ಈಗಲೂ ನನ್ನೀ ಹೃದಯ
ನೆತ್ತರು ಚಿಮ್ನುತಿದೆ
ನಿತ್ಯವೂ ಮಿಡಿಯುತಿದೆ
ಬದುಕಿಗಾಗಿ ತುಡಿಯುತಿದೆ
ಖಾಲಿಯಿದೆ ಹೃದಯ
ದಣಿವಿಲ್ಲ ಗುರಿಯಿಲ್ಲ
ಕನಸುಗಳು ಮೂಡುತಿಲ್ಲ
ಯಾವುದೋ ನೋವಿನಲ್ಲಿ
ಹೇಳಲಾರೆ ದನಿಯಿಲ್ಲ
ಯಾತರದ್ದೋ ಗೊಣಗಾಟ
ಯಾರಿಗಾಗಿಯೋ ಹೆಣಗಾಟ
ತೂರಿ ಬರುತಿದೆ ಬಿರುಗಾಳಿ
ಬೀಸುತಿದೆ ಮುಗಿಲೊಂದಾಗಿ
ಹಾರಿಹೋಗದು ಜೀವ
ಹೃದಯವಂತೂ ಇನ್ನೂ ಖಾಲಿಯೇ
ಏನ ಬಯಸಿದೆ ನೀನು
ಜೀವ ಸೋಸುತಿಹೆ ಏನು
ದುರಾಸೆಯ ಲಗಾಮು ಸಲ್ಲದು
ಬಿಗಿಹಿಡಿ ಹೇಷಾರವ ಮಾಡದಿರು
ಕಂಡೆಯಾ ನೀನು ಈಗಲೂ
ಹೃದಯವು ಖಾಲಿಯೇ ಖಾಲಿ
– ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
“ಖಾಲಿ ಹೃದಯದಲ್ಲಿ ತುಂಬಿಕೊ ನಾಳೆಯ ಭರವಸೆ ಯ,
ದೊರೆಯುವುದಾಗ ಬಾಳಲು
ಬದುಕಿಗೊಂದು ಹೊಸ ಆಶಯ ”
ಚೆನ್ನಾಗಿದೆ ಕವನ
ಭಾವಪೂರ್ಣ ಕವನ..ಚೆನ್ನಾಗಿದೆ.