Yearly Archive: 2021
ಕಳ್ಳ ಬಂದ ಕಳ್ಳ…
ಕೊರೋನಾ ಎಂಬ ಪಿಡುಗು ಇಡೀ ವಿಶ್ವವನ್ನೇ ಕಟ್ಟಿಹಾಕಿದೆ. ಹೊರಗೆ ಅನಗತ್ಯವಾಗಿ ತಲೆ ಹಾಕಿದಿರೋ ನಿಮ್ಮ ಪ್ರಾಣಕ್ಕೇ ಕುತ್ತು ಬರಬಹುದು. ಇದರಿಂದ ಸತ್ತವರು ಅವರ ಅಂತಿಮ ದರ್ಶನಕ್ಕೂ ಯಾರೂ ಬಾರದೆ ಪರದೇಶಿಗಳಂತೆ ಸಮಾಧಿಗೆ ಸೇರುತ್ತಾರೆ. ಇನ್ನಷ್ಟು ದಿನ ಬದುಕಿರಬೇಕೆಂದಿದ್ದರೆ ಮನೆಯೊಳಗೇ ಬಾಗಿಲು ಬಂದ್ ಮಾಡಿಕೊಂಡು ಒಳಗಿರಿ. ಆಗ ‘ನೀವು...
ಜ್ಯೋತಿರ್ಲಿಂಗ 1-ಸೌರಾಷ್ಟ್ರದ ಸೋಮನಾಥ
ಗುಜರಾತಿನ ಪ್ರವಾಸಕ್ಕೆಂದು ಹೋದವರು, ಸೋಮನಾಥನ ದರ್ಶನ ಪಡೆಯದೇ ಬರುವುದುಂಟೇ? ಸೋಮನಾಥನ ದೇಗುಲದ ಮುಂದೆ ನಿಂತವರನ್ನು ಆಯಸ್ಕಾಂತದಂತೆ ಆಕರ್ಷಿಸಿದ್ದು ಭವ್ಯವಾದ ಸೋಮನಾಥನ ಆಲಯ. ಅರಬ್ಬೀ ಸಮುದ್ರ ತೀರ, ಅಪೂರ್ವವಾದ ಶಿಲ್ಪಕಲೆ, ಅದ್ಭುತವಾದ ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಹೊಂದಿರುವ ದೇವಾಲಯ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಗುಜರಾತಿನ ಕಾಟಿಯಾವಾಡಿನ...
ಭದ್ರ ಭ್ರಾತೃ ಪ್ರೇಮಿ ಭರತ
ಭಾರತದ ಕುಟುಂಬ ವ್ಯವಸ್ಥೆ ಹಿರಿದಾದುದು. ಭದ್ರತೆ, ಪವಿತ್ರತೆ, ಬಂಧುತ್ವ, ಅನ್ಯೋನ್ಯತೆ ಮೊದಲಾದ ಮೌಲ್ಯಗಳಿಂದೊಡಗೂಡಿ ಆದರ್ಶವಾದುದು. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಹೇಗಿರಬೇಕೆಂಬ ಮಾರ್ಗದರ್ಶನ ನಮ್ಮ ಪುರಾಣಗಳಿಂದ,ಸನಾತನ ಸಂಸ್ಕೃತಿಯಿಂದ ವೇದ್ಯ. ಸತೀಧರ್ಮ, ಪತಿಧರ್ಮ, ಪಿತನ ಧರ್ಮ, ತಂದೆ-ತಾಯಿಯರ ಧರ್ಮ ಹೀಗೆ ಪ್ರತಿಯೊಬ್ಬರ ಕರ್ತವ್ಯವನ್ನೂ ತಿಳಿಸಿ ಹೇಳುತ್ತವೆ ನಮ್ಮ ವೇದೋಪನಿಷತ್ತುಗಳು. ರಾಮಾಯಣವೆಂಬ...
ಪುಸ್ತಕ ಪರಿಚಯ: ‘ಮಾತ್ರೆ ದೇವೋ ಭವ’
ಹೆಸರು: ಮಾತ್ರೆ ದೇವೋ ಭವಲೇಖಕರ ಹೆಸರು: ಆರತಿ ಘಟಿಕಾರ್ಪ್ರಕಾಶಕರು: ತೇಜು ಪಬ್ಲಿಕೇಶನ್ಒಟ್ಟು ಪುಟಗಳು: 120ಮೊದಲ ಮುದ್ರಣ: 2018ಬೆಲೆ: ರೂ. 140/-********** ********** ಹಾಸ್ಯ ಎನ್ನುವುದು ಕಥೆ ಕಾದಂಬರಿಯ ಹಾಗೆ ಕಲ್ಪನೆಯಲ್ಲಿ ಹುಟ್ಟುವುದಲ್ಲ. ಹಾಗೆ ಹುಟ್ಟಿದರೂ ಅದರಲ್ಲಿ ಸ್ವಾದವಿರುವುದಿಲ್ಲ. ಹಾಸ್ಯವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಆಗಾಗ ಘಟಿಸಿದಾಗಲೇ...
ಈ ಡ್ರೆಸ್ ಬೇಡ..
ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು ಬೇರೆ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಬಟ್ಟೆ ತಂದರೆ ಮಾತ್ರ ಕಥೆ ಮುಗಿಯುವುದಿಲ್ಲ.ಬಟ್ಟೆಯನ್ನ ಸರಿಯಾದ ಅಳತೆಗೆ ಹೊಲೆಯುವ ಟೈಲರ್ ಹುಡುಕುವುದು ಇನ್ನೊಂದು ಮೈಗ್ರೇನ್. ಟೈಲರ್ ಸಿಕ್ಕಿ...
ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 4
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು..) ಮುಂದೆ ಮುಂದೆ ನಡೆಯುತ್ತಾ ಇದ್ದ ಹಾಗೆ, ದೈಹಿಕ ಶಕ್ತಿ ಕುಂಠಿತವಾಗತೊಡಗಿತು. ಗಂಟಲೊಣಗಿ ಬಾಯಾರತೊಡಗಿತು. ನನ್ನ ಕೆಲವೇ ಅಗತ್ಯ ವಸ್ತುಗಳನ್ನೂ ¸ ಸಹ ಹೊರಲಾಗದು ಎಂದು ಗೊತ್ತಿದ್ದರಿಂದ, ಅಂದರೆ ಮುಂಚೆಯೇ ಟ್ರಾವಲ್ಸ್ ನವರು ತಿಳಿಸಿದ್ದರಿಂದ, ನೇಮಿಸಿಕೊಂಡಿದ್ದ ಶರ್ಪಾ ಸಹ ನನ್ನ ನಡಿಗೆಯ ನಿಧಾನಕ್ಕೆ...
ಈ(ಗೋ)ಗ ಬದುಕು
ಈಗೆಲ್ಲಾ ಬದುಕುಹಾಗೋ, ಹೀಗೋ,ಈಗೋಗಳ ಆಗರಬತ್ತಿ ಹೋಗುತ್ತಿದೆ ಪ್ರೀತಿಯಸೆಲೆಯೆಲ್ಲ ಗೆಲುವಿಗೆ ಇಲ್ಲಿ ಬೆಲೆ ಇಲ್ಲಸೋಲನ್ನಾರೂ ಒಪ್ಪುತ್ತಿಲ್ಲಯಾರೆಲ್ಲರಿಗಿಂತ ಎತ್ತರಎನ್ನುವ ಭರಾಟೆಯಲ್ಲಿಒಬ್ಬರೊಬ್ಬರ ನಡುವೆದೊಡ್ಡದಾಗುತ್ತಿರುವ ಕಂದರನೀ ನನಗಿದ್ದರೆ ನಾ ನಿನಗೆಎಂಬುದೆಲ್ಲ ಹೋಯಿತೆಲ್ಲಿಗೆಈಗೆಲ್ಲಾ ನಿನ್ನ ದಾರಿ ನಿನಗೆನನ್ನ ದಾರಿ ನನಗೆ ಬದಲಾವಣೆ ಬೇಕು ಸರಿಇದಲ್ಲ ಬದಲಾಗುವ ಪರಿಎತ್ತರದವರಾದರೇನುಮತ್ತವರಲ್ಲಿ ತೋರಿಸಿ ಕರುಣೆಉತ್ತುಂಗಕ್ಕೇರಿದರೇನುಇರಲಿ ಸತ್ಸಂಗದಾಚರಣೆ ಹುಟ್ಟಿ ಬೆಳೆದಳಿಯುವುದುಜೀವ...
ಗಂಗೇಚ…..
“ಗಂಗೇಚ, ಯಮುನೇಚೈವ, ಗೋದಾವರಿ ಸರಸ್ವತಿ…..”…ಇದೇನಪ್ಪಾ ಶ್ಲೋಕ ಶುರುವಾಯ್ತು ಅಂದ್ಕೊಡ್ರಾ? ಹೌದು..ಎಲ್ಲಾ ಪವಿತ್ರ ಜಲಗಳೂ ಬಾವಿ ನೀರಿನಲ್ಲಿ ಸೇರಿರುತ್ತವೆ ಎಂಬ ನಂಬಿಕೆಯೊದಿಗೆ, ಮನೆಯ ಒತ್ತಟ್ಟಿಗೇ ಇದ್ದ ಮಣ್ಣುಕಟ್ಟೆಯ ಬಾವಿಯಿಂದ ಬೆಳ್ಳಂಬೆಳಗ್ಗೆ ನೀರು ಸೇದಿ, ಅದೇ ತಣ್ಣೀರನ್ನು ತಲೆಗೆ ಮೈಗೆ ಸುರಿದುಕೊಂಡು ನನ್ನಜ್ಜ ಸ್ನಾನಮಾಡುತ್ತಿದ್ದುದು ನನ್ನ ಚಿಕ್ಕಂದಿನ ನೆನಪುಗಳಲ್ಲೊಂದು. ಮೊದಲೆಲ್ಲಾ,...
ಕವಿಯೇ ಕವಿತೆಯೋ,ಕವಿತೆಯೊಳು ಕವಿಯೋ..
ಭಾವಪ್ರಪಂಚದ ದೊರೆಗೆಕಂಡಿದ್ದೆಲ್ಲಾ ಕವಿತೆ,ಸ್ಪುರಣೆಗೊಳ್ಳಲು ಹುಲ್ಲುಕಡ್ಡಿಯೇ ಸಾಕಾಯಿತುಚಿಮ್ಮಿಸುತಾ ಪದಗಳ ಒರತೆ.. ಹಾಗೆಂದು ಸರಳವೇನಲ್ಲಕವಿ ನೇಯುವ ಕವನ,ಒಳಗೊಳಗೇ ಬೇಯಬೇಕುನೋಯಬೇಕುವಿಷಯದ ಒಡಲಾಳವ ಭೇದಿಸಿಆಶಯ ಮೂಡಿಸಬೇಕು.. ನೋವಲಿದ್ದಾಗ ಖುಷಿಯನಗುನಗುತಲಿರುವಾಗ ದುಃಖದುಮ್ಮಾನಗಳತಾನಲ್ಲದ ಪಾತ್ರಕೆ ಪರಕಾಯ ಪ್ರವೇಶ,ಅನುಭವ ಕಲ್ಪನೆಗಳ ಸಮ್ಮಿಲನದಅಂಕೆಯಲಿರಬೇಕಾದ ಭಾವಾವೇಶ .. ಶೀರ್ಷಿಕೆ ನಗಣ್ಯವಾಗದೇ ಸೆಳೆತದ ಮಳೆಯಲಿಓದುಗ ಮಹಾಶಯ ತೋಯಬೇಕು,ಒಳಗಣ ಪದಗಳ ಲಾಲಿತ್ಯದಿ ಅಮೃತ ವಿಷವಾಗದ ಹಾಗೆಹದವರಿತುವಿಷಯ...
ನಿಮ್ಮ ಅನಿಸಿಕೆಗಳು…