ಒಡಲ ಕಡಲು
ಒಡಲೊಳಗಿನ ಕಡಲಲ್ಲಿ
ಭಾವನೆಗಳ ಉಬ್ಬರವಿಳಿತ
ಒಳಗೊಳಗೇ ಮುಗಿಬೀಳುವ
ಆಸೆಯ ಅಲೆಗಳ ತುಡಿತ
ಒಮ್ಮೆ ಸಮ್ಯಮ ಪ್ರಶಾಂತ
ಮತ್ತೊಮ್ಮೆ ಯಾರನ್ನೋ
ಎಳೆದು ತಂದುಬಿಡಬೇಕೆಂಬಂತೆ
ರಭಸ ಉದ್ರಿಕ್ತ
ಆಳ, ಪಾತಾಳಕ್ಕಿಳಿದಷ್ಟೂ
ಮೇಲೆತ್ತಿ ತರಲಾಗದಂತ,
ತಂದು ತೋರಲಾಗದಂತ
ಚಿಪ್ಪಿನೊಳಗೇ ಮುತ್ತಾಗಿ
ಮಲಗಿರುವ ಮನದೆಲ್ಲ ವೃತ್ತಾಂತ
ಅದೇಕೋ ತಂಪಾದ ಪೂರ್ಣ
ಚಂದ್ರಮನ ಕಂಡರೆ
ಎಂದೂ ಕಾಣದ
ಅಯಸ್ಕಾಂತದ ಸೆಳೆತ
ಯಾರೂ ಇಲ್ಲ ಕೇಳುವವರು
ರಾತ್ರಿಯ ಒಡಲಾಳದ ಮೊರೆತ
–ನಟೇಶ
Beautiful. ಇಷ್ಟೇ ಬದುಕು, ಎಲ್ಲ ಭಾವಗಳ ಸಮ್ಮಿಲನ ಇಲ್ಲಿ.
ಅರ್ಥಪೂರ್ಣ ವಾದ ಕವನ ಚೆನ್ನಾಗಿದೆ ಸಾರ್
ಮನದಾಳದ ಹೊಯ್ದಾಟವನ್ನು ತುಂಬಾ ಚೆನ್ನಾಗಿ
ಬಿಂಬಿಸಿದ್ದೀರ.
ಮನದ ಹೊಯ್ದಾಟ ಸಾಗರದ ಹಾರಾಟದ ಸಮೀಕರಣ ಚೆನ್ನಾಗಿ ಮೂಡಿ ಬಂದಿದೆ
ಮನ ಕಡಲಿನಲ್ಲಿ ಭಾವನೆಗಳ ಏರಿಳಿತಗಳ ಸೊಗಸಾದ ಭಾವಪೂರ್ಣ ಕವನ.