Daily Archive: December 14, 2023
ನಿವೃತ್ತಿಯ ನಂತರ, ಅವಕಾಶ ಲಭಿಸಿದಾಗ, ಅನುಕೂಲತೆ ಇದ್ದರೆ ಯಾವುದೇ ರೀತಿಯ ಪ್ರಯಾಣ ಹಾಗೂ ಪ್ರವಾಸವನ್ನು ಇಷ್ಟಪಡುವ ಜಾಯಮಾನ ನಮ್ಮದು. 2023 ರ ಅಕ್ಟೋಬರ್ ತಿಂಗಳಿನಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ ಶ್ರೀ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ, ಟ್ರಾವೆಲ್ಸ್4ಯು ಪ್ರವಾಸಿ ಸಂಸ್ಥೆಯ ಸಹಯೋಗದೊಂದಿಗೆ ದಕ್ಷಿಣ ಭಾರತ ಪ್ರವಾಸ ಅಯೋಜನೆಯಾಗಿದೆ...
ಅನೇಕ ಋಷಿಮುನಿಗಳು ತಪಸ್ಸನ್ನಾಚರಿಸಿ ತಮ್ಮ ತಮ್ಮ ಸಾಧನೆಗಳನ್ನು ಈಡೇರಿಸಿಕೊಂಡಿರುವ ಕತೆಗಳನ್ನು ಕೇಳಿದ್ದೇವೆ. ಹೆಚ್ಚಿನವರು ನಿಯಮಿತವಾಗಿ ತಮ್ಮ ದಿನನಿತ್ಯ ವೃತ್ತಿಗಳನ್ನೂ ದೇಹಬಾಧೆಗಳನ್ನೂ ತೀರಿಸಿಕೊಂಡು ಧ್ಯಾನಕ್ಕೆ ಕುಳಿತುಕೊಂಡರೆ ಕೆಲವು ಮಂದಿ ಉದಾ: ವಾಲ್ಮೀಕಿ, ಚ್ಯವನ ಮೊದಲಾದವರು ಅನ್ನಾಹಾರಗಳನ್ನೂದೇಹಬಾಧೆಗಳನ್ನೂ ತೊರೆದು ತಪಸ್ಸನ್ನಾಚರಿಸುತ್ತಿದ್ದರು. ಅಂದರೆ ಅವುಗಳನ್ನೆಲ್ಲಾ ಕ್ರಮೇಣ ನಿಯಂತ್ರಣಕ್ಕೆ ತಂದುಕೊಂಡು ದೀರ್ಘಕಾಲ ತಪಸ್ಸನ್ನಾಚರಿಸುತ್ತಿದ್ದರು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸಿಯಾಟೆಲ್(Seattle) ಪೆಸಿಫಿಕ್ ಮಹಾಸಾಗರದ ವಾಯವ್ಯ ದಿಕ್ಕಿನಲ್ಲಿರುವ ಸಿಯಾಟೆಲ್, ವಾಷಿಂಗ್ಟನ್ ರಾಜ್ಯದ ಅತ್ಯಂತ ದೊಡ್ಡ ಪಟ್ಟಣವಾಗಿದೆ. ಮೈಕ್ರೋಸಾಫ್ಟ್, ಅಮೆಝಾನ್ ನಂತಹ ದೈತ್ಯ ಕಂಪೆನಿಗಳ ಮುಖ್ಯ ಕಚೇರಿಗಳು ಇಲ್ಲಿವೆ. ಬಹಳ ಸುಂದರ ಕರಾವಳಿಯನ್ನು ಹೊಂದಿರುವ ಸಿಯಾಟೆಲ್ ನಲ್ಲಿ ಸುಮಾರು 7ಲಕ್ಷ ಜನರು ವಾಸವಾಗಿರುವುದಲ್ಲದೆ; ಅತ್ಯಂತ ಹೆಚ್ಚು...
ಯಾವುದೋ ಸಮಾರಂಭಕ್ಕೆ ಹೊರಟಿದ್ದ ಮಗಳು, ಅಳಿಯ, ಮೊಮ್ಮಗನನ್ನು ಬೀಳ್ಕೊಟ್ಟು ಮನೆಯ ಮುಂದಿನ ಗೇಟನ್ನು ಭದ್ರಪಡಿಸಿ ಬಂದರು ಗಿರಿಜಮ್ಮ. ಒಳಗಿನಿಂದ ಕೈಯಲ್ಲಿ ಕಾಫಿ ಲೋಟಗಳನ್ನು ಹಿಡಿದುಕೊಂಡು ಬಂದ ಬೀಗಿತ್ತಿ ಲಲಿತಮ್ಮನವರನ್ನು ನೋಡಿದವರೇ ”ಅರೆ ! ನೀವೇಕೆ ತರಲು ಹೋದಿರಿ, ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದರು. ”ಪರವಾಗಿಲ್ಲ ಬಿಡಿ, ಅದರಲ್ಲೇನಿದೆ...
ಅಂದೊಮ್ಮೆ ಪರೀಕ್ಷಾ ಮೇಲ್ವಿಚಾರಣೆಯ ನಿಮಿತ್ತ ಕಾಲೇಜಿನ ಕೊಠಡಿಯೊಂದರಲ್ಲಿ ಇದ್ದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲಾ ಬಗ್ಗಿಸಿದ ತಲೆ ಎತ್ತದೆ ಬರೆಯುವುದರಲ್ಲಿ ಮಗ್ನರಾಗಿದ್ದರು. ಅತ್ತಿತ್ತ ನೋಡಲೂ ಆಸ್ಪದವಿಲ್ಲದ ಕಾರಣ ಕೆಲವರು ಪ್ರಶ್ನ ಪತ್ರಿಕೆಯನ್ನೇ ಮತ್ತೊಮ್ಮೆ ಉತ್ತರ ಪತ್ರಿಕೆಯಲ್ಲಿ ಅಚ್ಚೊತ್ತುತ್ತಿದ್ದರೆ, ಮತ್ತೆ ಕೆಲವರು ಅವರವರ ತಯಾರಿಗನುಗುಣವಾಗಿ ಉತ್ತರವನ್ನು ಬರೆಯುತ್ತಿದ್ದರು. ಆ ಸಮಯದಲ್ಲಿ ಅಲ್ಲಿದ್ದ...
ಮನೆಗೆ ಹಾಕಿರುವ ಬೀಗ ಸರಿಯಿದೆಯೇ ಎಂದು ಎರಡೆರಡು ಸಲ ಜಗ್ಗಿ ನೋಡಿ ಖಾತ್ರಿ ಮಾಡಿಕೊಂಡ ಜಾನ್ಹವಿ, ಮಗ ಕಳಿಹಿಸಿರುವ ಓಲಾ ಟ್ಯಾಕ್ಸಿಯಲ್ಲಿ ಇಟ್ಟಿರುವ ಸಾಮಾನುಗಳು ಸರಿಯಾಗಿದೆಯೇ ಎಂದು ಒಮ್ಮೆ ಪರೀಕ್ಷಿಸಿ, ಆರಾಮವಾಗಿ ಕುಳಿತುಕೊಂಡಳು. ಟ್ಯಾಕ್ಸಿ ಬೆಂಗಳೂರು ಏರ್ ಪೋರ್ಟಿನ ಕಡೆ ಹೊರಟಿತು. ಹೊರಟು ಸರಿಯಾಗಿ ಐದು ನಿಮಿಷಗಳೂ...
ನಿಮ್ಮ ಅನಿಸಿಕೆಗಳು…