ನವಮ ಸ್ಕಂದ – ಅಧ್ಯಾಯ – 5
ಶ್ರೀ ಕೃಷ್ಣ ಕಥೆ – 1
ಯಯಾತಿ ಪುತ್ರರು ಯದು ಪುರು ಅನು ದೃಹ್ಯ
ಅನುವಿನ ವಂಶದಲಿ ಅಂಗ ವಂಗ ಕಳಿಂಗ ಸಿಂಹಳ
ಆಂಧ್ರ ಪುಂಧ್ರರೆಂಬ ಸುಪ್ರಸಿದ್ಧ ಪುತ್ರರು ಜನಿಸಿ
ತಮ್ಮ ಹೆಸರಿನಲಿ ರಾಜ್ಯ ಸ್ಥಾಪಿಸಿದರು
ಅಂಗನ ಪುತ್ರ ಪೌತ್ರ ಪರಂಪರೆಯಲ್ಲಿ ಚಿತ್ರರಥನು ಜನಿಸಿ
ರೋಮಪದನೆಂದೂ ಪ್ರಸಿದ್ಧಿ ಪಡೆದನು
ರೋಮಪದನ ದೇಶದಲಿ ಮಹಾಕ್ಷಾಮ ಉಂಟಾಗೆ
ಸಮವೃಷ್ಠಿಯನುಂಟುಮಾಡಲು ಋಷ್ಯಶೃಂಗ ಮುನಿಯು ಆಗಮಿಸೆ
ಅವನಡಿಯಿಟ್ಟ ಕ್ಷಣದಿ ದಿವ್ಯ ಸುವೃಷ್ಠಿಯಾಗಿ ಸಂತಸಗೊಂಡ
ರೋಮಪದ ಮುನಿವರ್ಯ ಋಷ್ಯಶೃಂಗಗೆ ಮಗಳ ಧಾರೆಯೆರೆದ
ಯಯಾತಿಯ ಜೇಷ್ಠಪುತ್ರ ಯದುವಿನ ಹೊರತಾಗಿ
ಮಿಕ್ಕೆಲ್ಲ ಯಯಾತಿ ಸಂತತಿಯು ಕಾಲಕ್ರಮದಲ್ಲಿ
ನಶಿಸಿ ಹೋಗಲು, ಯದುವಿನ ವಂಶ ಮಾತ್ರ
ಭಗವನನುಗ್ರಹಕೆ ಪಾತ್ರವಾಗಿ ಅಭಿವೃದ್ಧಿಗೊಂಡಿತು
ಪರಮಪವಿತ್ರ ಯದುವಂಶದಿ ಪುರಾಣ ಪುರುಷೋತ್ತಮ
ನಾರಾಯಣ ಕೃಷ್ಣನಾಗಿ ಅವತರಿಸಿ ಲೋಕವನ್ನುದ್ಧರಿಸಿದ
ಕಥೆ ಶ್ರೀ ಕೃಷ್ಣ ಕಥೆ
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43720

-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ಓದಿಸಿಕೊಂಡುಹೋಯಿತು..
ಚೆನ್ನಾಗಿದೆ