Daily Archive: February 20, 2025
“ಸಾರ್..ಸಾರ್.. ನಿಮ್ಮನ್ನು ಭೇಟಿಮಾಡಲು ಯಾರೋ ಬಂದಿದ್ದಾರೆ. ಒಳಗೆ ಕಳಿಸಲೇ?” ಎಂದು ಇಂಟರ್‌ಕಾಂನಿಂದ ಕೇಳಿಬಂತು ರಿಸೆಪ್ಷನಿಸ್ಟಳ ಧ್ವನಿ. ಆಗ ತಾನೇ ಬಿಸಿನೆಸ್ ಮೀಟಿಂಗ್ ಮುಗಿಸಿ ಆಫೀಸಿಗೆ ಹಿಂದಿರುಗಿದ್ದ ವಿಶ್ವಾಸ್‌ಗೆ ತಕ್ಷಣ ಯಾರನ್ನೂ ಭೇಟಿಮಾಡುವ ಆಸಕ್ತಿಯಿರಲಿಲ್ಲ. ಆದರೂ ಬಂದವರಾರೆಂಬ ಕುತೂಹಲದಿಂದ “ಅವರ ಹೆಸರೇನು?” ಎಂದು ಕೇಳಿದ.“ಅವರು ಕಂಟ್ರಾಕ್ಟರ್ ಮಾಧವ ಎನ್ನುವವರು”...
ತುಳಿಯುವವರು ತುಳಿಯುತ್ತಲೇ ಇರುತ್ತಾರೆಬೆಳೆಯುವವನು ಮೈ ಕೊಡವಿ ಏಳಬೇಕುತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕುಸೋಲುಗಳ ಮೀರಿ ಬೆಳೆದು ತೋರಿಸಬೇಕು ಸಾಧನೆಯ ಹಾದಿಯಲಿ ಮುನ್ನುಗ್ಗ ಬೇಕುತುಳಿತಕ್ಕೆ ಒಳಗಾದವರಿಗೆ ಪ್ರೇರಣೆಯಾಗಬೇಕುನೊಂದವರ ಕೈ ಹಿಡಿದು ಮೇಲೆತ್ತಬೇಕುಕಡು ಕತ್ತಲಲ್ಲೂ ಭರವಸೆಯ ಬೆಳಕ ಹಚ್ಚಬೇಕು ಬದುಕಿನಲ್ಲಿ ಸೋಲು ಗೆಲುವು ಎಲ್ಲವೂ ಉಂಟುನೋವು ನಲಿವು ಬಾಳಲಿ ಬಂದು...
ಡಾ. ಡೇನಿಯಲ್ ಜೆ ಸಿಗಾಲ್ ಎಂಬಾತ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಮನೋವೈದ್ಯಕೀಯ ವಿಜ್ಞಾನಿ. ಇಂಟ್ರಾಕನಕ್ಟೆಡ್ MWe (Me + We) ಎಂಬ ಪರಿಕಲ್ಪನೆಯ ಜನಕ. ಆಧುನಿಕ ಮನೋವೈದ್ಯಶಾಸ್ತ್ರದಲ್ಲಿ ಹೆಸರು ಮಾಡಿದ ಜಾಗತಿಕ ಮನ್ನಣೆಯ ಸಂವೇದನಾಶೀಲ ಸಂಶೋಧಕ. ಹಲವು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನೂರಕ್ಕೂ ಹೆಚ್ಚಿನ ಪಠ್ಯಪುಸ್ತಕಗಳಿಗೆ ಸಂಪಾದಕರಾಗಿ...
ಶಿವರಾತ್ರಿ ಬಂದಿದೆ ಬನ್ನಿ, ಆ ಶಿವನ ನೆನೆಯೋಣ ಎಲ್ಲರ ಆತ್ಮದಿ, ಈಶ್ವರ ತತ್ವವ, ನಿತ್ಯ ಕಾಣೋಣ ಭಕ್ತಿ ಪ್ರಿಯನು, ಭಕ್ರರ ಪ್ರಿಯನು, ಈತ ಸದಾಶಿವ ಬೇಡಿಕೊಂಡರೆ ಶ್ರದ್ಧೆಯಿಂದ, ಹರಿವುದು ಈ ಭª ರಾಗ ದ್ವೇಷ ಅಳಿದರೆ, ಉದ್ಧಾರ ಈ ಜೀವ ಏಕಾಗ್ರತೆಯಿಂದ ಭಜಿಸಿದರೆ, ಧನ್ಯ ಶುದ್ಧ ಭಾವಮಾಘ...
ಉಷ್ಣವಲಯದ ಸಮುದ್ರದ ದಂಡೆಯಲ್ಲಿ ಹಲವೆಡೆ ವಿಶೇಷ ಗಿಡ, ಮರಗಳನ್ನು ಕಾಣುತ್ತೇವೆ. ಕೆಲವೊಮ್ಮೆ ಅಲೆ ಬಂದಾಗ ಮುಳುಗುತ್ತದೆ. ಇವು ಕಾಂಡ್ಲಗಿಡ ಮರಗಳು. ಇವು ಹೆಚ್ಚಾಗಿದ್ದಾಗ ಕಾಂಡ್ಲಕಾಡು (ಮ್ಯಾಂಗ್ರೋವ್) ಎನ್ನುತ್ತೇವೆ. ಈ ಗಿಡ ಮರಗಳಿಗೆ ಉಪ್ಪು ನೀರು ಬೇಕು. ಸಮುದ್ರಕ್ಕೆ ಸಿಹಿ ನೀರು ಸೇರುವ ಕಡೆ ಇರಬಹುದು. ಇಂತಹ ಕಾಂಡ್ಲಕಾಡು...
“ಮಳೆ ನಿಂತರೂ ಮರದಡಿ ಹನಿ….” ಎನ್ನುವಂತೆ, ಯಾವುದೇ ಜಾತ್ರೆಗಳು ಮುಗಿದರೂ ಕೂಡ ಜಾತ್ರೆಯ ಸೊಬಗು, ರೋಮಾಂಚಕ ಕ್ಷಣಗಳು ಮಾತ್ರ ಮತ್ತೆ ಮತ್ತೆ ಮರುಕಳಿಸುತ್ತವೆ!. ಜೊತೆಗೆ ಬಾಲ್ಯದ ದಿನಗಳು ಕೂಡ ನೆನಪಾಗುತ್ತವೆ! ಎಚ್ ಡಿ ಕೋಟೆ ತಾಲೂಕಿನ ಮೂರು ಪ್ರಮುಖ ಜಾತ್ರೆಗಳಾದ ತುಂಬಸೋಗೆ, ಅಂತರಸಂತೆ, ಮತ್ತು ಭೀಮನಕೊಲ್ಲಿ ಜಾತ್ರೆಯೂ...
ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ತನ್ನ ಬುದ್ಧಿವಂತಿಕೆಯನ್ನು ಸೀಮಿತಗೊಳಿಸುತ್ತಾ ಬದುಕಿನ ಬುತ್ತಿಯನ್ನು ಬಿಚ್ಚುವ ಮೊದಲೇ ಕಮರಿ ಹೋಗುವ ಎಷ್ಟೋ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ. ಮಹಿಳೆ ಇಂದು ಬಹಳ ಕಷ್ಟಪಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಿದ್ದರೂ ಅವಳಿಗೆ ವೈಜ್ಞಾನಿಕ ಕ್ಷೇತ್ರದಲ್ಲಿ ದಾಪುಗಾಲಿಡಲು ಕಷ್ಟಸಾಧ್ಯವೆ ಆಗಿದೆ. ಪ್ರೋತ್ಸಾಹದ...
31. ಪಂಚಮ ಸ್ಕಂದಅಧ್ಯಾಯ – 2ಪಶುಮೋಹ ನದೀತೀರದಿಜಪಕೆ ಕುಳಿತಭರತ,ಸಿಂಹ ಘರ್ಜನೆಗೆ ಹೆದರಿಪ್ರಾಣ ಭಯದಿಂ,ನದಿಯದೊಂದು ದಡದಿಂಮತ್ತೊಂದು ದಡಕೆಹಾರಿಅಸುನೀಗಿದತುಂಬು ಗರ್ಭಿಣಿ ಜಿಂಕೆಪ್ರಸವಿಸಿದಮರಿಜಿಂಕೆಯಜೀವವುಳಿಸಿ ಬದುಕಿಸಿದ ವಿರಕ್ತ ಭರತಂಗಂಟಿತುಮೋಹ ಪಾಶ,ಜಿಂಕೆಮರಿಯ ಪ್ರೇಮಪಾಶ ಆರಂಭದಿ ಹಾಲುಣಿಸಿ,ಆಶ್ರಮದಲಿ ಬೆಚ್ಚಗೆಮಲಗಿಸಿದಿನರಾತ್ರಿಯೆನ್ನದೆಪೋಷಿಸಿ, ಕಾಪಾಡಿಮರಿ ಬೆಳೆದಂತೆಚಿಗುರು ಗರಿಕೆಯ ತಿನಿಸಿ,ಮೈ ತೊಳೆದುಮೋಹದಿಂ ಅಪ್ಪಿಗೆಯನಿತ್ತ. ಮರಿ ಬೆಳೆದುಎಳೆಯ ಕೊಂಬುಗಳು ಮೂಡಿದಕಂಡು ಮುಟ್ಟಿ, ಮುಟ್ಟಿಸಂಭ್ರಮಿಸಿದ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ದಿನ 5: ‘ಡ ನಾಂಗ್’ ನ ನೆಲದಲ್ಲಿ…. 19/09/2024 ಗೋಲ್ಡನ್ ಬ್ರಿಡ್ಜ್ ನಲ್ಲಿ ಮುಂದುವರಿಯುತ್ತಾ ಪಕ್ಕದಲ್ಲಿದ್ದ ವೈವಿಧ್ಯಮಯವಾದ ಥೀಮ್ ಪಾರ್ಕ್ ಗಳತ್ತ ನಡೆದೆವು. ಅಲ್ಲಿ ಕಲ್ಲಿನ ಶಿಲ್ಪಗಳಿದ್ದುವು. ಮನುಷ್ಯರ ತಲೆಬುರುಡೆಯನ್ನು ಹೋಲುವ ದೈತ್ಯಾಕಾರದ ತಲೆ, ಕೈ . ಕಾಲುಗಳನ್ನು ಬಿಡಿಭಾಗಗಳಂತೆ ನಿರ್ಮಿಸಿದ್ದರು. ನಮಗಿಂತ ಎತ್ತರವಾದ ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಹೊಸ ವೃದ್ಧಾಶ್ರಮಕ್ಕೆ “ಆಶಿಯಾನ” ಎಂದು ಹೆಸರಿಡುವಂತೆ ಭಾಸ್ಕರ ಸೂಚಿಸಿದ್ದ. “ಆಶಿಯಾನ” ಎಂದರೆ “ಆಶ್ರಯ” ಹೆಸರು ಚೆನ್ನಾಗಿತ್ತು. ಆದರೆ ರಾಜಲಕ್ಷ್ಮಿಗೆ ಒಪ್ಪಿಗೆಯಾಗಿರಲಿಲ್ಲ. ಕೊನೆಗೆ ‘ವಾತ್ಸಲ್ಯ’ ಎಂದು ಹೆಸರಿಟ್ಟರು. ಆ ಹೆಸರು ಎಲ್ಲರಿಗೂ ಒಪ್ಪಿಗೆಯಾಯಿತು. ಇಪ್ಪತ್ತು ದಿನಗಳ ಅವಧಿಯಲ್ಲಿ ಭಾಸ್ಕರ ‘ವಾತ್ಸಲ್ಯ’ದ ಸ್ವರೂಪವನ್ನೇ ಬದಲಾಯಿಸಿದ್ದ. ತೆರಾಂಡದಲ್ಲಿ ಒಂದು...
ನಿಮ್ಮ ಅನಿಸಿಕೆಗಳು…