Monthly Archive: May 2018
ಆಲೋಚನೆ ಎಂಬ ಬುದ್ಧಿ ಶಕ್ತಿ ಮನುಷ್ಯನಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಸರಿ ಯಾವುದು?ತಪ್ಪು ಯಾವುದು? ಒಳಿತು, ಕೆಡುಕುಗಳ ಬಗ್ಗೆ ಸಾರಾಸಾರ ವಿವೇಚನೆ ಅಂತೆಯೇ ಬದುಕಲ್ಲಿ ಬರುವ ಕಷ್ಟಗಳನ್ನು ದೂರೀಕರಿಸಿ ಸುಖದ ನೆಲೆಯನ್ನು ತಂದು ಕೊಳ್ಳುವುದು, ಇವೆಲ್ಲವನ್ನೂ ಆತ ತನ್ನ ಆಲೋಚನಾ ಶಕ್ತಿಯಿಂದ ನಿರ್ಧಾರ ತಳೆದು ಅದರಂತೆ ಕಾರ್ಯೋನ್ಮುಖನಾಗುತ್ತಾನೆ. ಎಲ್ಲರೂ...
*ಬೇಸಾಯಗಾರ ಬೇಗ ಸಾಯ* ನೀವೆಲ್ಲರೂ ಈ ಮಾತು ಕೇಳಿರಬಹುದು . ಬಹುಶಃ ಬೇಸಾಯ ಈಗ ಕಡಿಮೆಯಾದ ಕಾರಣ ನಮ್ಮ ಕಡೆ ಎಲ್ಲರೂ ಬೇಗನೇ ಗೊಟಕ್ ಆಗ್ತಾರೋ ಏನೋ . ಅದ್ಸರಿ , ಬೇಸಾಯವೇನೋ ಒಳ್ಳೆಯದೇ ಅದನ್ನು ಮುನ್ನಡೆಸುವುದು ಹೇಗೆ ಎನ್ನುವುದೇ ಈಗ ಉಳಿದಿರುವ ಯಕ್ಷ ಪ್ರಶ್ನೆ. ಮೊದಲೆಲ್ಲಾ...
ಸಂಜೆಯ ವಾಯುವಿಹಾರದ ಸಮಯದಲ್ಲಿ ನಮ್ಮ ಬಡಾವಣೆಯ ಶಾಲಾ ಮೈದಾನದ ಪಕ್ಕದಲ್ಲಿ ನಡೆಯುತ್ತಿದ್ದಾಗ, ನವಿರಾದ ಸುಗಂಧ ತೇಲಿ ಬಂದು, ಸೆಕೆಯ ವಾತಾವರಣದಲ್ಲಿಯೂ ತಂಪಾದ ಅನುಭೂತಿ ಕೊಟ್ಟಿತು. ಇದು ಒಂದು ‘ಕಾಡುಸುಮ’ದ ಸುವಾಸನೆ ಎಂದು ಮನಸ್ಸು ಹೇಳಿತು. ಯಾವ ಹೂವು ಎಂದು ತತ್ಕ್ಷಣ ನೆನಪಾಗಲಿಲ್ಲ. ಸುತ್ತ ಮುತ್ತ ಇದ್ದ ಮರಗಳನ್ನು...
ಮಹಾಭಾರತದಲ್ಲಿ ಬರುವ ಕಥೆ-ಉಪಕಥೆಗಳು ಅಸಂಖ್ಯಾತ. ಅವುಗಳಲ್ಲಿ ಸ್ಥಳೀಯ ಮಾರ್ಪಾಡು ಮತ್ತು ಜನಪದ ಸೊಗಡು ಸೇರಿಕೊಂಡಿವೆ. ಪ್ರತಿ ಊರಿನಲ್ಲಿಯೂ ಅಲ್ಲಿಗೆ ಪಾಂಡವರು ಬಂದಿದ್ದರೆಂದು ಸಾರುವ ಉದಾಹರಣೆಗಳು ಬಹಳಷ್ಟು ಸಿಗುತ್ತವೆ. ಒಂದು ವೇಳೆ ಇದು ಕಲ್ಪನೆಯೇ ಆಗಿದ್ದರೂ, ಕಲ್ಪನೆಯಲ್ಲಿ ಸಾಮ್ಯತೆ ಇದೆ. ಈಗಿನಂತೆ ಮಾಹಿತಿಯ ಸಂರಕ್ಷಣೆ ಮತ್ತು ಸಂವಹನ ಮಾಧ್ಯಮಗಳು...
ಬಂಧುಗಳೇ ಭಗಿನಿಯರೇ ಕೇಳಿ ಸ್ವಲ್ಪ ಗಮನವಿಟ್ಟು ಇತ್ತ, ಮತದಾನ ಕುರಿತು ಹೇಳುವೆ ಒಂದೆರಡು ಮಾತ ಮತದಾನದ ದಿನ ಮತ ಹಾಕುವದನ್ನು ಬಿಟ್ಟು ಹೋಗದಿರೋಣ ನಾವು ಅತ್ತ ಇತ್ತ, ಈ ಅಮೂಲ್ಯ ಹಕ್ಕು ಚಲಾಯಿಸಿ ಆಗೋಣ ಪ್ರಜ್ಞಾವಂತ ಯಾರು ಆರಿಸಿಬಂದರೇನು ಎಲ್ಲರೂ ಅವರೆ ಎಂಬ ಭಾವನೆ ಸುಳಿಯದಿರಲಿ ನಮ್ಮತ್ತ,...
ಬೈಕ್ ಸವಾರಿಯ ನಾಲ್ಕನೇ ದಿನ. ಸಂಜೆಯಾಗುತಿದ್ದಲೇ ನಿಗದಿತವಾಗಿದ್ದಂತೆ ಮುನ್ನಾರ್ ನಗರದಿಂದ ಅರ್ಧ ಗಂಟೆ ದೂರದಲ್ಲಿದ್ದ ನಮ್ಮ ತಂಗುದಾಣಕ್ಕೆ ತಲುಪಿದೆವು. ಬೈಕುಗಳಿಗೆ ಕಟ್ಟಿದ್ದ ಬ್ಯಾಗುಗಳನ್ನೂ, ನಮ್ಮ ದೇಹಕ್ಕೆ ಕಟ್ಟಿದ್ದ ರೈಡಿಂಗ್ ಗೇರುಗಳನ್ನೂ ಕಳಚಿ, ನಮ್ಮದಿಯ ನಿಟ್ಟುಸಿರು ಬಿಡುತ್ತಿದ್ದ ನಮ್ಮ ಕಿವಿಗೆ ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ಮರುದಿನದ ಹರತಾಳದ...
1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ- ಕವಿಬೆರಳುಗಳಲ್ಲಿ ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು...
ವಿದೇಶ ಪ್ರಯಾಣಕ್ಕೆ ವೀಸಾ ಕೈ ಸೇರಿತ್ತು.ಆದರೆ ವಿಮಾನ ಪ್ರಯಾಣದ ಅನುಭವ ಇನ್ನೂ ಆಗಿರಲಿಲ್ಲ. ಅಲ್ಲದೆ ಅದರಲ್ಲಿ ಬಸ್ಸು, ರೈಲಿನಲ್ಲಿ ಹೋದಂತೆ ಟಿಕೇಟ್ ತೆಗೆದು ಹೋಗಿ ಕುಳಿತುಕೊಳ್ಳಲು ಆಗುವುದಿಲ್ವಲ್ಲ..!.ವಿಮಾನ ನಿಲ್ದಾಣದ ಒಳ ಹೊಕ್ಕಮೇಲೆ ಕಡಿಮೆ ಎಂದರೂ ಎರಡು ಗಂಟೆಗಳಷ್ಟು ಹೊತ್ತು ತಪಾಸಣೆ ಇತ್ಯಾದಿಗಳಿರುತ್ತವೆ. ಹಾಗಾಗಿ ಮೂರು ಗಂಟೆ ...
ಅಮ್ಮನವಳು ಬಲು ಜಾಣೆ,ಜೀವದಾನವ ಮಾಡುವ ಮಹಾತ್ಯಾಗಿ ತನ್ನೆಲ್ಲ ತುಮುಲಗಳ ಸೆರಗೊಳಗಿಟ್ಟು ನಗು ನಗುವ ಅನುರಾಗಿ ನೇಸರನ ಹಿಡಿದು ಬುಟ್ಟಿಯಲಿ ಇಟ್ಟು ನಡೆದಿಹಳು ಬದುಕಿಗೇ ಸ್ಪರ್ದಿಯಾಗಿ. ತನ್ನ ಶಿರವೇರಿಸಿದ ಹೆಮ್ಮೆಯಲಿಹ ಅವಳೆಲ್ಲರ ಮಾರ್ಗದರ್ಶಿಯಾಗಿ . ಹೆಣ್ಣವಳು ಅಬಲೆಯೆಂದೆನುವ ಸತ್ಯ ನೋವು ದುಗುಡ ದಿನಗಳೆದುರಿಸೆ ನಿತ್ಯ ಸದೃಡ ಆತ್ಮವಿಶ್ವಾಸದ ನಿಲುವಲ್ಲಿಪಥ್ಯ...
ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಚಾರಗಳಲ್ಲಿ ಭಾರತದ ಪ್ರಾಚೀನ ವಿಜ್ಞಾನಿಗಳ ಕೊಡುಗೆ ಅಪಾರ. ಮುಖ್ಯವಾಗಿ ಆಯುರ್ವೇದ, ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರಗಳಲ್ಲಿ ನಮ್ಮ ವಿಜ್ಞಾನಿಗಳು ಅಚ್ಚಳಿಯದ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಅಲ್ಲದೇ, ಈಗಲೂ ಆಯುರ್ವೇದ ಕ್ಷೇತ್ರದಲ್ಲಿ ಭಾರತೀಯ ವೈದ್ಯಶಾಸ್ತ್ರ ನಿರಂತರವಾಗಿ ಮಾನವಕುಲಕ್ಕೆ ಸೇವೆ ನೀಡುತ್ತಲಿದೆ ಎನ್ನುವುದು ಗೊತ್ತಿರುವ ವಿಚಾರ. ಇಷ್ಟಾದರೂ, ಆಧುನಿಕ...
ನಿಮ್ಮ ಅನಿಸಿಕೆಗಳು…