Daily Archive: December 7, 2023
ಕೇವಲ ನಲುಮೆಯಲಿದ್ದರೆ ಸಾಲದು; ಒಮ್ಮೆಯಾದರೂ ಆಗಾಗ ಬಿಕ್ಕುತಿರಬೇಕು !ಹಸಿವಲಿ ಒದ್ದಾಡಿದ ಹಕ್ಕಿ ಕುಕ್ಕುವ ಹುಳಹುಪ್ಪಟೆಯ ಪ್ರಾಣಸಂಕಟವ ಅರಿಯಬೇಕು !! ಒಂದರೆ ಗಳಿಗೆ ಮೀನು ನೀರ ಬಿಟ್ಟುಹಾರಿ ನೆಗೆದು ಮತ್ತೆ ಮುಳುಗುವ ತೆರದಿಹೆಬ್ಬುಲಿಯ ಬಾಯಿಗೆ ಸಿಕ್ಕೂ ಸಿಗದಂತೆಓಡಿ ತೇಕುತ ಬದುಕುವ ಹುಲ್ಲೆಯ ಭಯದಿ ಬೀಸು ಗಾಳಿಗೆ ಬಗ್ಗುತ ಇನ್ನೇನು...
ಒಂದೂರಿನಲ್ಲಿ ಒಬ್ಬ ಸಿರಿವಂತನಿದ್ದನು. ಅವನಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಎಲ್ಲರಿಗೂ ಮದುವೆಯಾಗಿ ನಾಲ್ಕು ಜನ ಸೊಸೆಯಂದಿರು ಬಂದಿದ್ದರು. ಸಿರಿವಂತನು ಮಡದಿ, ಮಕ್ಕಳು ಮತ್ತು ಸೊಸೆಯಂದಿರೊಟ್ಟಿಗೆ ಸುಖವಾಗಿದ್ದನು. ಅವರೆಲ್ಲರೂ ಪ್ರೀತಿ ವಿಶ್ವಾಸದಿಂದಿದ್ದರು. ಸಿರಿವಂತನಿಗೆ ಹೀಗಾಗಿ ಯಾವುದಕ್ಕೂ ಕೊರತೆ ಎಂಬುದೇ ಇರಲಿಲ್ಲ. ಹೀಗಿರುವಾಗ ಒಂದುದಿನ ಸಿರಿವಂತನಿಗೆ ಕನಸಿನಲ್ಲಿ ಲಕ್ಷ್ಮೀದೇವಿಯು ಕಾಣಿಸಿಕೊಂಡಳು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹಿಮನಗರಿ ಅಲಾಸ್ಕಾದತ್ತ…. ಜೂನ್ ತಿಂಗಳ ಕೊನೆಯಾಗುತ್ತಾ ಬಂದಿತ್ತು… ನಮ್ಮ ಮುಂದಿನ ಪ್ರವಾಸವು ಉತ್ತರ ಅಮೇರಿಕಾದ ಅತೀ ದೊಡ್ಡ ರಾಜ್ಯವಾಗಿರುವ ‘ಅಲಾಸ್ಕಾ` ಎಂಬ ಅದ್ಭುತ ಪ್ರಕೃತಿ ಸೌಂದರ್ಯಗಳನ್ನೊಳಗೊಂಡ ನಾಡಿಗೆ ನಿಗದಿಯಾಗಿತ್ತು. ಇದು, ನಾವಿರುವ ಕ್ಯಾಲಿಫೋರ್ನಿಯಾದಿಂದ ಸುಮಾರು 3,050 ಮೈಲು ದೂರದಲ್ಲಿದ್ದು ಉತ್ತರ ಅಮೆರಿಕದ ವಾಯವ್ಯ ಭಾಗದ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಶ್ರೀನಗರದಿಂದ ಎಂಭತ್ತು ಕಿ.ಮೀ. ದೂರದಲ್ಲಿರುವ ಗಾಂಡರ್‌ಬಾಲ್ ಜಿಲ್ಲೆಯಲ್ಲಿರುವ ಸೋನೋಮಾರ್ಗ್ ಎಂಬ ಚೆಲುವಾದ ಗಿರಿಧಾಮದ ಕಡೆ ಹೊರಟೆವು. ಸೋನೋಮಾರ್ಗ್ ತಲುಪಿದಾಗ ಅಲ್ಲಿ ಹಿಮಪಾತವಾಗುತ್ತಿತ್ತು. ನಮ್ಮ ಜೊತೆಯಲ್ಲಿದ್ದ ಗಿರಿಜಕ್ಕನಿಗೆ ಹಿಮಪಾತ ನೋಡುವುದೆಂದರೆ ಖುಷಿಯೋ ಖುಷಿ. ವಾಹನ ನಿಲ್ಲಿಸಿ ಮರಳಿನಂತಿದ್ದ ಹಿಮವನ್ನು ಬೊಗಸೆ ತುಂಬಾ ತುಂಬಿಸಿಕೊಂಡು ಎಲ್ಲರ ಮೇಲೂ...
ನೆನಪಿನ ಪುಟಗಳನ್ನು ತಿರುವಿದಾಗ ಥಟ್ಟನೆ ತೆರೆದುಕೊಳ್ಳುವ ಪುಟಗಳಲ್ಲಿ ಈ ಘಟನೆಯೂ ಒಂದು. 1994 ರಲ್ಲಿ ನಡೆದ ಘಟನೆ. ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿ ವರುಷವೊಂದು ಕಳೆದಿತ್ತು. ದೇವರ ದಯೆಯಿಂದ ಉದ್ಯೋಗವೂ ಖಾಯಂ ಆಗಿತ್ತು. ಅದೊಂದು ದಿನ ಮಧ್ಯಾಹ್ಞದ ಹೊತ್ತಿನಲ್ಲಿ ನಮ್ಮ ವಿಭಾಗ ಮುಖ್ಯಸ್ಥರು ನನ್ನ ಬಳಿ ಬಂದು...
ಆಶಾವಾದಿಗಳನ್ನು ಆಂಗ್ಲಭಾಷೆಯಲ್ಲಿ ‘OPTMIST’ ಎಂದೂ ನಿರಾಶಾವಾದಿಗಳನ್ನು ‘PESSIMIST’ ಎಂದೂ ಕರೆಯುತ್ತಾರೆ. ಈ ಲೇಖನದ ಪ್ರಾರಂಭವನ್ನು ಒಂದು ಪ್ರಖ್ಯಾತವಾದ ಹೇಳಿಕೆಯ ಮೂಲಕ ಪ್ರಾರಂಭಿಸಿದರೆ ಹೆಚ್ಚು ಅರ್ಥಪೂರ್ಣವಾದೀತು. ‘AN OPTIMISIT INVENTS A AEROPLANE AND A PESSIMIST A PARACHUTE’ ಅಂದರೆ ಓರ್ವ ಆಶಾವಾದಿ ವಿಮಾನವನ್ನು ಕಂಡು ಹಿಡಿದರೆ...
ನಿಮ್ಮ ಅನಿಸಿಕೆಗಳು…