Monthly Archive: July 2018
ಮಂಗಳೂರಿನ ಅತ್ರಿ ಬುಕ್ ಸೆಂಟರ್ ಎಂದರೆ ನಮ್ಮಂತಹ ಪುಸ್ತಕ ಪ್ರೇಮಿಗಳಿಗೆ ಪ್ರಿಯವಾದ ತಾಣ. ಅಲ್ಲಿ ಶಿಸ್ತಿನಿಂದ, ಸಣ್ಣ ಮಟ್ಟಿಗೆ ಗೌರವ ಮಿಶ್ರಿತ ಭಯ ಹುಟ್ಟಿಸುವಂತೆ ಕುಳಿತಿರುತ್ತಿದ್ದ ಅಶೋಕ ವರ್ಧನರು, ಅಲ್ಲಿ ಬಂದು ಹೋಗುತ್ತಿದ್ದ ಸಾಹಿತಿಗಳು, ನನ್ನಂತಹ ಕಾಲೇಜು ಲೆಕ್ಚರರ್ ಗಳು.. ಹೀಗೆ ಅದೊಂದು ಸಾಹಿತ್ಯಾಸಕ್ತರ ಅಡ್ಡೆಯಂತಿತ್ತು. ಇನ್ನು...
ಬರೆದು ಬಿಡಬೇಕು ಏನನ್ನಾದರೂ ಅಂತ ಹೇಳುತ್ತಲೇ ತನಗೆ ಗೊತ್ತೇ ಆಗದಂತೆ ಅದೆಷ್ಟೋ ಕವಿತೆಗಳನ್ನು ಬರೆದು ಇನ್ನೂ ಬರೆಯಬೇಕೆನ್ನುವ ತುಡಿತದಲ್ಲಿರುವ ಕವಯತ್ರಿ ರೇಣುಕಾ ರಮಾನಂದ. ಇದು ಒಳ್ಳೆಯ ಬೆಳವಣಿಗೆ. ಇಂತಹ ತುಡಿತ ಹೊಂದಿರುವುದರಿಂದಲೇ ನಮ್ಮ ಸಮಕಾಲೀನ ಪ್ರಮುಖ ಕವಯತ್ರಿಯರಲ್ಲಿ ರೇಣುಕಾರವರು ಕೂಡ ಒಬ್ಬರು. ಇಲ್ಲಿ ತನಕ ನಾನು ನೋಡಿಯೇ...
ಪಾಪಿ ನೀನು … ಮರಳಿನ ದಿಬ್ಬದಂತಹ ಸೊಂಟದ ಮೇಲೆ ಹೊಯ್ಗೆ ಹೋಯ್ದಂತೆ ನೇಯುವುದು ಗೊತ್ತಿತ್ತು ನಿನಗೆ… ಎತ್ತರದ ಕಣಿವೆಯ ಮೇಲಿಂದ ಸ್ವೇದ ಬಿಂದು ಜಾರದಂತೆ ನಾಲಿಗೆಯಡಿಗೆ ಎಟುಕಿಸಿಕೊಳ್ಳುವುದಲ್ಲಿ ಪಾಮರ ನೀನು.. ಸಿಡಿಲತೊಡೆಗಳ ಆಳದಿಂದ ಧಗ್ಗನೇಳುವ ಅಗ್ನಿಗೆ ಸಾಕ್ಷಿಯಾಗುವಂತೆ ಅರ್ಘ್ಯ ಹೊಯ್ಯುವುದರಲ್ಲಂತೆ ಭೊರ್ಗರೆವ ಹುಚ್ಚು ಸಮುದ್ರ… ಕಿಬ್ಬೊಟ್ಟೆಯಾಳದಲ್ಲೆಲ್ಲೋ ಪ್ರಳಯವಾದಂತೆ...
ಬಂತಗೋ ಬಂತಗೋ ಮತ್ತದೇ ಆಷಾಢ ,ಜೋರು ಮಳೆಯ ನೆನಪಿಸುವ ಆಷಾಢ ತಂಗಾಳಿಯ ಬಚ್ಚಿಟ್ಟು ,ಬಿರುಗಾಳಿಯ ಆರ್ಭಟದ ವೇಷ ತೊಟ್ಟ ಕಿಲಾಡಿ ಆಷಾಢ ಗಗನಚುಂಬಿ ಮರಗಳನೇ ಆಗಸಕೆ ಚಾಮರದ ರೂಪವಿತ್ತು ಗಹಗಹಿಸಿದ ಆಷಾಢ , ಕೃಷಿ ಕಾರ್ಯದ ಹುರುಪು ತೋರ್ವ ರೈತನವಗೆ ಗೊರಬು ನೇಗಿಲು ಎತ್ತು ,ಗಾಡಿಯು...
ಭಾರತದ ರೈಲ್ವೇಯನ್ನು, ವಿಶ್ವದ 3ನೆ ಅತಿ ದೊಡ್ಡ ರೈಲು ಸೇವೆ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಪ್ರತಿದಿನ ಸರಾಸರಿ 2 ಕೋಟಿ 30 ಲಕ್ಷ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲು ಮತ್ತು ಪ್ರಯಾಣಿಕರ ಸುರಕ್ಷತೆಯಲ್ಲಿ ರೈಲು ಹಳಿಗಳ ನಿರ್ವಹಣೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ದೇಶಾದಂತ್ಯ 63,000...
ಒಮ್ಮೆ ಅವ್ವ ನಾವಿರುವಲ್ಲಿಗೆ ಬಂದಾಗ ಹಗಲಿರುಳೂ ನಾನು ಓದುವುದ ಕಂಡಾಗ ಕೇಳಿದ್ದರು ಯಾಕಿಷ್ಟು ಓದುವೆ ಮಗ ಇರುವ ಕೆಲಸ ಸಾಲದೆ ನಿನಗೀಗ ನಾನಂದೆ ಈ ಕೆಲಸ ನನ್ನ ಜೀವ ನೋಡವ್ವ ಆದರೂ ಏನಾದರೂ ಸಾಧನೆ ಮಾಡಬೇಕಲ್ಲವ್ವ ಸಾಧನೆಯಾಗಲಿ ಮಗ ನಿನ್ನ ಬಯಕೆ ಈಡೇರಲಿ ಎಂದಿದ್ದರಂದು ಅವ್ವ...
ಶತಮಾನಗಳಿಂದಲೂ ಹೆಣ್ಣಿನ ಮೇಲೆ ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಆದರೆ ಈ ದೌರ್ಜನ್ಯಕ್ಕೆ ಕೇವಲ ಗಂಡು ಮಾತ್ರ ಕಾರಣವೆ? ಯೋಚಿಸಬೇಕಾಗಿದೆ. ಗಂಡಿಗಿಂತ ಹೆಚ್ಚಾಗಿ ಹೆಣ್ಣು ಮತ್ತೊಬ್ಬ ಹೆಣ್ಣಿನಿಂದಲೇ ದೌರ್ಜನ್ಯಕ್ಕೊಳಗಾಗುತ್ತಿರುವುದು ಖೇದದ ಸಂಗತಿ. ಹೆಣ್ಣನ್ನು ಹುಟ್ಟುವ ಮೊದಲೇ ಭ್ರೂಣದಲ್ಲಿಯೇ ಚಿವುಟಿ ಹಾಕುತ್ತಿರುವ ಸಂಗತಿಗೆ ಮೇಲ್ನೋಟಕ್ಕೆ ಅವಳ ಗಂಡನನ್ನು...
ಕೊಳೆ ರೋಗ ನಿಯಂತ್ರಣ ಈ ಹವಾಮಾನದಲ್ಲಿ ಸತ್ವರವಾಗಿದೆಯಲ್ಲವೇ? ನಿಮ್ಮಲ್ಲಿ ಈಬಾರಿ ಸಿಂಪರಣೆ ಮಾಡಿ ಆಯ್ತಾ?ಬಯೋ_ _ ಸಿಂಪರಣೆಯೋ, ಅಲ್ಲ ಬೋರ್ಡೋವಾ? ವಿಚಾರ ವಿಮರ್ಷೆ ಮಾಡುವುದು ಸಹಜವಲ್ಲವೇ?ಹಲವೆಡೆಗಳಲ್ಲಿ ಬೋರ್ಡೋ ತಯಾರಿ ಸ್ವೇಚ್ಛೆಯಿಂದಲೂ, ನೈಸರ್ಗಿಕ ವೈಪರೀತ್ಯದಿಂದಲೂ ಹದಗೆಡುತ್ತಿದೆಯೇ? ಮಿಲಾರ್ಡೆಟ್ ಹತ್ತೊಂಬತ್ತನೇ ಶತಮಾನದಲ್ಲಿ ಫ್ರಾನ್ಸ್ ನಲ್ಲಿ ದ್ರಾಕ್ಷೆಯ ಕೊಳೆ ರೋಗ ಹತೋಟಿಗಾಗಿ...
ಮೆತ್ತಗಾದ ಮೈ ಕತ್ತಲಾದ ಮನಸು ಮತ್ತೆ ಮತ್ತೆ ಕಾಣುತಿದೆ ಕುರುಡು ಕನಸು ಬಳಲಿ ತೊಳಲಿ ಬೆಂದು ನೊಂದು ನೋವು ನುಂಗಿ ಅಡರಿ ದೇಹ, ತಬ್ಬಿ ತನುವ ಬಿಗಿದು ಕೈ ಸೆಟೆದು ಮೈ, ದುಡಿದು ದಣಿದು ದಿನವು ತಣಿದು ಸೋತು ಸತ್ತ ಸಂಭ್ರಮವೆಷ್ಟೊ? ಬರಿಯ ಬೆವರು! ಮೆತ್ತಗಾದ ಮೈ...
ನಂಜನಗೂಡು ತಾಲೂಕಿನ ಹೆಮ್ಮರಗಾಲ ಎಂಬ ಪುಟ್ಟ ಊರಿನಲ್ಲಿ, ಶ್ರೀ ಸಂತಾನ ವೇಣುಗೋಪಾಲಸ್ವಾಮಿಯ ದೇವಾಲಯವಿದೆ. ಈ ದೇವಾಲಯದ ಚರಿತ್ರೆ ಹೀಗಿದೆ. ಬಹಳ ಹಿಂದೆ ಅಲ್ಲಿ ರಾಜ್ಯವಾಳುತ್ತಿದ್ದ ಗಂಗರಸನು ಒಂದು ಬಾರಿ ವಿಜಯಯಾತ್ರೆಗೆ ಹೊರಟನಂತೆ. ಆತನಿಗೆ ಸ್ವಪ್ನದಲ್ಲಿ ಸ್ವಾಮಿಯ ದರ್ಶನವಾಗಿ, ಯುದ್ಧದಲ್ಲಿ ವಿಜಯವಾಗುತ್ತದೆಯೆಂದೂ, ಹಿಂತಿರುಗಿ ಬರುವಾಗ ಒಂದು ಕಡೆ ರಥದ...
ನಿಮ್ಮ ಅನಿಸಿಕೆಗಳು…