ರಾಧೆ ಹೇಳಿದ್ದು

Share Button

      1.
ಅವ ನುಡಿಸಿದ್ದು
ಕೊಳಲನ್ನು
ಅಲ್ಲ ಕಣೇ-
ಕವಿಬೆರಳುಗಳಲ್ಲಿ
ನನ್ನನ್ನು  !

       2.
ರಾಧೆ ಎಂದರೆ ಶ್ಯಾಮ
ಶ್ಯಾಮನೆಂದರೆ ರಾಧೆ
ಹಾಲು ಮತ್ತದರ ಬಿಳುಪು
ಬೇರೆ ಬೇರೆ ಹೇಗೆ ?

        3.
ನಾನು ಹೆಣ್ಣೇ ಅವ ಗಂಡೇ?
ನಾವು ಸಂಧಿಸಿದ್ದು
ಬೇರೆಯದೇ ಬಿಂದುವಿನಲ್ಲಿ

ಹೆಣ್ಣು ಗಂಡುಗಳಾಗಿ
ನಮ್ಮ ನೋಡುವ ಹಾಡುವ
ಲೋಕದ ಕುರುಡಿಗೆ
ನನ್ನ  ಕನಿಕರ !

– ಗೋವಿಂದ ಹೆಗಡೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: