ಅಂತ:ಕರಣ
,
ಅಪರಾತ್ರಿಯೊಳಗೆ ಬೇಟಿಯಾದವನು
ಕಂಡದ್ದು ಜಗತ್ತಿನ ಕೊನೆಯ ಮನುಷ್ಯನ ಹಾಗೆ
ಬಾ ಕೂತುಕೊ ಎಂದವನ ದ್ವನಿಯಲ್ಲಿ ತಾಯಿಯ
ಮಮತೆಯಿತ್ತು
ತಗೋ ತಿನ್ನೆಂದು ಕೊಟ್ಟ ರೊಟ್ಟಿಯೊಳಗೆ ತಂದೆಯ ಪ್ರೀತಿಯಿತ್ತು
ಮಲಗೆಂದು ತನ್ನ ತೊಡೆಗಳ ಮಡಚಿ
ಮಡಿಲು ಮಾಡಿಕೊಟ್ಟವನಲ್ಲಿ
ನಾನೆಂದೂ ನೋಡಿರದ
ದೇವರ ಅಂತ:ಕರಣವಿತ್ತು
ಆ ರಾತ್ರಿ ನಾನು ಮತ್ತೊಮ್ಮೆ ಮಗುವಾಗಿದ್ದೆ.
– ಕು.ಸ.ಮಧುಸೂದನನಾಯರ್