Yearly Archive: 2024

18

ಹಸಿರು ಮತ್ತು ಹಾಸ್ಯದ ಹೊನಲಿನ ಮೇಧಾವಿ ವಿಜ್ಞಾನಿ ಡಾ.ಬಿ.ಜಿ.ಎಲ್.ಸ್ವಾಮಿ

Share Button

‘ಹಸುರು ಹೊನ್ನು’ ಎನ್ನುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳ ಮನಸ್ಸು ಪುಸ್ತಕದ ಕರ್ತೃ ಡಾ.ಬಿ.ಜಿಎಲ್‍ ಸ್ವಾಮಿಯವರನ್ನು ನೆನೆಯುತ್ತದೆ.  ಅಷ್ಟೊಂದು ಪರಿಚಿತರಾಗಿ ಜನಮಾನಸಕ್ಕೆ ಹತ್ತಿರವಾಗಿದ್ದ ಸ್ವಾಮಿಯವರು ನವೆಂಬರ್‍ 2, 1980ರಂದು ನಮ್ಮನ್ನಗಲಿದ್ದರೂ ಅಂತಹ ಮಹಾನುಭಾವರ ಹೆಸರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ. ಕನ್ನಡದ ಓದುಗರಿಗೆ ಅವರ ತಿಳಿಹಾಸ್ಯ ತುಂಬಿದ ಬರೆವಣಿಗೆ...

9

ವರಾಹಿ ನದಿಯು ಭೂಗರ್ಭ ವಿದ್ಯುದಾಗಾರವಾಗಿ ಅರಳಿದ ಅದ್ಭುತ

Share Button

ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಗಿರಿಶಿಖರಗಳ ನಡುವೆ, ಹೊನ್ನಿನ ಮುಕುಟದಂತೆ ಕಂಗೊಳಿಸುವ ಆಗುಂಬೆಯ ಮಡಿಲಲ್ಲಿ ಜನಿಸಿದ ವರಾಹಿಯ ಯಶೋಗಾಥೆಯನ್ನು ಕೇಳೋಣ ಬನ್ನಿ. ಪುರಾಣಗಳಲ್ಲಿ ಪ್ರಸ್ತುತ ಪಡಿಸಿರುವ ದಶಾವತಾರಗಳಲ್ಲೊಂದಾದ ವರಾಹಾವತಾರ ಎಲ್ಲರಿಗೂ ಚಿರಪರಿಚಿತವೇ. ಅಸುರರಿಂದ ಭೂದೇವಿಯನ್ನು ರಕ್ಷಿಸಲು ವಿಷ್ಣುವು ವರಾಹಾವತಾರ ತಾಳಿದನೆಂದು ಐತಿಹ್ಯ. ವರಾಹನ ಸಹಧರ್ಮಿಣಿ ವರಾಹಿ ಎಂಬ ಪೌರಾಣಿಕ...

9

ದಿವ್ಯ ಕವಿತೆ -ಕಿರು ಚಿಂತನೆ

Share Button

ಪು.ತಿ.ನರಸಿಂಹಾಚಾರ್ (ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್) ಪುತಿನ ಎಂದೇ ಪ್ರಸಿದ್ಧಿ ಪಡೆದವರು. ದಾರ್ಶನಿಕ ಕವಿ, ಮೇರು ಕವಿ, ಸಂತ ಕವಿ, ಶ್ರೇಷ್ಠ ಕವಿ, ಚಿಂತನಶೀಲ ಕವಿ, ಜಿಜ್ಞಾಸೆಯ ಕವಿ ಎಂದೆಲ್ಲಾ ಹೆಸರುಗಳಿಸಿದ್ದ ಪುತಿನ, ಹೊಸಗನ್ನಡದ ರತ್ನತ್ರಯರಲ್ಲಿ ಒಬ್ಬರು. ಕನ್ನಡ ಭಾಷೆಯ ಅತ್ಯದ್ಭುತ ಶಕ್ತಿಯನ್ನು ಅದರ ಎಲ್ಲಾ ಸಾಧ್ಯತೆಗಳನ್ನು...

7

ಕಾದಂಬರಿ : ತಾಯಿ – ಪುಟ 5

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ರಾಜಲಕ್ಷ್ಮಿ ಆಶ್ರಮಕ್ಕೆ ಬಂದು 5 ತಿಂಗಳು ಕಳೆದಿತ್ತು. ರಾಹುಲ್ ಒಮ್ಮೆ ಬಂದು ಹೋಗಿದ್ದ. ಅವನೂ ತಾಯಿಯನ್ನು ಕರೆಯಲಿಲ್ಲ. ರಾಜಲಕ್ಷ್ಮಿಯೂ ಹೋಗುವ ಉತ್ಸಾಹ ತೋರಲಿಲ್ಲ.ಎರಡು ತಿಂಗಳ ನಂತರ ರಾಹುಲ್ ತಾಯಿಯನ್ನು ನೋಡಲು ಬಂದ. ಹೇಗಿದ್ದೀಯಮ್ಮ? ಎಲ್ಲಾ ಅನುಕೂಲವಾಗಿದೆಯಾ? ಎರಡು ತಿಂಗಳಾದರೆ ನಮ್ಮ ಹೊಸಮನೆ ಸಿದ್ಧವಾಗತ್ತೆ. ಆಗ...

10

ವರ್ತುಲದೊಳಗೆ….ಭಾಗ 1

Share Button

“ಲಲಿತಾ, ಅಲ್ಲಿಗೆ ಹೋಗಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆಯಾ? ಆ ಪ್ರದೇಶದ ಸುತ್ತಮುತ್ತಲಿನ ಪರಿಚಯ, ರೀತಿರಿವಾಜುಗಳ ಬಗ್ಗೆ ವಿಚಾರಿಸಿದೆಯಾ? ಅಲ್ಲಿ ವ್ಯವಸ್ಥೆ ಹೇಗಿದೆ? ಮುಖ್ಯಸ್ಥರು ಯಾರು? ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಹೆಜ್ಜೆಯಿಡು. ನೀನು ಒಪ್ಪಿಕೊಂಡಿರುವ ಜವಾಬ್ದಾರಿ ಗುರುತರವಾದುದು. ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಎಚ್ಚರಿಕೆ, ಆತುರ ಬೇಡ. ಯಾವುದಕ್ಕೂ ಫೊನ್ ಮಾಡು,...

14

ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 8

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹನೋಯ್ ನಲ್ಲಿ ಎರಡನೆಯ ದಿನ.. 16 ಸೆಪ್ಟೆಂಬರ್ 2024 ರಂದು ಹನೋಯ್ ನಲ್ಲಿ ನಮ್ಮ ಎರಡನೆಯ ದಿನ.  ಭಾರತೀಯ ಕಾಲಮಾನ ಮುಂಜಾನೆ 04 ಗಂಟೆಗೆ ಅಲ್ಲಿ ಚೆನ್ನಾಗಿ ಬೆಳಕಾಗಿತ್ತು.  ಹೋಟೆಲ್ ಬೆಬಿಲೋನ್ ನಲ್ಲಿ ನಮಗೆ ಬೆಳಗಿನ  ಉಪಾಹಾರದ ವ್ಯವಸ್ಥೆಯಿತ್ತು.    ನಾವು ಉಪಾಹಾರ ಮುಗಿಸಿ 0800...

5

ಶೋಧ

Share Button

ಅರಿವಿರದ ಭಾವದಲಿಅರಿವಿನ ಶೋಧಖಾಲಿ ಹಾಳೆಯಲ್ಲಿಭಾವಗಳ ಕುಣಿತ ಹೊಸದಾರಿ ಹೊಸ ಕನಸುಹೊಸ ದಿನದ ಮೋಹಹೊಸ ಮಣ್ಣು ಹೊಸ ಕಣ್ಣುಜೀವನದ ಭಾರತರೇವಾರಿ ಬಣ್ಣ ಗರಿ ಗರಿಯ ಝರಿಹೊಸ ನಗುವಿನ ಪರಿಒಲವಲ್ಲಿ ಒಲವುಹರಿವಲ್ಲಿ ಹರಿವುಭೂ ಧರೆಯ ಮೇಲೆಲ್ಲಾನಗುತಾ ನಲಿವ ನಲಿವು ಹೂ ಎಳೆಯ ಗೆಲುವಲ್ಲಿಬೇರು ಹಂಚಿದ ಪ್ರೀತಿಮೂಲವದು ಮಣ್ಣಿನಪ್ರತಿಬಿಂಬದ ರೀತಿ -ನಾಗರಾಜ...

5

ಕಾದಂಬರಿ : ತಾಯಿ – ಪುಟ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ರಾಜಲಕ್ಷ್ಮಿ ನಾಲ್ಕು ಗಂಟೆಗೆ ಎದ್ದು ಮುಖ ತೊಳೆದರು. ಆಗ ಗುಂಡುಗುಂಡಾಗಿದ್ದ ಮುತ್ತೈದೆಯೊಬ್ಬರು ಕಾಫಿ, ಚೂಡವಲಕ್ಕಿ ತಂದರು.“ನೀವು ಗೌರಮ್ಮ ತಾನೆ?”“ಹೌದಮ್ಮ. ನೀವು ಕಾಫಿ ಕುಡಿಯಿರಿ. ನಾನು ಅರ್ಧಗಂಟೆಯಲ್ಲಿ ಬರ್ತೀನಿ. ವಾಕಿಂಗ್ ಹೋಗೋಣ.”“ವಾಕಿಂಗ್‌ಗೆ ಹೋಗಕ್ಕೆ ಪರ‍್ಮಿಶನ್ ಕೊಡ್ತಾರಾ?”“ಕೊಡದೆ ಏನ್ಮಾಡ್ತಾರೆ? ನೀವೇನು ೧೮ ವರ್ಷದ ಹುಡುಗೀನಾ ಪರ‍್ಮಿಶನ್...

11

ಶ್ರೀ ಗಣೇಶರ ಕಲಾಕೌತುಕ !

Share Button

ಕರ್ನಾಟಕವನ್ನು ಒಳಗೊಂಡಂತೆ, ಭಾರತದಾದ್ಯಂತ ಹೆಸರಾದ ಬಹುಶ್ರುತ ವಿದ್ವಾಂಸರೂ ಶತಾವಧಾನಿಗಳೂ ಆದ ಡಾ. ಆರ್ ಗಣೇಶ್ ಅವರು ಬಹುಭಾಷಾವಿದ್ವಾಂಸರು ಕೂಡ. ಅವಧಾನ ಕಲೆಯ ಪುನರುಜ್ಜೀವನದ ಸಾರ್ಥಕ್ಯ ಅವರದು. ಈವರೆಗೂ ಅರುವತ್ತಕ್ಕೂ ಹೆಚ್ಚಿನ ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ಕೊಟ್ಟವರು. ರಂಜನ ಮತ್ತು ನಿರಂಜನ ಎರಡೂ ಮಾರ್ಗಗಳಲ್ಲೂ...

10

ವಾಟ್ಸಾಪ್ ಕಥೆ 53 : ಕಾಯಕವೇ ಕೈಲಾಸ.

Share Button

ಒಂದು ಚಪ್ಪಲಿ ಮಾರುವ ಅಂಗಡಿ. ಒಬ್ಬ ವ್ಯಕ್ತಿ ಚಪ್ಪಲಿ ಕೊಡುಕೊಳ್ಳಲು ಅದರೊಳಕ್ಕೆ ಬಂದನು. ಅಲ್ಲಿದ್ದ ಪರಿಚಾರಕನು ಅವನನ್ನು ನಗುಮೊಗದಿಂದ ಸ್ವಾಗತಿಸಿ ಖುರ್ಚಿಯಲ್ಲಿ ಕುಳ್ಳಿರಿಸಿದ. ಗ್ರಾಹಕನಿಗೆ ಎಂತಹ ಚಪ್ಪಲಿಗಳು ಬೇಕು ಎಂಬುದನ್ನು ಕೇಳಿ ತಿಳಿದುಕೊಂಡ. ನಂತರ ಹಲವಾರು ನಮೂನೆಗಳ ಚಪ್ಪಲಿಗಳನ್ನು ಮುಂದೆ ಹರಡಿದ. ಪ್ರತಿಯೊಂದನ್ನೂ ಅಳತೆ ಮತ್ತು ಆಯ್ಕೆಯ...

Follow

Get every new post on this blog delivered to your Inbox.

Join other followers: