ಸತ್ಯ ಕಾಣೆಯಾಗಿದೆ..
ಬಣ್ಣವಿಲ್ಲ ಬಲಿಷ್ಠ ಮೈಕಟ್ಟುಅನೂಹ್ಯ ಗಮ್ಯದಷ್ಟು ಎತ್ತರವಯಸ್ಸಿಗಿಲ್ಲ ಯಾವುದೇ ಚೌಕಟ್ಟುಸ್ಥಳ ದೈವತ್ವಕ್ಕೆ ತುಂಬಾ ಹತ್ತಿರವಾಗಿರುವಸತ್ಯ ಕಾಣೆಯಾಗಿದೆ.. ಸಿಹಿಯಾದ ಸುಳ್ಳಿನ ನರ್ತನದ ಆರ್ಭಟಕಟುಸತ್ಯದ ತಲೆಮೇಲೆ!ಕಹಿಯೆಂದು ದೂಡಿಸಿಕೊಂಡ ಮುಗ್ಧಸತ್ಯಸುಳ್ಳಿನ ಸಂಭ್ರಮದ ಸುಳಿಯಲಿ ಸಿಲುಕಬಾರದೆಂದುನಿಲುಕಲಾರದಾಯಿತೇ? ಈರ್ಷ್ಯೆ ಕುಣಿಯುವವನ ಕಣ್ಣಿಂದ ಜಾರಿಮುಖವಾಡದ ಚಹರೆಯೊಳಗಿಂದ ಉದುರಿಕಪಟ ನಗೆಯೊಂದರಿಂದ ನೆಗೆದುಅನೈತಿಕತೆಯ ಹಾದಿಯಿಂದ ದೂರ ದೂರ ಓಡಿಸತ್ಯ ಕಾಣೆಯಾಗಿದೆ.....
ನಿಮ್ಮ ಅನಿಸಿಕೆಗಳು…