಗದಲ್ಲಿ ಹೋಗುವುದು ರೂಢಿ ತಾನೇ? ಆದರೆ ಅಲ್ಲಿ ಎಲ್ಲವೂ ಬಲಭಾಗ! ವಾಹನಗಳು ರಸ್ತೆಯ ಬಲಭಾಗದಲ್ಲಿ...

5

ಸಮಕಾಲೀನ ತ್ಯಾಗರಾಜರು ಮತ್ತು ದಾಸಪಂಥೀಯರು

Share Button

ಜನವರಿ ತಿಂಗಳು ಸಂಕ್ರಾಂತಿ ಹಬ್ಬಕ್ಕೆ ಪ್ರಸಿದ್ಧ ಆಗಿರುವಂತೆ (ಈ ವರ್ಷ 22ರಂದು ನಡೆದ) ತ್ಯಾಗರಾಜರ ಆರಾಧನೆಗೂ  ಸುಪ್ರಸಿದ್ಧ. ತಮಿಳುನಾಡಿನ ತಿರುವೈಯಾರಿನಲ್ಲಿ ಇರುವ ಅವರ ಸಮಾಧಿಯ ಬಳಿ ಅವರು ಮುಕ್ತಿ ಪಡೆದ ಬಹುಳ ಪಂಚಮಿಯಂದು ದಿನವಿಡೀ ತ್ಯಾಗರಾಜರ ಕೃತಿಗಳನ್ನು ಬಗೆ ಬಗೆಯ ವಿದ್ವಾಂಸರು, ವಿವಿಧ ತಂಡಗಳಲ್ಲಿ ಹಾಡಿ ಕೃತಕೃತ್ಯರಾಗುತ್ತಾರೆ....

6

ಮನಸ್ಥಿತಿ

Share Button

ನಾವು ದೂರ ದೂರ ಹೋದಂತೆಲ್ಲ ದೂರದವರೂ ಹತ್ತಿರವಾಗುತ್ತಾರೆ, ನಮ್ಮವರಲ್ಲದಿದ್ದವರೂ ನಮ್ಮವರಾಗಿಬಿಡುತ್ತಾರೆ, ಇದೆಲ್ಲಾ ಆಯಾ ಸಮಯದಲ್ಲಿನ ನಮ್ಮ ಮನಸ್ಥಿತಿ. 80 ರ ದಶಕದ ಮಧ್ಯ ವರ್ಷಗಳ ಕಾಲ, ಸ್ನೇಹಿತರೊಡನೆ ಬಾಂಬೆ ನಗರ ನೋಡಲು ಹೋಗಿದ್ದೆ. ಹೀಗೆ ಬಾಂಬೆಯ ಟ್ರಾಂ ಸರ್ವೀಸ್ ನಲ್ಲಿ ಓಡಾಡುತ್ತಿರುವಾಗ ಮೈಸೂರಿನ  ಹುಡುಗನೊಬ್ಬ ನಾವು ಕನ್ನಡ...

8

ಜ್ಯೋತಿರ್ಲಿಂಗ 9: ಕೇದಾರೇಶ್ವರ

Share Button

ಹಿಮಗಿರಿಗಳ ಮಡಿಲಲ್ಲಿ ನೆಲೆಯಾಗಿರುವ ಕೇದಾರೇಶ್ವರ ಜ್ಯೋತಿರ್ಲಿಂಗ. ಮುಂಜಾನೆಯ ಸಮಯ. ರವಿಯ ಹೊಂಬೆಳಕಿನಲ್ಲಿ ಫಳಫಳನೆ ಹೊಳೆಯುತ್ತಿರುವ ಪರ್ವತಗಳು ಚಿನ್ನದ ಕಳಶಗಳಂತೆ ಕಂಗೊಳಿಸುತ್ತಿವೆ. ಬೆಳಗಿನ ನಿರ್ವಾಣ ಪೂಜೆಯ ಸಮಯ – ಯಾವ ಆಭೂಷಣಗಳನ್ನೂ ಧರಿಸದ ಶಿವನು ಪಿಂಡದ ಸ್ವರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ರುದ್ರಾಭಿಷೇಕ ಮಾಡುತ್ತಾ, ಮಂತ್ರಗಳನ್ನು ಪಠಿಸುತ್ತಿರುವ ಪುರೋಹಿತರು,...

29

ಮಾಸ್ಕಿನ ಹಿಂದೆ!……

Share Button

ಈ ಕೊರೋನಾ ವಿಶ್ವವ್ಯಾಪಿಯಾಗಿ ತನ್ನ ಕಬಂಧಬಾಹುಗಳನ್ನು ಚಾಚಿ, ಇಡಿಯ ವಿಶ್ವವನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ, ಲೆಕ್ಕವಿಲ್ಲದಷ್ಟು ಜನರ ಪ್ರಾಣವನ್ನು ಕಸಿದ ಈ ಮಹಾಮಾರಿಯ ಆಟೋಪವೇನು ಕಡಿಮೆಯೇ? ಬರೆದಷ್ಟೂ ಮುಗಿಯದು! ಕಣ್ಣಿಗೆ ಕಾಣಿಸದ ವೈರಸ್ ತನ್ನ ಲೀಲಾಸಾಮ್ರಾಜ್ಯ ವಿಸ್ತರಿಸಿದ್ದಕ್ಕೆ ಸಾಕ್ಷೀಭೂತರಾಗಿ...

6

“ಗಂಗೆ”

Share Button

ಗಂಗೆ ಅಗಬೇಕುಪುಣ್ಯವತಿ ಗಂಗೆ,ಎಲ್ಲವನ್ನು ಮೀರಿಹರಿವ ಗಂಗೆಎಲ್ಲವನ್ನು ದಾಟಿದಡ ಮುಟ್ಟುವ ಗಂಗೆನಾನಾಗಬೇಕು,,,,, ನನ್ನ ಮಡಿಲಿಗೆ ಬಿದ್ದಕಲಕುವ ಮಾತುಗಳು,,,,ಕೊಳಕು ಮನಸುಗಳು,,,ನೋಯಿಸುವ ನಡುವಳಿಕೆಗಳು,,,ಬೆಣ್ಣೆ ಮಾತಾಡುತಾಬೆನ್ನಿಗೇ ಇರಿಯುವವರು,,,ಚುಚ್ಚಿ ರಕುತ ಬರೆಸಿಸಂತೋಷಿಸುವವರು,,,ಎಲ್ಲಾ ಅಂದರೆಎಲ್ಲವನ್ನು ಎಲ್ಲರನ್ನುಅರಗಿಸಿಕೊಂಡುಕರಗಿಸಿಕೊಂಡುಹಿಂದೆ ಸರಿಯದ ಗಂಗೆಯಂತೆನಾನು ಹರಿಯುತ್ತೇನೆ ಒಳಗೆಭೋರ್ಗರೆತದೊಂದಿಗೆಹೊರಗೆಗಂಭೀರ ಗಂಗೆಯಂತೆ,,,,,, ಭೂ ಜಾತೆ ಗಂಗೆಸೋತಿದ್ದುಂಟೆ,,,,,ಈ ಜಗದೊಳಗೆ,,,,ನಾನು,,,ಅಷ್ಟೇ,,,, –ವಿದ್ಯಾ ವೆಂಕಟೇಶ್ , ಮೈಸೂರು +10

Follow

Get every new post on this blog delivered to your Inbox.

Join other followers: