Daily Archive: June 22, 2017
ಹೌದು ನಮ್ಮ ನಡುವೆ ಇಂತಹ ಜನಗಳಿರುತ್ತಾರೆ. ತುಂಬಿದ ಸಭೆಯಲ್ಲೋ, ಗೆಳೆಯರ ಗುಂಪಿನಲ್ಲಿ ಚರ್ಚೆಯ ಸಮಯದಲ್ಲೋ ಅಥವಾ ಹರಟೆಯ ಸಮಯದಲ್ಲೋ, ಯಾವಸಂದರ್ಭದಲ್ಲಿಯೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಸದಾ ನಿಮ್ಮನ್ನು, ನಿಮ್ಮ ಮಾತುಗಳನ್ನು, ನಿಮ್ಮ ವ್ಯಕ್ತಿತ್ವವನ್ನು ಅಲ್ಲೆಗಳೆಯುತ್ತಾರೆ, ನಿಮ್ಮನ್ನು ಕೀಳಾಗಿ ಬಿಂಬಿಸುವ ಪ್ರಯತ್ನದಲ್ಲಿರುತ್ತಾರೆ. ಎಲ್ಲರ ಮುಂದೆ ನಿಮ್ಮ ದೌರ್ಬಲ್ಯವನ್ನು...
ಏಕೆ ‘ಬರ’ದಿರುವೆ ಏಕೆ ಮುನಿದಿರುವೆ ಹೇಳು ಮಳೆಯೇ ಹೇಳುಹನಿ ನೀರಿಗಿಲ್ಲಿ ದಿನ ಪರದಾಟ ನೋಡಿಲ್ಲಿ ಕಾಣದೇ ಜಗದ ಈ ಗೋಳುಮೋಡವಾಗಿ ನೀನು ಹಾದು ಹೋದರೂ ಸುರಿವ ಮನಸೇಕಿಲ್ಲಮುಂಗಾರು ಗತಿಸಿದರೂ ಹಿಂಗಾರು ಆಗಮಿಸಿದರೂ ನಿನ್ನ ದರುಶನವೇ ಇಲ್ಲವೇಕೆಭೂಮಿ ಉತ್ತಿಲ್ಲ ಬೀಜ ಬಿತ್ತಿಲ್ಲಮುಂದಿನ ಬದುಕು ಹೇಗೆಭೀಕರತೆಯ ತಲುಪಿದೆ ಭೂಮಿಯ ಬದುಕು...
ಬನ್ನಿ ಯಾರಾದರೂ ಎತ್ತಿಕೊಳ್ಳಿ, ಶಿಲ್ಪವಾಗಿಸಿ, ಕಪ್ಪು ಕಲ್ಲಿನಂತೆ ನಾನು ಗರ್ಭಗುಡಿಯ ಸೇರಬೇಕು, ಶಿಲ್ಪವಾಗಬೇಕು. ದೂಪ-ದೀಪ, ನೈವೇದ್ಯ, ಹೂವು ಎಲ್ಲದರಿಂದ ನಾ ಸಿಂಗಾರಗೊಳ್ಳಬೇಕು. ಮಂತ್ರ-ಘೋಷ, ಗಂಟೆ, ವಾದ್ಯ ವೃಂದದ ನಡುವೆ ಪ್ರಸನ್ನಳಾಗಬೇಕು. ಆಕಾರಕೊಡಿ ನನಗೆ ನಾ ಶಿಲ್ಪವಾಗಬೇಕು. ಮಣ್ಣೊಳಗೆ ಮಣ್ಣಾಗಿ ಸೇರಲಾರೆ ನಾನು. ಸೂರಿಗೆ ಹೊರೆಯಾಗಿ ಬದುಕಲಾರೆ ನಾನು....
ಗಂಧ ಮಾದನ ಪರ್ವತ 1.5 ಮೈಲಿ ದೂರದಲ್ಲಿದೆ. ಇಲ್ಲಿ ರಾಮನ ಪಾದವನ್ನು ಕಾಣಬಹುದು. ಎತ್ತರವಾದ ಮರಳು ಗುಡ್ಡೆಯ ಮೇಲೆ ಈ ಗುಡಿಯಿರುವುದರಿಂದ ದೂರದಿಂದ ಶ್ರೀ ರಾಮೇಶ್ವರ ಪಟ್ಟಣ ಮತ್ತು ದ್ವೀಪಗಳನ್ನು ಕಾಣಬಹುದು. ಶ್ರೀ ಕೋದಂಡಸ್ವಾಮಿ ದೇವಾಲಯವು ರಾಮೇಶ್ವರದಿಂದ 5 ಮೈಲಿ ದೂರದಲ್ಲಿ ರಾಮನ ಹೆಸರಿನಲ್ಲಿ ಕಟ್ಟಿಸಿದ ದೇವಾಲಯವಿದು....
ಕೆಲ ಆಸೆಗಳು ಹಾಗೇ, ಏನಕ್ಕೆ ಹುಟ್ಟುತ್ತವೆ ಎಂದು ಯಾರಿಗೂ ಅರ್ಥವಾಗಲ್ಲ. ಯಾವಾಗ ಹುಟ್ಟಿತೆಂಬ ನೆನಪೂ ಇರಲ್ಲ. ಆದರೂ ಮನದ ಒಂದು ಮೂಲೆಯಲ್ಲಿ ಸುಮ್ಮಗೆ ಗೂಡು ಕಟ್ಟಿ ಕುಳಿತಿರುತ್ತವೆ.ಜೀರುಂಡೆಯಂತೆ ಒಂದೇ ಸಮನೆ ಸದ್ದು ಮಾಡದೆ ಹೋದರೂ , ಸಮಯದೊರೆತಾಗೆಲ್ಲಾ ತನ್ನ ಇರುವಿಕೆಯನ್ನು ತೋರಿಸುತ್ತಿರುತ್ತದೆ. ನನ್ನದೇನೂ ಮಹಾದಾಸೆಯಲ್ಲ. ಅದೊಂದು ಪುಟ್ಟ...
ಮೋಡದ ಹಿಂದೆ ಅಡಗಿದ ಈ ಬೆಕ್ಕು ಕವಿದ ಮಂಕು ಬೆಳಕಲ್ಲಿ ನೆಲದ ಎದೆಹಾಲಿಗೆ ಹೊಂಚುತ್ತಿದೆ ಲೋಕ ಬೆಳಗುವ ಪುನುಗು ಬೆಳಕು ತನ್ನಲ್ಲೇ ಇರುವುದ ಅರಿಯದೇ ?! ; – ಡಾ.ಗೋವಿಂದ ಹೆಗಡೆ +2
ಓದು ಬಿಡದೆ ಓದು ಅರಿ ಬೆರೆತು ಅರಿ ತಿಳಿ ಹೆಚ್ಚು ತಿಳಿ ತಿಳಿಯುತ್ತಾ ಒಳ ಕೊಳೆ ಕೊಚ್ಚೆ ಕೆಸರು ದು:ಖ ದುಮ್ಮಾನ ವ್ಯಸನ ತ ಳ ಮುಟ್ಟಿ ಉಳಿವ ತಿಳಿ ಸ್ವಚ್ಛ ಜಲದಂತೆ ಜ್ಞಾನ ತಿಳಿ – ಅನಂತ ರಮೇಶ್ +3
ಅಂದು ನಾನು ಏಳನೇ ಕ್ಲಾಸು. ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಶಾಲೆಯ ಇಬ್ಬರು ಅಧ್ಯಾಪಕರು ನಿವೃತ್ತರಾಗುವರಿದ್ದರು. ಮುಂದಿನ ವರ್ಷ ನಾವು ಹೈಸ್ಕೂಲು … ಅದಕ್ಕೆಂದೇ ಬೀಳ್ಕೊಡುವ ಸಮಾರಂಭವನ್ನು ಹಮ್ಮಿಕ್ಕೊಳ್ಳಲಾಗಿತ್ತು. ನಿವೃತ್ತರಾಗಿ ಹೋಗುವ ಅಧ್ಯಾಪಕರಿಗೆ ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸುವುದು ರೂಢಿ. ತದನಂತರ ಸಹ ಅಧ್ಯಾಪಕರು...
ನಿಮ್ಮ ಅನಿಸಿಕೆಗಳು…