Author: Smitha, smitha.hasiru@gmail.com
ಕೊಡಗು ಮತ್ತು ದ. ಕ. ಗಡಿಭಾಗವಾದ ಸಂಪಾಜೆಯ ದಬ್ಬಡ್ಕ ಎನ್ನುವ ಕುಗ್ರಾಮದಲ್ಲಿದ್ದುಕೊಂಡು ತನ್ನ, ಸ್ವಾನುಭವ, ಪ್ರಾಮಾಣಿಕ , ದಿಟ್ಟ ಬರೆಹಗಳ ಮೂಲಕ ನಾಡಿನಾದ್ಯಂತ ಚಿರಪರಿಚಿತ ಹೆಸರು ಶ್ರೀಮತಿ ಸಹನಾ ಕಾಂತಬೈಲು. ಇತ್ತೀಚೆಗೆ ಬಲು ಪ್ರಚಲಿತದಲ್ಲಿರುವ ಅವರ ಕೃತಿ ’ಆನೆ ಸಾಕಲು ಹೊರಟವಳು ’ . ಪುಸ್ತಕದ ತಲೆ...
ಬರವಣಿಗೆಯ ಬಗ್ಗೆ ಅತೀವ ಆಸಕ್ತಿಯನ್ನೂ, ಮುಗಿಯದ ಕುತೂಹಲವನ್ನೂ, ಜೊತೆಗೆ ಅವುಗಳ ಕುರಿತಾದ ಅನೇಕ ಶಂಕೆಯನ್ನು ಇಟ್ಟಿಕೊಂಡು ನಾನೇನು ಬರೆಯಲಾರೆ ಅನ್ನುತ್ತಲೇ ಈಗಾಗಲೇ ಅಕ್ಷರದ ಪಯಣದಲ್ಲಿ ರಹದಾರಿಯನ್ನು ಕ್ರಮಿಸಿರುವಾಕೆ ಸುನೀತ ಕುಶಾಲನಗರ. ಕತೆ, ಕವಿತೆ,ಪ್ರಬಂಧ, ಅನುವಾದ ಎಲ್ಲದ್ದಕ್ಕೂ ಸೈ ಎನ್ನುತ್ತಲೇ ಅವುಗಳೆಲ್ಲದರೊಂದಿಗೆ ಏಕಕಾಲದಲ್ಲಿ ತೊಡಗಿಸಿಕೊಳ್ಳುತ್ತಾ, ನಾನಿನ್ನೂ ಕಲಿಯುವುದು ಸಾಕಷ್ಟಿದೆ...
ಈ ಕವಿತೆಗಳು ಮತ್ತು ಹೂವುಗಳು ಬೇರೆ ಬೇರೆಯಲ್ಲ ಅಂತ ಅನ್ನಿಸುತ್ತಿದೆ. ಹಿತ್ತಲಿನ ಮೂಲೆಯಲ್ಲಿ ಯಾರ ದೇಖರೇಖಿಯೂ ಇಲ್ಲದೆ ತಮ್ಮಷ್ಟಕ್ಕೆ ತಾವೇ ಅರಳಿಕೊಂಡ ಸುಮಗಳು ತಮ್ಮ ಪರಿಮಳದ ಮೂಲಕವಷ್ಟೇ ಇಡೀ ಜಗತ್ತನ್ನ ವ್ಯಾಪಿಸಿಕೊಳ್ಳುತ್ತದೆ. ಕವಿತೆಯೂ ಕೂಡ ಅಷ್ಟೇ ತಾನೇ? . ಇಲ್ಲದಿದ್ದರೆ ಯಾವುದೋ ಹಳ್ಳಿ ಮೂಲೆಯಲ್ಲಿರುವ ನಾನು ಮತ್ಯಾವುದೋ...
ಅದೆಲ್ಲಿತ್ತೋ ಇಷ್ಟು ದಿನ ಗೊತ್ತಿಲ್ಲ,ಯಾವುದೋ ಮಾಯಕದಲ್ಲಿ ಸ್ವರ್ಗದಿಂದ ಧರೆಗಿಳಿದು ಬಂದಂತೆ ಬಣ್ಣ ಬಣ್ಣದ ಅಂಗಿ ತೊಟ್ಟಂತೆ ಬಾಸವಾಗುವ ಚಿಟ್ಟೆಗಳು. ಎಷ್ಟೊಂದು ಬಗೆಯ ಬಣ್ಣಗಳು?. ಗಾಡವಾಗಿ ರಾಚುವ ಹಳದಿ ಬಣ್ಣ,ಕಪ್ಪು ಮೈಗೆ ತಿಳಿನೀಲಿ ಬೊಟ್ಟಿನ ರೆಕ್ಕೆ,ಕಪ್ಪು ನೀಲಿ ಮಿಶ್ರಿತ ಬಣ್ಣ,ಅಪರೂಪದ ಗುಲಾಬಿ ಬಣ್ಣ,ಹೀಗೆ ಇನ್ನು ಅದೆಷ್ಟೋ ಕಲಾವಿದನ ಕುಂಚದಲ್ಲರಳಿದ...
ಒಳ್ಳೆಯ ಕತೆಗಾರ್ತಿ ಮತ್ತು ಕವಯತ್ರಿಯಾಗಿ ಹೆಸರು ಮಾಡಿರುವ ಸುಳ್ಯದ ಲೀಲಾ ದಾಮೋದರರವರು ಇದೀಗ ತಮ್ಮ ಲಲಿತ ಪ್ರಬಂಧ ಸಂಕಲನ ‘ಗೆಲುವಾಗೆಲೆ ಮನ’ ದ ಮೂಲಕ ತಮ್ಮ ಮುಂದೆ ಬಂದು ನಿಂತಿದ್ದಾರೆ. ಉಪನ್ಯಾಸಕಿಯಾಗಿ ನಿವೃತ್ತಿ ಹೊಂದಿರುವ ಲೀಲಾರವರ ಪ್ರಬಂಧಗಳ ತುಂಬಾ ಬಾಲ್ಯದಿಂದ ಹಿಡಿದು, ತಮ್ಮ ವೃತ್ತಿ, ಪ್ರವೃತ್ತಿ ಎಲ್ಲ...
ಎಲ್ಲರ ಬಳಿಯೂ ಎಲ್ಲರೊಳಗೂ ಇರಬಹುದು ಒಂದೊಂದು ಖಾಲಿ ಜಾಗ. ಹಿತ್ತಲಿನಲ್ಲಿಯೋ? ಮುಂದಣ ಅಂಗಳದಲ್ಲಿಯೋ? ಒಳಕೋಣೆಯೊಳಗೋ? ಅಥವಾ ಯಾವುದೋ ಅದೃಶ್ಯ ಎಡೆಯಲ್ಲಿ ತೀರಾ ಖಾಸಾಗಿಯಾಗಿ. ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದ ಕುರಿತು ಯೋಚಿಸಿಯೇ ಇರುತ್ತಾರೆ. ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ? ಭತ್ತ ಬೆಳೆಯುವುದಾ? ತುಸು ಹೆಚ್ಚೇ ಇದ್ದರೆ...
ಈ ರಣ ಬಿಸಿಲಿಗೆ ಕರುಣೆಯೂ ಇಲ್ಲ ಭೇಧವೂ ಇಲ್ಲ ಏಕ ಪ್ರಕಾರವಾಗಿ ವ್ಯಾಪಿಸುತ್ತಿದೆ. ಬಿಸಿಲ ಚಾದರದೊಳಗೆ ಹೆಂಚು ಮಾಡು ಬಹು ಮಹಡಿಯ ತಾರಸಿ ಮುಳಿ ಹುಲ್ಲಿನ ಜೋಪಡಿ ಒಂದೇ ಸಮಗೆ ಬೆವರಿಳಿಸಿ ಬೇಯುತ್ತಿದೆ. ನಿಗಿ ನಿಗಿ ಉರಿಯುವ ನಡು ಹಗಲಿನೊಳಗೆ ರೆಪ್ಪೆ ಅಲುಗದೇ ನಿಂತು ಕಾಲು ನಡೆಯದೇ...
ಮೊನ್ನೆ ಬೆಂಗಳೂರಿನಲ್ಲಿ ನಡೆದ ಸುಂದರ ಸಾಹಿತ್ಯ ಪ್ರಕಾಶನದ ಕಾರ್ಯಕ್ರಮದಲ್ಲಿ ಬೇಟಿಯಾಗಿ ಮಾತಿಗೆ ಸಿಕ್ಕು ಜೊತೆಗೊಂದು ಕವನ ಪುಸ್ತಕವನ್ನು ಕೈಗಿತ್ತು ಸ್ನೇಹದ ನಗುವ ಬೀರಿದವರು ವಸುಂಧರಾ ಕೆ.ಎಂ. , ಅವರಿಗೆ ಕೃಷಿ ಮಾರಾಟ ಇಲಾಖೆಯಲ್ಲಿ ವೃತ್ತಿ. ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಪ್ರವೃತ್ತಿಯನ್ನಾಗಿಸಿ ತೊಡಗಿಸಿಕೊಂಡದ್ದು ಸಾಹಿತ್ಯ ಕೃಷಿಯಲ್ಲಿ. ಅವರ ಕವನ...
ನಮ್ಮ ಈ ಸುಂದರ ಬದುಕು ಅನ್ನುವಂತದ್ದು ಮನುಷ್ಯನಿಗೆ ಸಿಕ್ಕಿದ ಬಹು ದೊಡ್ಡ ಕೊಡುಗೆ. ನಾವು ನಮ್ಮ ಬದುಕಿನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ಗುರಿಯೆಡೆಗೆ ಧಾವಿಸುತ್ತಿರುತ್ತೇವೆ. ನಮ್ಮ ಎಲ್ಲಾ ಸಾಧನೆಯ, ಯಶಸ್ಸಿನ ಹಿಂದಿನ ಸ್ಫೂರ್ತಿಯ ಸೆಲೆ ಮತ್ತು ನೆಲೆ ಸುಖೀ ಸಂಸಾರದಲ್ಲಡಗಿದೆ. ನಾವು ಎಲ್ಲೇ ಇರಲಿ, ಹೇಗೇ ಇರಲಿ...
ಕೆ ಜಿ ತರಗತಿಗಳು ನಮ್ಮ ಹಳ್ಳಿಗೆ ಬಂದು ಮಕ್ಕಳನ್ನೆಲ್ಲಾ ತಕ್ಕಡಿಯೊಳಗಿಟ್ಟು ತೂಗಿಕೊಳ್ಳುವ ಮೊದಲೇ ನಾವುಗಳು ನೇರವಾಗಿ ಒಂದನೇಯ ತರಗತಿಯ ಬೆಂಚಿನ ಮೇಲೆ ಸ್ಲೇಟು, ಬಳಪ ಹಿಡಿದು, ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತ್ತಿದ್ದೆವು. ಸಾಮಾನ್ಯವಾಗಿ ನಾವುಗಳು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಹೆಚ್ಚು ಕಡಿಮೆ 5 ವರ್ಷ ಕಳೆದಂತೆ ಶಾಲೆಗೆ ಸೇರಿಸುವುದು...
ನಿಮ್ಮ ಅನಿಸಿಕೆಗಳು…