ನಾನು ಕಲಿತ ಝೆಂಟ್ಯಾಂಗಲ್ ಲೈನ್ ಆರ್ಟ್
ಕೆಲವು ದಿನಗಳ ಹಿಂದೆ ನಾನು ಅಮ್ಮನಲ್ಲಿ ನನಗೆ ಬಹಳ ಬೋರಾಗುತ್ತದೆ ಎಂದೆ. ಆಗ ಅಮ್ಮ ಸರಿ, ಏನಾದರೂ ಹೊಸ ಡ್ರಾಯಿಂಗ್ ಮಾಡು ಎಂದು ಇಂಟರ್ನೆಟ್ ನಲ್ಲಿ ಹುಡುಕಿ ಒಂದು ಪ್ಯಾಟರ್ನ್ ತೋರಿಸಿಕೊಟ್ಟರು. ಅದು ಬಹಳ ಸುಂದರವಾಗಿತ್ತು. ಆದರೆ ಬಹಳ ಕಷ್ಟವಿರುವ ಹಾಗೆ ಅನಿಸಿತು. ಇದು ನನ್ನಿಂದ ಆಗಲ್ಲ ಎಂದೆ. ಆಗ ಅಮ್ಮ ವಿಡಿಯೋ ನೋಡುತ್ತಾ ಟ್ರೈ ಮಾಡು ಎಂದರು. ಸರಿ ಎಂದು ಒಂದು ಪ್ಯಾಟರ್ನ್ ಬಿಡಿಸಿದೆ. ಆದರೆ ಕೆಲವು ಲೈನ್ ಗಳು ಸರಿ ಆಗಿರಲಿಲ್ಲ. ಮರುದಿನ ಇನ್ನೂ ಎರಡು ಚಿತ್ರಗಳನ್ನು ವಿಡಿಯೋ ನೋಡುತ್ತಾ ಅರ್ಧ ಗಂಟೆಯಲ್ಲಿ ಬಿಡಿಸಿದೆ. ಅವು ಬಹಳ ಚೆನ್ನಾಗಿ ಬಂತು. ನನ್ನ ಸಂಬಂಧಿಕರು ಮತ್ತು ಫ್ರೆಂಡ್ಸ್ ಎಲ್ಲರೂ ಅದನ್ನು ನೋಡಿ ಚೆನ್ನಾಗಿದೆ ಎಂದರು.
ನಾನು ಕಲಿತು ಚಿತ್ರ ಬಿಡಿಸಿದ್ದು ಝೆಂಟ್ಯಾಂಗಲ್ ಲೈನ್ ಆರ್ಟ್. ಬರೀ ಗೆರೆಗಳನ್ನು ಒಂದು ರೀತಿಯಲ್ಲಿ ಹಾಕುತ್ತಾ ಹೋಗಬೇಕು, ಕೊನೆಯಲ್ಲಿ ಒಂದು ಪ್ಯಾಟರ್ನ್ ಆಗಿ ಕಾಣುತ್ತದೆ. ಇದನ್ನು ಬೇರೆ ಬೇರೆ ರೀತಿಯಲ್ಲೂ ಮಾಡಬಹುದು. ಈ ಚಿತ್ರಗಳಿಗೆ ೩ ಡಿ ಇಫೆಕ್ಟ್ ಕೂಡ ಇರುತ್ತದೆ. ಇದನ್ನು ಬಿಡಿಸಲು ಒಂದು ಡ್ರಾಯಿಂಗ್ ಪೇಪರ್, ಸ್ಕೆಚ್ ಪೆನ್ ಅಥವಾ ಮಾರ್ಕರ್ ಪೆನ್ ಮತ್ತು ಸ್ಕೇಲ್ ಇದ್ದರೆ ಸಾಕು. ನನಗಂತೂ ಇದನ್ನು ಬಿಡಿಸಲು ಬಹಳ ಇಷ್ಟ. ನಾನು ಬಿಡಿಸಿದ ಕೆಲವು ಪ್ಯಾಟರ್ನ್ ಗಳನ್ನು ಇಲ್ಲಿ ಕೊಟ್ಟಿದ್ದೇನೆ.
-ಚಿಂತನ್ ಕೃಷ್ಣ ವಿ.ಸಿ
೬ ನೇ ತರಗತಿ
ಬಾಲಭಾರತಿ ಕೇಂದ್ರೀಯ ವಿದ್ಯಾಲಯ
ಬಳ್ಳಾರಿ
ಚೆಂದಿದೆ ಮರೀ… ನಿನ್ನ ಕಲಿಕೆಯ ಕುತೂಹಲ ಮುಂದುವರೆಯಲಿ.. ಅಭಿನಂದನೆಗಳು.
ಬಿಡುವಿನ ಸಮಯದಲ್ಲಿ ಏನಾದರೂ ಹೊಸ ವಿಷಯಗಳನ್ನು ತಾನಾಗಿ ಕಲಿಯುವುದು ಉತ್ತಮ ವಿದ್ಯಾರ್ಥಿಯ ಲಕ್ಷಣ….ಜಾಣ ಚಿಂತನ್.
ಚಂದ ವಾಗಿದೆ ಚಿಂತನ್, ಕಲೆಯ ಕಲಿಕೆ ಮುಂದುವರಿಯಲಿ, ಶುಭಾಶಯಗಳು.
ತುಂಬಾ ಚೆನ್ನಾಗಿ ಬರೆದಿದ್ದೀಯಾ ಮಗು ಮುಂದುವರೆಸು ಶುಭವಾಗಲಿ.
ಚಿತ್ರವನ್ನು ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು
ಸೂಪರ್ ಚಿಂತನ್. ನಿಜಕ್ಕೂ ಈ ಚಿತ್ರಗಳನ್ನು ಬಿಡಿಸುವಲ್ಲಿ ನಿನಗೆ ಸಾಕಷ್ಟು ಬುದ್ಧಿಯನ್ನು ಉಪಯೋಗಿಸಬೇಕಾಗಿ ಬಂದಿದೆ. ಹೀಗೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುವ ಗುಣ ನಿನ್ನ ಸಾಮರ್ಥ್ಯ ವನ್ನು ಹೆಚ್ಚಿಸುತ್ತದೆ.
ಧನ್ಯವಾದಗಳು ಮೇಡಮ್
ತುಂಬಾ ಚೆನ್ನಾಗಿದೆ ಪುಟ್ಟ.
ಆಹಾ..ಬಹಳ ಸುಂದರ..
ಜಾಣ ಚಿಂತನ್.. ನಿನ್ನ ಡ್ರಾಯಿಂಗ್ ನನಗಂತೂ ತುಂಬಾ ತುಂಬಾ ಇಷ್ಟವಾಯಿತು.. ಇನ್ನೂ ಬೇರೆ ಬೇರೆ ರೀತಿಯ ಕ್ರಾಫ್ಟ್ ಎಲ್ಲಾ ಕಲ್ತು ಫೋಟೋ ಕಳ್ಸು ಆಯ್ತಾ..ಗುಡ್ ಲಕ್ ಪುಟ್ಟ..