Monthly Archive: July 2023

10

ಕಾದಂಬರಿ : ‘ಸುಮನ್’ – ಅಧ್ಯಾಯ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹ್ಯಾಪಿ ಆನಿವರ್ಸರಿ ನೋಡು ನೋಡುತ್ತಲೇ ಒಂದು ವರ್ಷ ಕಳೆದು ಹೋಯಿತು. ಸುಮನ್‍ಗೆ ಮದುವೆಯಾಗಿ. ಅಂದು ಮದುವೆಯ ಮೊದಲನೆಯ ವಾರ್ಷಿಕೋತ್ಸವ. ಸುಮನ್ ಕಣ್ಣು ತೆರೆಯುವ ಹೊತ್ತಿಗೆ ಗಿರೀಶ ಎದ್ದು ಅವಳ ಪಕ್ಕ ಒಂದು ದೊಡ್ಡ ಉಡುಗೊರೆ ಇಟ್ಟಿದ್ದ.  ಸಂಭ್ರಮದಿಂದ ಸುಮನ್ ಕಾಗದ ಬಿಡಿಸಿ ಡಬ್ಬ ತೆಗೆದು...

9

ನನ್ನ ತಲೆಯಲ್ಲಿ ಈರುಳ್ಳಿ

Share Button

ನನಗೆ ಇತ್ತೀಚಿಗೇ ತಿಳಿಯಿತು. ಹಸಿವಾದಾಗಲೆಲ್ಲ ಯೂಟ್ಯೂಬ್‌ ನಲ್ಲಿ ʼಈಜ಼ೀ ಸ್ನ್ಯಾಕ್ಸ್‌ʼ ಎಂಬ ವಿಡಿಯೋಗಳನ್ನು ನೋಡಬಹುದೆಂದು. ನೋಡುತ್ತಾ ನೋಡುತ್ತಾ ಅತ್ಯಂತ ಸುಲಭವಾದದ್ದನ್ನು ಮಾಡಬಹುದಲ್ಲವೇ ಎಂದುಕೊಂಡು ಎದ್ದು ಅಡುಗೆ ಮನೆಗೆ ಹೋಗುವುದು; ಅಥವಾ ಇನ್ನೂ ಒಳ್ಳೆಯ ಅನುಭೂತಿಗೆ ಅಮ್ಮನಿಗೆ ಅದೇ ವಿಡಿಯೋವನ್ನು ಫಾರ್ವರ್ಡ್‌ ಮಾಡುವುದು. ʼಅಮ್ಮಾ ಮಾಡಿಕೊಡುʼ ಎಂದು ಪೇಚಾಡುವುದರೊಳಗೆ...

7

ಬಾಳ್ವೆ ಎಂಬ ಭರವಸೆ

Share Button

‘ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ’ ಕೆ.ಸ್. ಚಿತ್ರಾ ಸುಶ್ರಾವ್ಯವಾಗಿ ಹಾಡಿದ ಗೀತೆ ಇದು. ಈ ಜೀವನ ಎನ್ನುವುದು ಹಾವು ಏಣಿ ಆಟ, ಈ ಸಂಕಲೆಯಿಂದ ಮುಕ್ತಿ ಇಲ್ಲವೇ? ನನಗೇ ಈ ರೀತಿ ಕಷ್ಟಗಳು ಯಾಕೆ ಬರಬೇಕು ಎನ್ನುವ ಅಗ್ನಿದಿವ್ಯವ ಹಾದಿ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ...

10

ವಾಟ್ಸಾಪ್ ಕಥೆ 25: ಸ್ವರ್ಗದ ಮಣ್ಣು.

Share Button

ಒಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಲು ಒಂದು ಪ್ರಶ್ನೆ ಕೇಳಿದಳು. ”ಮಕ್ಕಳೇ, ನಾಳೆ ನೀವೆಲ್ಲರೂ ಶಾಲೆಗೆ ಬರುವಾಗ ಸ್ವಲ್ಪ ಸ್ವರ್ಗದ ಮಣ್ಣನ್ನು ನಿಮ್ಮೊಡನೆ ತಂದು ನನಗೆ ತೋರಿಸಿ” ಎಂದಳು. ಮಕ್ಕಳಿಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಹೋಗಿ ತಮ್ಮ ತಾಯಿ ತಂದೆಯರಿಗೆ...

4

ನವಗ್ರಹಗಳ ಒಡೆಯ ಸೂರ್ಯ

Share Button

ಜಗತ್ತಿನ ಎಲ್ಲ ಚರಾಚರ ವಸ್ತುಗಳ ಅಸ್ಥಿತ್ವಕ್ಕೆ ಕಾರಣನಾದವನು, ಅವುಗಳಿಗೆ ಚೇತನ ನೀಡುವವನು, ಜೀವ ತುಂಬುವವನು, ದಿನ ಬೆಳಗಾಗಲು ಕಾರಣನಾದವನು ಪ್ರತಿಯೊಬ್ಬರೂ ಮಾಡುವ ಕರ್ಮಗಳಿಗೆ ಸಾಕ್ಷಿಯಾಗುವವನು, ಪಂಚಭೂತಗಳಾದ ಪೃಥ್ವಿ, ಅಪ್, ತೇಜ, ವಾಯು, ಆಕಾಶ ಇವುಗಳನ್ನು ಜಾಗೃತಾವಸ್ಥೆಗೆ ತರುವವನು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದೆಷ್ಟೋ ಉದ್ದ ಬೆಳೆಯುತ್ತದೆ....

7

ಆಷಾಢ ಮಾಸ ಬಂದೀತವ್ವ

Share Button

ನಮ್ಮ ಜಾನಪದರು ಹಾಡುತ್ತಾರೆ “ಆಷಾಢಮಾಸ ಬಂದಿತವ್ವ ಅಣ್ಣ ಬರಲಿಲ್ಲ ಯಾಕೋ ಕರಿಯಾಕ “ಅಂತ .ಮದುವೆ ಮಾಡಿ ಹೆಣ್ಣನ್ನು ಗಂಡನ ಮನೆಗೆ ಕಳಿಸಿದ ಮೇಲೆ ಆಷಾಢ ಮಾಸದಲ್ಲಿ ಮತ್ತೆ ತವರಿಗೆ  ಕರೆದೊಯ್ಯುವ ಸಂಭ್ರಮ.  ಮದುವೆಯಾದ ಮೊದಲ ವರ್ಷ ಅತ್ತೆ ಸೊಸೆ ಹಾಗೂ ಅತ್ತೆ ಅಳಿಯ ಒಂದೇ ಬಾಗಿಲಿನಿಂದ  ಓಡಾಡಬಾರದು...

10

‘ವೈಜಯಂತಿಪುರ’…. ಕದಂಬ ಸಾಮ್ರಾಟ ಮಯೂರವರ್ಮನ ಚರಿತ್ರೆ

Share Button

‘ವೈಜಯಂತಿಪುರ’ ಕಾದಂಬರಿ. ಲೇಖಕರು: ಸಂತೋಷಕುಮಾರ ಮೆಹಂದಳೆ. ಒಂದು ರಾಜವಂಶವು ಹೊಚ್ಚ ಹೊಸದಾಗಿ ತಲೆಯೆತ್ತಿ ನೆಲೆಗೊಳ್ಳಬೇಕಾದರೆ ಅದು ರಾತೋರಾತ್ರಿ ಘಟಿಸಿರಬಹುದಾದ ಪವಾಡವಲ್ಲ. ಅದೊಂದು ಬಹುಕಾಲದ ಪ್ರಯತ್ನದ ಪ್ರಕ್ರಿಯೆ. ಅದಕ್ಕಾಗಿ ಪಡಬೇಕಾದ ಪರಿಶ್ರಮ, ತೆರಬೇಕಾದ ಬಲಿದಾನವು ಅಪಾರ. ಹಾಗೆ ಬೆಳೆದು ನಿಂತು ಕನ್ನಡ ನೆಲದ ಮೊದಲ ಸಾಮ್ರಾಜ್ಯವಾಗಿದ್ದು ಕದಂಬವಂಶದ ಮಯೂರವರ್ಮನ...

8

ಅವಿಸ್ಮರಣೀಯ ಅಮೆರಿಕ – ಎಳೆ 50

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಜಲಪಾತಗಳ ಜೊತೆಗೆ… ನಮ್ಮ ಮುಂದುಗಡೆ ಮೇಲೆತ್ತರದಲ್ಲಿ ಬಹು ಸುಂದರ ಜಲಪಾತವೊಂದು ಬೆಳ್ನೊರೆಯನ್ನು ಚಿಮ್ಮಿಸುತ್ತಾ ಕೆಳಗಡೆಗೆ ಧುಮುಕಿ ಮುಂದೆ ಸಣ್ಣ ತೊರೆಯಾಗಿ ನಮ್ಮ ಪಕ್ಕದಲ್ಲೇ ಹರಿಯುತ್ತಿತ್ತು. ಇದುವೇ Multnomah ಜಲಪಾತ. ಇದನ್ನು George ಜಲಪಾತ ಎಂದೂ ಕರೆಯುವರು. ಬೆಟ್ಟದ ಮೇಲಿನಿಂದ ಎರಡು ಹಂತಗಳಲ್ಲಿ ಧುಮುಕುವ...

5

ನಾದ ಬ್ರಹ್ಮನ ಓಂಕಾರನಾದ

Share Button

”ಭಾರತ ಭೂಷಿರ ಮಂದಿರ ಸುಂದರಿಭುವನ ಮನೋಹರಿ ಕನ್ಯಾಕುಮಾರಿ” ಉಪಾಸನೆ ಸಿನೆಮಾದ ಈ ಗೀತೆಯನ್ನು ಕೇಳಿ ತಲೆದೂಗದವರಾರು? ದಕ್ಷಿಣ ಭಾರತದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿಯ ವಾವಾಥುರೈನ ಸಮುದ್ರ ತೀರದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಸ್ವಾಮಿ ವಿವೇಕಾನಂದರ ಶಿಲಾ ಸ್ಮಾರಕಕ್ಕೆ ಭೇಟಿ ನೀಡೋಣ ಬನ್ನಿ. ಸೆಪ್ಟೆಂಬರ್ 17,2022 ರಂದು, ಕುಟುಂಬ...

6

ಕಾದಂಬರಿ : ‘ಸುಮನ್’ – ಅಧ್ಯಾಯ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಇನ್ನೊಂದು ಪಾರ್ಟಿ ಪಿಕ್ನಿಕ್‍ನಿಂದ ಬಂದಾಗಿನಿಂದ ಇಬ್ಬರ ಮಧ್ಯದಲ್ಲಿ ಕವಿದಿದ್ದ ಮೌನ ಎರಡು ದಿನವಾದರು ಅಂತ್ಯಗೊಂಡಿರಲಿಲ್ಲ. ಗಿರೀಶ ಪ್ರಕಾರ ಅವನಿಗೆ ಎಲ್ಲರ ಮುಂದೆ ತನ್ನ ಹಳ್ಳಿ ಹೆಂಡತಿಯಿಂದಾಗಿ ಅವಮಾನವಾಗಿತ್ತು. ಅವನಿಗೆ ರೋಷ ಇನ್ನು ಇಳಿದಿರಲಿಲ್ಲ. ಇತ್ತ ಸುಮನ್ ಗೆ ಅವಳು ತಪ್ಪು ಮಾಡಿದ್ದಾಳೆ ಎಂದೆನಿಸಿರಲಿಲ್ಲ. ಪ್ರಾಣ...

Follow

Get every new post on this blog delivered to your Inbox.

Join other followers: