ಬೆಳಕು-ಬಳ್ಳಿ

ನಡೆಯುವ ಹಾದಿ

Share Button

ತುಳಿಯುವವರು ತುಳಿಯುತ್ತಲೇ ಇರುತ್ತಾರೆ
ಬೆಳೆಯುವವನು ಮೈ ಕೊಡವಿ ಏಳಬೇಕು
ತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕು
ಸೋಲುಗಳ ಮೀರಿ ಬೆಳೆದು ತೋರಿಸಬೇಕು

ಸಾಧನೆಯ ಹಾದಿಯಲಿ ಮುನ್ನುಗ್ಗ ಬೇಕು
ತುಳಿತಕ್ಕೆ ಒಳಗಾದವರಿಗೆ ಪ್ರೇರಣೆಯಾಗಬೇಕು
ನೊಂದವರ ಕೈ ಹಿಡಿದು ಮೇಲೆತ್ತಬೇಕು
ಕಡು ಕತ್ತಲಲ್ಲೂ ಭರವಸೆಯ ಬೆಳಕ ಹಚ್ಚಬೇಕು

ಬದುಕಿನಲ್ಲಿ ಸೋಲು ಗೆಲುವು ಎಲ್ಲವೂ ಉಂಟು
ನೋವು ನಲಿವು ಬಾಳಲಿ ಬಂದು ಹೋಗುವುದುಂಟು
ಕೊಟ್ಟು ಪಡೆದಷ್ಟು ಹೆಚ್ಚುವುದು ಪ್ರೀತಿಯಗಂಟು
ಅವನ ನಿಯಮ ಮೀರಿ ನಡೆಯದಿಲ್ಲಿ ಯಾವುದೇ ನಂಟು

ಜೊತೆಗೆ ನಿಂತು ಗುಂಡಿ ತೋಡುವವರು ನಮ್ಮವರೇ
ಗೆದ್ದಾಗ ಗೆಲುವಿನ ಫಲ ಸವಿಯುವವರು ಇವರೇ
ನಮ್ಮ ಅವಶ್ಯಕತೆಗೆ ಜೊತೆ ಕೈಯನ್ನು ಜೋಡಿಸದವರು
ತಮಗೆ ಅವಶ್ಯಕತೆ ಬಿದ್ದಾಗೆಲ್ಲ
ಬಳಸಿಕೊಂಡು ದೂರಾಗುವರು

ಬದುಕು ಎಂದಿಗೂ ಎಲ್ಲರಿಗೂ ನಿತ್ಯ ನೂತನವಲ್ಲ
ಗೆದ್ದ ಗೆಲುವು ಕೈಲಿರುವ ಹಣ ಶಾಶ್ವತವಲ್ಲ
ನಾವು ನಡೆಯುವ ಹಾದಿ ತೋರುವುದು ಗುರಿಯ
ನಮ್ಮ ತಪ್ಪು ಹೆಜ್ಜೆಯಿಂದ ಕಳೆದುಕೊಳ್ಳುವೆವು ಸಿರಿಯ

ನಾಗರಾಜ ಜಿ. ಎನ್. ಬಾಡ,
ಕುಮಟ, ಉತ್ತರ ಕನ್ನಡ.

5 Comments on “ನಡೆಯುವ ಹಾದಿ

  1. ಬದುಕಿನ ಏರುಪೇರುಗಳು, ಅದನ್ನು ಎದುರಿಸುತ್ತಾ ಮುನ್ನುಗ್ಗಿ ನಡೆಯಬೇಕಾದ ಅನಿವಾರ್ಯತೆಯನ್ನು ಮನಮುಟ್ಟುವಂತೆ ಚಿತ್ರಿಸಿದ ಕವಿತೆ ತುಂಬಾ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *