Yearly Archive: 2021

10

ಸಾವಿನ ಮನೆಯಲಿ….

Share Button

ಬದುಕಿದ್ದಾಗ ಬಡಿದಾಡುವರುಸತ್ತಾಗ ಸುತ್ತ ನೆರೆವರು,ತೆಗಳಿದವನು ಹೊಗಳುವನು ಅಂದು,ಕತ್ತಿ ಮಸೆದವನೆ ನಿಲ್ಲುವನು ಬಂದುಹಾರದೊಡನೆ ಎಲ್ಲರಿಗಿಂತಲೂ ಮುಂದು,ಕಷ್ಟ ಸುಖದಲಿ ತಿರುಗಿಯೂ ನೋಡದವರುಹತ್ತಿರದ ಸಂಬಂಧಿಗಳೆಂದು ಹೇಳುವರುಜೊತೆಗೆ ಮಡಿಯ ಮಾಡುವರು,ಸಿಕ್ಕಾಗ ಎದುರಿಗೆಮಾತಾಡದೆ ಮುಖ ತಿರುಗಿಸಿದವನುಸತ್ತಾಗ ಬಂದುಆ ನಿರ್ಜೀವಕೆ ಅಂಟಿಕೊಂಡುಹೀಗಾಗಬಾರದಿತ್ತೆನ್ನುತ್ತಾ ನಿಲ್ಲುವನು. ಕಷ್ಟದಿ ಹೆಗಲ ಕೊಡದ ಮಗಮಡಿಕೆಯ ಹೊರಲು ಬರುವನಾಗ,,,ನಿಜದ ಅನುತಾಪವಿದ್ದವರುಸುಳ್ಳು ಸಂತಾಪವಿದ್ದವರು,ಬೆರತು ಹೋಗುವರುಕಲೆತು...

7

ಹಣದಲ್ಲಿ ಬಡವ,ಗುಣದಲ್ಲಿ ಶ್ರೀಮಂತ…

Share Button

ಹಣವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದು ಕೆಲವರ ಇಂಗಿತ. ‘ತಾಯಿ-ತಂದೆಯರನ್ನುಳಿದು ಮತ್ತೆಲ್ಲವನ್ನೂ ದುಡ್ಡಿಗೆ ಪಡೆಯಬಹುದು’ ಎಂಬುದು  ಜಾನಪದೀಯ ವ್ಯಂಗ್ಯೋಕ್ತಿಯೂ ಹೌದು. ಇಂದಿನ ದಿನಗಳಲ್ಲಂತೂ ಇದು ನೂರಕ್ಕೆ ನೂರು ಸತ್ಯವಾದ ಮಾತು. ‘ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ’ ಎಂಬ ಮಾತು ಕೂಡಾ ಈ ನಿಟ್ಟಿನಲ್ಲೇ ಹುಟ್ಟಿಕೊಂಡದ್ದು. ಹಣಕ್ಕೆ...

23

ಹೂಗಿಡವೇ ಕಾರಣವಾಯ್ತು ಈ ಲೇಖನಕೆ!

Share Button

ಮನೆಯಂಗಳದಲ್ಲೊಂದು ಪುಟ್ಟ ಗಿಡ ಮೊಳಕೆಯೊಡೆದಿತ್ತು. ದಿನಗಳುರುಳಿದಂತೆ   ಗಿಡ ಹುಲುಸಾಗಿ ಬೆಳೆದು ಮೊಗ್ಗುಗಳನ್ನು ಬಿಟ್ಟಿತು. ಕೆಲದಿನಗಳಲ್ಲೇ ಗಿಡದೊಡಲು ಗಾಢ ಕೆಂಪು ಬಣ್ಣದ ಹೂಗಳಿಂದ ತುಂಬಿತ್ತು. ಹೂಗಳಿಗೆ ಹೇಳಿಕೊಳ್ಳುವಂತಹ ವಿಶೇಷ ಪರಿಮಳವಿಲ್ಲ. ಆದರೆ ಮನಮೋಹಕ ಬಣ್ಣದಿಂದಲೇ ನೋಡುಗರನ್ನು ತನ್ನೆಡೆಗೆ ಆಕರ್ಷಿಸುವ ವಿಶೇಷ ಶಕ್ತಿ. ದಿನಗಳು ಕಳೆದಂತೆ, ಅರಳಿದ ಹೂವುಗಳಿದ್ದ ಜಾಗದಲ್ಲಿ...

5

ಅಂಚೆಯಣ್ಣನ ನೆನಪು

Share Button

ಬಾಗಿಲಾಚೆ ಸೈಕಲ್ನ ಟ್ರಿನ್ ಟ್ರಿನ್ಕಿವಿಗೆ ಬಿದ್ದೊಡನೆ ಓಡುವ ಹುರುಪುಮನೆಯ ಮುಂದೆ ನಿಂತರೆ ಅಂಚೆಯಣ್ಣಹೇಳತೀರದು ಮನದ ಸಂಭ್ರಮವನ್ನ ನವ ವಧುಗಳಿಗೆ ಬೇಕಾದ ತವರ ಚಿತ್ರಅತ್ತೆಮನೆಯ ಸೊಸೆಯಿಂದಮ್ಮಗೆ ಪತ್ರಒಡಹುಟ್ಟಿದರ, ಮಗನ ಕ್ಷೇಮ ಸಮಾಚಾರನೆಂಟರಿಷ್ಟರ ಸುದ್ದಿ ಹಾಗೂ ಕರೆಯೋಲೆ ತಿಂಗಳ ಪಿಂಚಣಿ ಮಾಸಾಶನಗಳ ಬಟವಾಡೆಗೌರಿಯ ಸಮಯದಲಿ ಬಾಗಿನ ಉಡುಗೊರೆಗಡಿಯಾಚೆಯ ಯೋಧನಿಗೆ ಮನೆಯ...

17

ನೋಟು ಬಂಧಿ…ಭಾವನೆ ಬಂಧಿಯೆ???

Share Button

ಬಂಧಿಯಾಯ್ತು ಒಮ್ಮೆ ನೋಟು ಐನೂರುತಿರುಗಿ ನೀಡಬೇಕಾಯ್ತು ಎಲ್ಲ ಬಳಕೆದಾರರುಹಾ ಇದಾಗಿ ಕಳೆದಿತ್ತು ವರ್ಷ ಹಲವಾರುನಾನೊಮ್ಮೆ ಕಪಾಟು ತೆರೆದಾಗ ಅಲ್ಲಿ ಕಂಡಿತ್ತೊಂದು ಕವರುಅದ ನೋಡಿ ಹರುಷದಿಂದ ಹೊಮ್ಮಿತ್ತು ಕಣ್ಣೀರು ಒಳಗೆ ರೂಪಾಯಿ ಐನೂರು ಮೇಲೆ ಎರಡು ಹೆಸರುಮೊಮ್ಮಗನ ಹೆಸರಿನ ಜೊತೆ ಅಜ್ಜಿ ತಾತ ಎಂಬ ಬರಹಕ್ಕೆ ವರ್ಷವಾಗಿತ್ತು ಮೂರುಅವ...

14

ಪ್ರವಾಸ ಪ್ರಯಾಸ

Share Button

ಈಗಂತೂ ಪ್ರವಾಸ ಹೋಗೊದು ಸಾಮಾನ್ಯವಾಗಿ ಬಿಟ್ಟಿದೆ. ಎರಡು ಮೂರು ದಿನಗಳ ರಜೆ ಒಟ್ಟಿಗೆ ಸಿಕ್ಕಿಬಿಟ್ಟರೆ ಸಾಕು ಪ್ರವಾಸ ಹೊರಟು ಬಿಡುತ್ತಾರೆ. ಸ್ನೇಹಿತರು ಜೊತೆಗೂಡಿ ಹೋಗುವ ಪ್ರವಾಸ ಒಂದು ರೀತಿಯಲ್ಲಿ ಖುಷಿಯಾದರೆ, ಪತಿ,ಪತ್ನಿ ಮಕ್ಕಳೊಂದಿಗೆ ಹೋಗುವ ಪ್ರವಾಸ ಮತ್ತೊಂದು ರೀತಿಯಾ ಖುಷಿ. ಮನೆಯಲ್ಲಿ ಹಿರಿಯರಿದ್ದರೆ ಅವರನ್ನೂ ಜೊತೆಗೂಡಿಸಿಕೊಂಡು ಪ್ರವಾಸ...

5

ಒಡಲ ಕಡಲು

Share Button

ಒಡಲೊಳಗಿನ ಕಡಲಲ್ಲಿಭಾವನೆಗಳ ಉಬ್ಬರವಿಳಿತಒಳಗೊಳಗೇ ಮುಗಿಬೀಳುವಆಸೆಯ ಅಲೆಗಳ ತುಡಿತಒಮ್ಮೆ ಸಮ್ಯಮ ಪ್ರಶಾಂತಮತ್ತೊಮ್ಮೆ ಯಾರನ್ನೋಎಳೆದು ತಂದುಬಿಡಬೇಕೆಂಬಂತೆರಭಸ ಉದ್ರಿಕ್ತಆಳ, ಪಾತಾಳಕ್ಕಿಳಿದಷ್ಟೂಮೇಲೆತ್ತಿ ತರಲಾಗದಂತ,ತಂದು ತೋರಲಾಗದಂತಚಿಪ್ಪಿನೊಳಗೇ ಮುತ್ತಾಗಿಮಲಗಿರುವ ಮನದೆಲ್ಲ ವೃತ್ತಾಂತಅದೇಕೋ ತಂಪಾದ ಪೂರ್ಣಚಂದ್ರಮನ ಕಂಡರೆಎಂದೂ ಕಾಣದಅಯಸ್ಕಾಂತದ ಸೆಳೆತಯಾರೂ ಇಲ್ಲ ಕೇಳುವವರುರಾತ್ರಿಯ ಒಡಲಾಳದ ಮೊರೆತ –ನಟೇಶ +6

10

ಹೂವಿನ ಸ್ವಗತ

Share Button

ಮುಸುಕಿನೊಳಗೆ ಸೇರಿದ್ದಾಗ ಒಳಗೆ ಅದೇನೋ ತಳಮಳ. ಅದೊಂದು ಮುಂಜಾನೆ ಮುಸುಕಿನೊಳಗಿಂದ ಹೊರಬಂದು ಮೊಗ್ಗಾಗಿದ್ದೆ. ಕೊರೆಯುವ ಛಳಿಯಲ್ಲೂ ಹಿತವಾದ ಅನುಭವ. ಹೊರಗೆ ಬಂದು ಉಸಿರಾಡುವ ಆ ಹೊತ್ತಿನಲ್ಲಿ ಬಂಧನದಿಂದ ಬಿಡುಗಡೆಗೊಂಡ ಭಾವ. ನಿಧಾನವಾಗಿ ಕಣ್ತೆರೆಯುತ್ತಿದ್ದಂತೆ ಮೊಗದ ಮೇಲೆ ಬಿದ್ದ ಆ ಬೆಳಕು ನಾನೆಲ್ಲಿರುವೆ ಎನ್ನುವುದನ್ನು ತೋರಿಸಿತ್ತು. ಸುತ್ತಲಿನ ಎಲ್ಲವೂ...

10

ಬೆಟ್ಟದ ಹೂವು-ನೀಲ ಕುರಂಜಿ.

Share Button

ಸಂಪೂರ್ಣ ಗೃಹಬಂಧಿಯಾಗಿ ಮಾಡಿದ್ದ ಈ ಕರೊನತನು-ಮನಗಳೆರಡನ್ನೂ ಬಾಡಿದ ಹೂವಿನಂತೆ ಹೈರಾಣು ಮಾಡಿಬಿಟ್ಟಿತ್ತು. ಇದರಿಂದ ಹೊರಬರಲುನನ್ನ ಹತ್ತಿರದ ಸಂಭಂಧಿಕರೊಡನೆ ಪ್ರವಾಸ ಆನುಭವ ಸವಿಯಲು ಸಿದ್ಧವಾಯಿತು ನನ್ನ ಮನಸ್ಸು. ಹೊರಟಿದ್ದ ಸ್ಥಳವಾದರೂ ಎಂತಹುದು-ಕೊಡಗಿನ ರಾಜಧಾನಿ, ಕರ್ನಾಟಕದ ಕಾಶ್ಮೀರ-ಮಡಿಕೇರಿ! ಆಹಾ! ಮನಸ್ಸಿನಲ್ಲೇ ” ಮಡಿಕೇರಿ ಸಿಪಾಯಿ” ಹಾಡು ಗುನುಗಿದ್ದಾಯಿತು. ಸಿದ್ಧತೆ ಸಂಭ್ರಮದಲ್ಲಿ...

7

ಶ್ರೀಲಂಕಾ ಪ್ರವಾಸ: ರಾವಣನ ನಾಡಿನಲ್ಲಿ ಸೀತೆಯರು-2

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಶ್ರೀಲಂಕಾ ದೀರ್ಘಕಾಲ ಆಂಗ್ಲರ ಆಳ್ವಿಕೆಯಲ್ಲಿದ್ದುದರಿಂದ ಅಲ್ಲಿನ ಮನೋಹರ ಪ್ರಕೃತಿ ತಾಣಗಳಿಗೆಲ್ಲಾ ಬಿಳಿಯ ದೊರೆಗಳ ಹೆಸರೇ ಇದೆ. Arthur’s View Point,  Gregory Lake, Victoria park, St. Clair Water Falls, Devon Falls  ಇತ್ಯಾದಿ. ಸ್ವಾತಂತ್ರ್ಯ ಪಡೆದು 72 ವರ್ಷಗಳಾದರೂ ಇನ್ನೂ...

Follow

Get every new post on this blog delivered to your Inbox.

Join other followers: