ಬೆಳಕು-ಬಳ್ಳಿ

ಮತಗಟ್ಟೆಯತ್ತ ಹೆಜ್ಜೆ ಹಾಕೋಣ

Share Button

ಬಂಧುಗಳೇ ಭಗಿನಿಯರೇ

ಕೇಳಿ ಸ್ವಲ್ಪ ಗಮನವಿಟ್ಟು ಇತ್ತ,
ಮತದಾನ ಕುರಿತು ಹೇಳುವೆ ಒಂದೆರಡು ಮಾತ

ಮತದಾನದ ದಿನ  ಮತ ಹಾಕುವದನ್ನು ಬಿಟ್ಟು ಹೋಗದಿರೋಣ ನಾವು ಅತ್ತ ಇತ್ತ,
ಈ ಅಮೂಲ್ಯ ಹಕ್ಕು ಚಲಾಯಿಸಿ ಆಗೋಣ ಪ್ರಜ್ಞಾವಂತ

ಯಾರು ಆರಿಸಿಬಂದರೇನು ಎಲ್ಲರೂ ಅವರೆ ಎಂಬ ಭಾವನೆ ಸುಳಿಯದಿರಲಿ ನಮ್ಮತ್ತ,
ಇರಲಿ ನಮ್ಮ ನಡೆ ದೇಶದ ಪ್ರಜಾಪ್ರಭುತ್ವದ ಗರಿಮೆಯನ್ನು ಎತ್ತಿ ಹಿಡಿಯುವತ್ತ

ಮತಯಂತ್ರದ ಗುಂಡಿ ಒತ್ತುವ ಮುನ್ನ ಯೋಚಿಸೋಣ ಸ್ವಲ್ಪ ಹೊತ್ತ,
ಸೂಕ್ತ ಅಭ್ಯರ್ಥಿಯ ಪಕ್ಷದ ಚಿಹ್ನೆ ಗೆ ಹಾಕೋಣ ನಮ್ಮ ಮತ

ಪೊಳ್ಳು ಭರವಸೆ ಆಮಿಷಗಳಿಗೆ ಬಲಿಯಾಗಿ  ಹಾಕುವ ಮತ ಆಗದಿರಲಿ ವ್ಯರ್ಥ,
ಇರಲಿ ನಮ್ಮ ಚಿತ್ತ   ಕ್ಷೇತ್ರದ ಅಭಿವೃದ್ಧಿ ಗೆ ಕೊಡುಗೆ ನೀಡಬಲ್ಲ ಅಭ್ಯರ್ಥಿಯತ್ತ

ಗಮನ ಹರಿಸದಿರೋಣ ಜಾತಿ ಮತ ಧರ್ಮ ರಾಜಕಾರಣದತ್ತ.
ಅವುಗಳನ್ನು   ಮರೆತು  ಎಲ್ಲರೂ ಒಂದಾಗಿ ಸಾಗೋಣ ಕ್ಷೇತ್ರದ ಪ್ರಗತಿಗೆ ಸಹಕರಿಸುತ್ತ

ಕೇಳಿಕೊಳ್ಳುವೆ ನಾ ನಿಮಗೆ   ಮತ್ತ ಮತ್ತ.
“ಆ ದಿನದಂದು ಮತದಾನದ ಪವಿತ್ರ ಕಾರ್ಯಕ್ಕಾಗಿ   ಹೆಜ್ಜೆ ಹಾಕೋಣ ನಮ್ಮ ಮತಗಟ್ಟೆಯತ್ತ

–  ಮಾಲತೇಶ ಎಂ ಹುಬ್ಬಳ್ಳಿ

2 Comments on “ಮತಗಟ್ಟೆಯತ್ತ ಹೆಜ್ಜೆ ಹಾಕೋಣ

  1. ಮತದಾನ ಮಾಡುವುದು ನಮ್ಮ ಕರ್ತವ್ಯ. ಅದನ್ನು ಮಾಡಲೇಬೇಕು.

  2. Malateshara Padyada Pratuyonudu Shabdwannu Anusarisona,……………..Sakalikawada echcharikeya Ghantege dhanyawada..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *