Author: Savithri S Bhat, savithrishri@gmail.com
ನಿನ್ನೆ ಮಧ್ಯಾಹ್ನ ಊಟ ಮಾಡಿ, ಇನ್ನೇನು ಸ್ವಲ್ಪ ವಿಶ್ರಾಂತಿ ಮಾಡೋಣವೆಂದು ಹೊರಡುವ ಮೊದಲೇ, ಒಮ್ಮೆ ಮೊಬೈಲ್ ಫೋನ್ ಕೈಗೆತ್ತಿಕೊಂಡು ಮೆಸ್ಸೇಜ್ ಗಳನ್ನು ನೋಡುತ್ತಿದ್ದೆ. ಆಗಲೇ, ಫೋನ್ ರಿಂಗ್ ಆಯಿತು. ಯಾವುದೋ ಅಪರಿಚಿತ ನಂಬರ್. ಕಿವಿಯಾನಿಸಿದಾಗ, ಆಕಡೆಯಿಂದ ಪರಿಚಿತ ಧ್ವನಿಯೇ. ‘ಅಕ್ಕಾ, ಸರ್ ಗೆ ಒಂದು ಕೋರಿಯರ್ ಬಂದಿದೆ....
ಹೆಚ್ಚಾಗಿ ಹಳ್ಳಿಗಳಲ್ಲಿ ಅಡಿಕೆತೋಟದಲ್ಲಿ ಬಾಳೆಯನ್ನು ಉಪಬೆಳೆಯಾಗಿ ಬೆಳೆಸುತ್ತಾರೆ. ಹಿತ್ತಿಲಲ್ಲಿಯೂ ಒಂದೆರಡು ಬಾಳೆ ಗಿಡಗಳನ್ನು ಕಾಣಬಹುದು. ಬಾಳೆ ಗೊನೆ ಬಿಟ್ಟು, ಕಾಯಿ ಸ್ವಲ್ಪ ಬಲಿತೊಡನೆ ಬಾಳೆ ಹೂವನ್ನು ಕೊಯಿದರೆ ಕಾಯಿ ಹೆಚ್ಹು ದಪ್ಪಗಾಗುವುದು ಎಂಬುದು ಅನುಭವದ ಮಾತು. ಬಾಳೆಹೂವನ್ನು ಎಸೆಯಬೇಕಿಲ್ಲ. ಇದರಿಂದ ರುಚಿಕರ...
-ಸಾವಿತ್ರಿ ಎಸ್ .ಭಟ್ ಪುತ್ತೂರು +6
ಅತ್ಯಂತ ಬಲಶಾಲಿಯಾದ ಬಲಿಚಕ್ರವರ್ತಿ ಅಸುರ ನಾದರೂ ಮಹಾದಾನಿಯಾಗಿದ್ದನು.ಅವನ ನೆನಪಿಗಾಗಿ ಆಚರಿಸುವ ಪೂಜೆಗೆ ಬಲೀಂದ್ರ ಪೂಜೆ ಎನ್ನುತ್ತಾರೆ.ಈ ಪೂಜೆಯನ್ನು ದೀಪಾವಳಿಯ ‘ಪಾಡ್ಯ’ ದ ದಿನ ಆಚರಿಸುತ್ತೇವೆ . ‘ದೀಪಾವಳಿ’ ಅಂದ ಕೂಡಲೇ ನೆನಪಾಗುವುದು ಬಾಲ್ಯದಲ್ಲಿ ನಾವು ಅಕ್ಕ ಅಣ್ಣ೦ದಿರೊಡನೆ ಆಚರಿಸುತ್ತಿದ್ದ ದೀಪಾವಳಿ. ನನ್ನ ಬಾಲ್ಯದಲ್ಲಿ ಕೇರಳದ ಗಡಿನಾಡಾದ ಕಾಸರಗೋಡು ಜಿಲ್ಲೆಯ...
‘ಕೂವೆ’ ಒಂದು ಔಷಧೀಯ ಸಸ್ಯವಾಗಿದೆ. ಉಪಯೋಗ ನೂರಾರು ಎಂದರೂ ಸುಳ್ಳಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಮನೆಮನೆಯ ಹಿತ್ತಿಲಲ್ಲಿ ನೆಟ್ಟು ಬೆಳೆಸುತ್ತಿದ್ದರು. ಇದು ಸೊಂಪಾಗಿ ಬೆಳೆಯುವ ಗಿಡ. ನೋಡಲು ಅಲಂಕಾರಿಕ ಸಸ್ಯಗಳನ್ನು ಹೋಲುತ್ತದೆ. ಇದನ್ನು ಮಳೆಗಾಲ ಮುಗಿಯುತ್ತಿದ್ದಂತೆಯೇ ಬೇರೆ ಬೇರೆ ಸಾಲು ಮಾಡಿ ನೆಟ್ಟರೆ ಎರಡು-ಮೂರು ತಿಂಗಳುಗಳಲ್ಲಿ...
ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿಯ೦ದು ಹೊಸವರುಷವಾಗಿ ಆಚರಿಸಿದರೆ ದಕ್ಶಿಣಕನ್ನಡ, ಕೇರಳದಲ್ಲಿ ಸೌರಮಾನ ಯುಗಾದಿಯನ್ನು ಹೊಸವರುಷ ವಾಗಿ ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿಯು ಅಮವಾಸ್ಯೆ ಯ ಮರುದಿನ ಬ೦ದರೆ ಸೌರಮಾನ ಯುಗಾದಿಯು ಮೇಷ ಸ೦ಕ್ರಮಣದ ಮರುದಿನ ಬರುತ್ತದೆ.ಈ ದಿನವನ್ನು ‘ವಿಷು ಹಬ್ಬ’ ತುಳುವಿನಲ್ಲಿ ‘ಬಿಸು ಪರ್ಬ’ ಎ೦ದು ಕರೆಯುತ್ತಾರೆ. ನಾವೂ ಇದೇ ಪದ್ಧತಿಯನ್ನು ಅನುಸರಿಸುತ್ತೇವೆ. ವಿಷು ಹಬ್ಬದ...
ಹಸಿ ಬಟಾಣಿ ಕಾಳಿನ ಗಾತ್ರದ, ತಿಳಿ ಗುಲಾಬಿ ಬಣ್ಣದ, ಎರಡು ಹಣ್ಣುಗಳನ್ನು ಒಮ್ಮೆಗೆ ಬಾಯಿಗೆ ಹಾಕಿ ಚಪ್ಪರಿಸಿ. ಆಹಾ.., ಸ್ವಾದಿಷ್ಟ.! ಆದರೆ ಹೆಚ್ಚು ರಸವಿಲ್ಲದ, ಶುಷ್ಕ ಹಣ್ಣು ಬಾಯೊಳಗೆ ಸಿಪ್ಪೆ ಸಹಿತ ಕರಗುವುದು ನಿಜ. ಕೆಂಪು ಕೇಪುಳ(ಕಿಸ್ಕಾರ) ಹಣ್ಣಿಗಿಂತ ಸ್ವಲ್ಪ ಹೆಚ್ಚು ಪಲ್ಪ್, ಕಡಿಮೆ ರಸ. ಮಕ್ಕಳಿಗಂತೂ...
ಬಿರುಬೇಸಗೆಯಲ್ಲಿ ಬಲಿತ ಹಲಸಿನಕಾಯಿಗಳು ಇದ್ದರೆ, ಬಿಸಿಲನ್ನೇ ಸದುಪಯೋಗಪಡಿಸಿಕೊಂಡು ಹಪ್ಪಳ ತಯಾರಿಸಿಟ್ಟುಕೊಂಡರೆ ತಿನ್ನಲೂ ಚೆನ್ನಾಗಿರುತ್ತದೆ, ಪ್ರೀತಿಪಾತ್ರರಿಗೆ ಹಂಚಲೂ ಖುಷಿಯಾಗುತ್ತದೆ, ವ್ಯರ್ಥವಾಗಿ ಹೋಗುವ ಹಲಸಿನಕಾಯಿಗಳನ್ನು ಇನ್ನಷ್ಟು ದಿನಗಳ ಬಳಕೆಗಾಗಿ ಶೇಖರಿಸುವ ಮೌಲ್ಯವರ್ಧನೆಯೂ ಆಗುತ್ತದೆ. ಕರಾವಳಿಯಲ್ಲಿ ಮಳೆಗಾಲದಲ್ಲೂ ಧಾರಾಳವಾಗಿ ಹಲಸಿನ ಕಾಯಿ/ಹಣ್ಣುಗಳು ಲಭ್ಯ. ಮಳೆ ಇರುವುದರಿಂದ ಹಪ್ಪಳ ಮಾಡಲಾಗದಿದ್ದರೂ, ಹಲಸಿನ...
ಐದಾರು ವರ್ಷ ಹಿ೦ದಿನ ಘಟನೆ.ಮಗಳ ವಿವಾಹ, ವಧೂಗೃಹಪ್ರವೇಶ,ಮು೦ತಾದ ಕಾರ್ಯ ಕ್ರಮಗಳೆಲ್ಲಾ ವಿಜೃಂಭಣೆಯಿ೦ದ ನಡೆದಿದ್ದುವು. ನ೦ತರ ವರನ ಮನೆಯಲ್ಲಿ ಕೆಲವು ಮನೋರ೦ಜನಾ ಕಾರ್ಯಕ್ರಮಗಳನ್ನು ಇಟ್ಟುಕೊ೦ಡಿದ್ದರು.ಆದುದರಿ೦ದ ನಾನು, ಯಜಮಾನರು ಅಲ್ಲಿ ಹೆಚ್ಹು ಹೊತ್ತು ಉಳಿಯಬೇಕಾಗಿ ಬ೦ತು.ನಮ್ಮೊ೦ದಿಗೆ ಬ೦ದ ಉಳಿದ ಮನೆಯ ಸದಸ್ಯರೆಲ್ಲಾ ಊಟವಾದೊಡನೆ ನಮ್ಮಿ೦ದ ಮೊದಲೇ ಹೊರಟಿದ್ದರು. ಅಲ್ಲಿನ ವಿವಿಧ...
‘ಉಂಡುಲಕಾಳು’ ಎಂದ ಹೆಸರು ಕೇಳಿದಾಗ, ಹೆಸರುಕಾಳು, ಅಲಸಂದೆ ಕಾಳು, ತೊಗರಿಕಾಳು… ಇತ್ಯಾದಿ ವರ್ಗದ ಯಾವುದೋ ಒಂದು ದ್ವಿದಳ ಧಾನ್ಯ ಇರಬೇಕು ಅಂತ ಭಾವಿಸುವ ಸಾಧ್ಯತೆ ಇದೆ. ಆದರೆ ಇದು ಧಾನ್ಯವಲ್ಲ ! ಹೀಗೆ, ಉಂಡುಲಕಾಳಿನ ವಿಶೇಷತೆ ಅದರ ಹೆಸರಿನಿಂದಲೇ ಆರಂಭವಾಗುತ್ತದೆ ಮಲೆನಾಡು, ಕರಾವಳಿಗಳಲ್ಲಿ ನಾಮಾನ್ಯವಾಗಿ ಜನವರಿಯಿಂದ...
ನಿಮ್ಮ ಅನಿಸಿಕೆಗಳು…