ಏನೇ ಸಂದರ್ಭ ಬಂದರೂ ಇಂದನ್ನು ಅಪ್ಪಿಕೊಳ್ಳಿ. ನೀವು ಪ್ರೀತಿಸುವ ಕೆಲಸ ಮಾಡಿ, ಕ್ಷಮಿಸಲು ಕಲಿಯಿರಿ, ನಿಯಮಾತೀತವಾಗಿ ನಿಮ್ಮನ್ನು ಪ್ರೀತಿಸಿ. ಇಲ್ಲಿ ನನ್ನ ಜೀವನಾನುಭವದ ಒಂದು ಮಾತು ಹೇಳುತ್ತೇನೆ ಕೇಳಿ. ನಾನು ಪ್ರತಿದಿನ ಅಂದುಕೊಳ್ಳುತ್ತೇನೆ-ನಾನು ಖಂಡಿತ 100 ವರ್ಷ ಇರುತ್ತೇನೆ, ಅದಕ್ಕಾಗಿ ಅನೇಕ ಯೋಚನೆಗಳ ಯೋಜನೆಗಳನ್ನು ಸಿದ್ಧಪಡಿಸುತ್ತಿರುತ್ತೇನೆ. ಪ್ರತಿನಿತ್ಯ ಖಾಲಿ ಕೂಡದೇ ಒಂದೊಂದಾಗಿ ಆ ಯೋಚನೆ, ಯೋಜನೆಗಳ ಅನುಷ್ಠಾನದ ಬಗ್ಗೆ ಅತ್ಯಂತ ಪ್ರಾಯೋಗಿಕವಾಗಿ ಚಿಂತಿಸಿ, ಸಾಧ್ಯವಾದಷ್ಟನ್ನು ಅಂದಂದೇ ಪೂರ್ಣಗೊಳಿಸುತ್ತೇನೆ. ಇದುವರೆಗೆ 111 ಪುಸ್ತಕಗಳನ್ನ ಬರೆದು, ಸ್ವತಃ ಪ್ರಕಟಿಸಿರುವ ನಾನು, ಆಯಸ್ಸು, ಆರೋಗ್ಯ, ಶಕ್ತಿ, ಹಣ ಇದ್ದಲ್ಲಿ ನನ್ನ ತಲೆಯಲ್ಲಿರುವ ಹಾಗೂ ಮನೆಯಲ್ಲಿರುವ ಮಾಹಿತಿಗಳನ್ನು ಬರೆಯುತ್ತಾ ಹೋದರೆ ಅದು 500 ಪುಸ್ತಕಗಳ ಸೀಮೆ ದಾಟಬಹುದು. ಆದರೆ ನನಗೆ ನಾಳೆಯೇ ಸಾವು ಬಂದರೂ ನಾನು ಅಂಜುವುದಿಲ್ಲ. ಅಂದರೆ ಇದರರ್ಥ ಯಾವ ಒಂದು ದಿನವನ್ನೂ ಚಟುವಟಿಕೆ ರಹಿತವಾಗಿ, ಸೋಮಾರಿತನದಿಂದ ತೂಕಡಿಸಿ, ತಲೆಯಲ್ಲಿ ಹೊಳೆದದ್ದನ್ನು ಬರೆಯದೇ ಬಿಟ್ಟು ಆಮೇಲೆ ಏನು ಮಾಡಬೇಕಿತ್ತು ಮರೆತುಹೋದೆನಲ್ಲ ಎಂದು ತಲೆ ಕೆರೆದುಕೊಳ್ಳಬಾರದು ಎಂಬುದೇ ನನ್ನ ಜೀವನದ ಮುಖ್ಯ ತತ್ವ.
ಪ್ರತಿದಿನ ಒಂದು ಹೊಸ ಆಹ್ವಾನ ಹಾಗೂ ಹೊಸದನ್ನು ಹುಡುಕುವ ಅವಕಾಶ :
ನಿಮ್ಮ ದೈನಂದಿಕ ದೇಹ, ಮನಸ್ಸುಗಳು ಶಾಂತವಾಗಿದ್ದು, ನೀವು ಶಾರೀರಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಆರೋಗ್ಯದಿಂದಿದ್ದರೆ ನಿಮ್ಮ ಮುಖದಲ್ಲಿ ಶಾಂತ ಪ್ರತಿಬಿಂಬ ಕಾಣುತ್ತದೆ. ಹಾಗಾಗಲು ಪ್ರಾಮಾಣಿಕತೆ ಮತ್ತು ನಗು ನಿಮ್ಮದಾಗಿರಬೇಕು. ನೀವು ಸದಾ ನಿಮ್ಮನ್ನೇ ಕೇಂದ್ರೀಕರಿಸಿಕೊಂಡು ಇತರರೊಂದಿಗೆ ಮಾತನಾಡದೇ, ಇತರರನ್ನೇ ಕೇಂದ್ರ ಮಾಡಿಕೊಳ್ಳಿ. ಶಾಂತಚಿತ್ತದಿಂದಿರುವುದನ್ನು ಕಲೆ ಮಾಡಿಕೊಳ್ಳಿ. ಸತ್ತು ಹೋದ ನಿನ್ನೆಯ ಬಗ್ಗೆ ಚಿಂತಿಸುತ್ತಾ, ಹುಟ್ಟದಿರುವ ನಾಳೆಯ ಬಗ್ಗೆ ಯೋಚಿಸದೇ, ಜೀವಂತ ನಡೆದಿರುವ ಇಂದಿನ ಮೇಲೆ ಕೇಂದ್ರೀಕರಿಸಿ. ಯಾವುದೋ ಒಂದು ದಿನ ನಿಮ್ಮ ಅತ್ಯುತ್ತಮ ಕ್ರಿಯೆ ಮಾಡುತ್ತೆನೆಂದು ಕನಸಿನಲ್ಲೇ ಮುಳುಗಬೇಡಿ. ಪ್ರತಿಕ್ಷಣ ಅತ್ಯುತ್ತಮ ಕ್ರಿಯೆ ಮಾಡುತ್ತೆನೆಂದು ಮಾಡಲು ಪ್ರಯತ್ನಿಸಿ.ಸದಾ ನಿಮ್ಮ ಬಾಳಿನಲ್ಲಿ ಮುಖ್ಯ ಪಾತ್ರಧಾರಿಯಾಗಿ ಭಾಗವಹಿಸಿ, ಏನಾದರೂ ನಿಮ್ಮ ತೀರ ಬಳಿ ಬರುವತನಕ ನೋಡುತ್ತಾ, ಕಾಯುತ್ತಾ ಇರಬೇಡಿ. ಸದಾ ಆರೋಗ್ಯದಿಂದಿರಿ. ಸರಿಯಾದ ಸಮತೋಲನ ಆಹಾರವನ್ನು ನಿತ್ಯ ಸೇವಿಸಿ. ಎಲ್ಲರಲ್ಲಿ ಕರುಣೆ ತೋರಿಸಿ. ತಪ್ಪು ಮಾಡಿದಾಗ ನಿಮ್ಮನ್ನೇ ನೀವು ಆಬಾರಿ ಕ್ಷಮಿಸಿಕೊಂಡು ಮುಂದಿನ ಬಾರಿ ಆ ತಪ್ಪು ಮಾಡಬೇಡಿ. ಸದಾ ಇತರರನ್ನು ಬೈಯ್ದು ಟೀಕಿಸದೇ ಆಗಾಗ ಹೊಗಳಿ. ನಿಮ್ಮ ಮನಸ್ಸಿನ ಹೊಟ್ಟೆಯ ಮಾತು ಕೇಳಿ. ಪ್ರತಿನಿತ್ಯ ನಿಮಗೆ ನೀವೆ ಖುಷಿ ಪಡುವ ಕೆಲಸ ಮಾಡಿ. .ನಾವೆಲ್ಲ ಪ್ರೀತಿಯಿಂದ ಒಂದಾದ ಕೊಂಡಿ ಹೊಂದಿರುವೆ ಎಂದು ಆಗಾಗ ನೀವೇ ಜ್ಞಾಪಿಸಿಕೊಳ್ಳಿ. ಸಣ್ಣ ವಸ್ತುವಿಗಾಗಿ ಬಹಳ ಚಿಂತಿಸಿ ಸುಮ್ಮನೆ ಹೆಚ್ಚು ಕಷ್ಟ ಪಟ್ಟು ಬೆವರು ಹರಿಸಬೇಡಿ. ಪ್ರತಿಯೊಂದನ್ನು ಪ್ರಶ್ನಿಸಿ ಉತ್ತರ ಪಡೆಯಿರಿ. ಎಲ್ಲ ಸರಳವಾಗಿಸಿಕೊಳ್ಳಿ. ಇತರರಿಗೆ ಯಾವಾಗ ಬೇಕೋ ಆಗ ಅವರಿಗೆ ನೀವೆಷ್ಟು ಸಹಾಯ ಮಾಡಬಲ್ಲಿರೋ ಮಾಡಿ.
ಜೀವನದಲ್ಲಿ ಕಳೆದುಹೋದ ಕ್ಷಣ ಮತ್ತೆ ಬರುವುದಿಲ್ಲ. ಹೀಗಾಗಿ ನಿಮಗೆ ಸಿಕ್ಕ ಪ್ರತಿದಿನದ ಪ್ರತಿ ನಿಮಿಷ ಅನುಭವಿಸಿ. ನಿಮ್ಮ ಜೀವನದ ಪ್ರತಿ ಸೆಕೆಂಡಿನ ಜೀವನ ಮೆಚ್ಚಿ. ಹೊಸ ಬಾಗಿಲುಗಳ ಮೂಲಕ ಇಣುಕಿ. ಬಹಳ ಕಾಲ ಇನ್ನೊಂದು ಹೊಸ ಬಾಗಿಲುಗಳ ಮೂಲಕ ಇಣುಕಿ ಬಹಳ ಕಾಲ ಇನ್ನೊಂದು ನಿಮ್ಮ ಪಕ್ಕ ಆದ್ಭುತವಾದದ್ದು ಇರಬಹುದು. ನೀವು ಹುಟ್ಟಿರುವುದೇ ಇದುವರೆಗೆ ಬೆಳೆದಿರುವುದೇ ಎಲ್ಲವೂ ಪ್ರಕೃತಿಯ ಕಾಣಿಕೆ ಎಂಬುದನ್ನು ಮರೆಯಬೇಡಿ, ಎಲ್ಲಾ ಕಾಣಿಕೆಗಳಲ್ಲೂ ಅಮೂಲ್ಯವಾದುದು ಜೀವನ ಮತ್ತು ಪ್ರೀತಿ, ನಿಮ್ಮ ಆತ್ಮವನ್ನು ಯಾವ ಯಾವುದಕ್ಕೋ ಬಂಧಿಸಿಕೊಳ್ಳದೇ ಮುಕ್ತವಾಗಿಡಿ. ಸದಾ ಪರಿಣಾಮಗಳಿಗೆ ಹೆಚ್ಚು ಮಹತ್ವ ಕೊಡಬೇಡಿ. ಹೊಸ ಹೊಸ ಪ್ರಯತ್ನಕ್ಕೆ ಮಹತ್ವ ಕೊಡಿ. ಚಿಕ್ಕ ಮಗುವಿನೊಂದಿಗೆ, ಉದಾ: 2 ವರ್ಷದ ಮಗುವಿನೊಂದಿಗೆ ಹೆಚ್ಚು ಕಾಲ ಕಳೆಯಿರಿ. ಜೀವನದ ಪ್ರತಿಕ್ಷಣ ಆನಂದಿಸಿ.
”ಆಗಾಗ ಚಿಕ್ಕಚಿಕ್ಕ ಪ್ರವಾಸಕ್ಕೆ ಹಣ ಹೊಂದಿಸಿ. ಅದು ಯಾವಾಗಲೂ ಸಾಹಸಮಯವಾಗಿರುತ್ತದೆ. ನಿಯಮಿತ ಸಂಪನ್ಮೂಲಗಳಿಂದ ನಿಮ್ಮ ಅದೃಷ್ಟ ಅರ್ಪಿಸುವುದನ್ನು ಆನಂದಿಸು. ಪ್ರತಿ ಉಸಿರಿಗೂ ಪ್ರಾಮಾಣಿಕವಾಗಿ ಕೃತಜ್ಞತೆ ಹೇಳು ಮೊದಲು ನಿನ್ನನ್ನೇ ನಂಬು. ನಿನ್ನ ಶಕ್ತಿಗಳನ್ನು ನಂಬು. ನಿನ್ನ ದೌರ್ಬಲ್ಯಗಳನ್ನು ಗುರುತಿಸು. ಏನನ್ನಾದರೂ ಮಾಡುವ ಮೊದಲು ಕ್ಷಣಕಾಲ ನಿಲ್ಲು. ಗಮನಿಸು, ಯೋಚಿಸು. ನಿನ್ನ ಆಶಯಗಳ ಬೆನ್ನು ಹತ್ತು. – ಆದರೆ ಹೆದರಿಕೆಯನ್ನಲ್ಲ” ಹೀಗೆಂದು ಹೇಳುತ್ತಾರೆ, ಲೋರಿ ಡೆಶ್‌ಚನೆ .

ಎನ್.ವ್ಹಿ.ರಮೇಶ್