Monthly Archive: July 2016
ಶರಣಾಗತಿ
ಕಾಣುವವರೆಗೂ ಅವಳ ಮತ್ತು ಅವಳ ಕವಿತೆಗಳ ಕಾವ್ಯವಿಷ್ಟು ಬಿಸಿಯಾಗಿರುತ್ತದೆ ಮತ್ತು ನಿಶೆ ತುಂಬಿರುತ್ತದೆಯೆಂದು ಗೊತ್ತಿರಲಿಲ್ಲ ಸುಡು ಬೇಸಿಗೆಯಲೂ ಸುರಿವ ಬಿರು ಮಳೆಯಾಗುವ ಕೊರೆಯುವ ಚಳಿಯಲೂ ಅಗ್ಗಿಷ್ಠಿಕೆಯಾಗುವ ಜಡಿಮಳೆಯ ಮದ್ಯರಾತ್ರಿಯಲೂ ಹೊಕ್ಕುಳದ ಕಾವಾಗುವ ಜೀವ ಮಿಡಿಸುವ ಸಹ್ಯಾದ್ರಿಯ ಹರಿದ್ವರ್ಣದ ಕಾನನದ ನಿಗೂಢತೆಯೊಳಗೂ ಸತ್ಯ ದರ್ಶನ ಮಾಡಿಸುವ ನನ್ನೊಳಗಿನ...
ವಿದ್ಯುತ್ ದಾಸರ ಮನೆಯ ಕಥೆ.. .
ಕೆಲವು ದಿನಗಳ ಹಿಂದೆ ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಲಾಖೆಯವರು ಬಂದು ಪರೀಕ್ಷಿಸಿ, ಕಂಬದಲ್ಲಿ ಕರೆಂಟ್ ಇದೆ, ನಿಮ್ಮ ಮನೆ ಕೇಬಲ್ ಕೆಟ್ಟೋಗಿದೆ, ಇಲೆಕ್ಟ್ರಿಶಿಯನ್ ಕರೆಸಿ ಸರಿಪಡಿಸಿಕೊಳ್ಳಿ, ಎಂದರು. ಇಲೆಕ್ಟ್ರಿಶಿಯನ್ ಬಂದು , ಕಂಬ ಮತ್ತು ಮನೆಯ ಅಂತರಕ್ಕೆ ಸರಿಹೊಂದುವ ಅಳತೆಯ ಕೇಬಲ್ ತಂದು,...
ಮಳೆಯ ತಾನನ..ನೆನಪುಗಳ ರಿಂಗಣ
ಸುಡು ಸುಡು ರಣ ಬಿಸಿಲಿನ ಹಾಹಾಕಾರಕ್ಕೋ,ಅಹಂಕಾರಕ್ಕೋ ಸೆಡ್ಡು ಹೊಡೆದಂತೆ ಈಗ ಭೋರೆಂದು ಸುರಿಯುತ್ತಿದೆ ಮಳೆ.ಇಷ್ಟು ದಿನ ಉರಿ ಬಿಸಿಲಲ್ಲಿ ಕುದ್ದು,ಬೆಂದು ,ಆರಿ ಬಸವಳಿದ ಬಿಸಿಲಿನ ಝಳದ ತಾರಕಕ್ಕೇರಿದ ತಾಪದ ಇನಿತು ಕುರುಹೇ ಇಲ್ಲದಂತೆ ಮತ್ತೆ ಮಳೆ ಹೊಯ್ಯುತ್ತಿದೆ.ಆ ವೈಶಾಖದ ಸುಡು ಧಗೆಯಲ್ಲಿ ಮತ್ತಷ್ಟು ಪ್ರಖರವಾಗಿ ಜ್ವಲಿಸುತ್ತಾ ನಿಂತ...
ಅಪರ್ಣಾ…ಅಪ್ರತಿಮ ಪ್ರತಿಭೆ
ಅದೊಂದು ಕಾಲ…ಸರಿ ಸುಮಾರು ಹತ್ತು ಹನ್ನೆರಡು ವರುಷಗಳ ಹಿಂದೆ ಅನ್ನಬಹುದು.ನಾನು ಊರಿನ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದೆ.ನಮ್ಮ ಮನೆ ಸಂಪೂರ್ಣ ಹಳ್ಳಿ ವಾತಾವರಣದಲ್ಲಿತ್ತು.ಅಪ್ಪ ಮನೆಗೆ ಟಿವಿ ತಂದ ಸಂದರ್ಭದಲ್ಲಿ ನಾವು ಕನ್ನಡ ಬರುವ ತನಕ ಟಿ ವಿ ಮುಂದೆ ಹಾಜರ್.ದೂರದರ್ಶನದ ದೂರ ಅರಿವಾಗಿ ವಾರ್ತೆಯನ್ನು ಮಾತ್ರ ತಪ್ಪದೇ...
ಹಲಸಿನ ಸಿಹಿಹಲ್ವ, ಖಾರ ಸೋಂಟೆ
ಬಿರುಬೇಸಗೆಯಲ್ಲಿ ಬಲಿತ ಹಲಸಿನಕಾಯಿಗಳು ಇದ್ದರೆ, ಬಿಸಿಲನ್ನೇ ಸದುಪಯೋಗಪಡಿಸಿಕೊಂಡು ಹಪ್ಪಳ ತಯಾರಿಸಿಟ್ಟುಕೊಂಡರೆ ತಿನ್ನಲೂ ಚೆನ್ನಾಗಿರುತ್ತದೆ, ಪ್ರೀತಿಪಾತ್ರರಿಗೆ ಹಂಚಲೂ ಖುಷಿಯಾಗುತ್ತದೆ, ವ್ಯರ್ಥವಾಗಿ ಹೋಗುವ ಹಲಸಿನಕಾಯಿಗಳನ್ನು ಇನ್ನಷ್ಟು ದಿನಗಳ ಬಳಕೆಗಾಗಿ ಶೇಖರಿಸುವ ಮೌಲ್ಯವರ್ಧನೆಯೂ ಆಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲೂ ಧಾರಾಳವಾಗಿ ಹಲಸಿನ ಕಾಯಿ/ಹಣ್ಣುಗಳು ಲಭ್ಯ. ಮಳೆ ಇರುವುದರಿಂದ ಹಪ್ಪಳ ಮಾಡಲಾಗದಿದ್ದರೂ, ಹಲಸಿನ...
ನಿ೦ಬೆರಸದೊಳಗಿನ ರಸವಾರ್ತೆ….
“ತಪ್ಪೂ ಮಾಡದವ್ರು ಯಾರವ್ರೇ….?? “, ಇದುವರೆಗೆ ಜೀವನದಲ್ಲಿ ಒಮ್ಮೆಯಾದರೂ ಸಣ್ಣದು ಯಾ ದೊಡ್ಡದು, ಗೊತ್ತಿದ್ದು ಯಾ ಗೊತ್ತಿಲ್ಲದೆ, ಅಸಹಾಯಕರಾಗಿ ಅಥವಾ ಬೇರೆ ವಿಧಿಯಿಲ್ಲದೆ ತಪ್ಪು ಮಾಡಿದ್ದೀರಾದರೆ, ನೀವು ಯಾರಿಗೆ ಮನಸ್ಸು ನೋಯಿಸಿದ್ದೀರೋ ಅವರಲ್ಲಿ ಕ್ಷಮೆ ಕೇಳಿದರೂ ಅವರು ನಿಮ್ಮನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಿಲ್ಲವಾದರೆ, ಹೀಗೆ ಎಲ್ಲವೂ ಸೇರಿ ನಿಮ್ಮ...
ಸುರಲೋಕದ ಪಾರಿಜಾತ…
ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ? ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು ಯಾರ ಉದರದಲವಿತ ಚೆಲುವ ಗುಟ್ಟು ಯಾರು ನಿನ್ನನು ಪಡೆದ...
ನಿಮ್ಮ ಅನಿಸಿಕೆಗಳು…