ಶೋಧ
ಅರಿವಿರದ ಭಾವದಲಿ
ಅರಿವಿನ ಶೋಧ
ಖಾಲಿ ಹಾಳೆಯಲ್ಲಿ
ಭಾವಗಳ ಕುಣಿತ
ಹೊಸದಾರಿ ಹೊಸ ಕನಸು
ಹೊಸ ದಿನದ ಮೋಹ
ಹೊಸ ಮಣ್ಣು ಹೊಸ ಕಣ್ಣು
ಜೀವನದ ಭಾರ
ತರೇವಾರಿ ಬಣ್ಣ
ಗರಿ ಗರಿಯ ಝರಿ
ಹೊಸ ನಗುವಿನ ಪರಿ
ಒಲವಲ್ಲಿ ಒಲವು
ಹರಿವಲ್ಲಿ ಹರಿವು
ಭೂ ಧರೆಯ ಮೇಲೆಲ್ಲಾ
ನಗುತಾ ನಲಿವ ನಲಿವು
ಹೂ ಎಳೆಯ ಗೆಲುವಲ್ಲಿ
ಬೇರು ಹಂಚಿದ ಪ್ರೀತಿ
ಮೂಲವದು ಮಣ್ಣಿನ
ಪ್ರತಿಬಿಂಬದ ರೀತಿ
-ನಾಗರಾಜ ಬಿ.ನಾಯ್ಕ.
ಹುಬ್ಬಣಗೇರಿ. ಕುಮಟಾ.
ಸರಳ ಸುಂದರ ಕವನ ಚೆನ್ನಾಗಿದೆ ಸಾರ್
ಚಂದದ ಕವನ
ಸರಳ ಬೆಸುಗೆಯ ನವಿರಾದ ಬರಹ
ಕವನದಲ್ಲಿ ಭಾವಾಭಿವ್ಯಕ್ತಿ ಚೆನ್ನಾಗಿ ಮೂಡಿಬಂದಿದೆ.
ಚಂದದ ಜೀವನ್ಮುಖಿ ಕವಿತೆ.