ಅವ್ವನ (ತಾಯಿಯ) ಹರಕೆ
ಒಮ್ಮೆ ಅವ್ವ ನಾವಿರುವಲ್ಲಿಗೆ ಬಂದಾಗ
ಹಗಲಿರುಳೂ ನಾನು ಓದುವುದ ಕಂಡಾಗ
ಕೇಳಿದ್ದರು ಯಾಕಿಷ್ಟು ಓದುವೆ ಮಗ
ಇರುವ ಕೆಲಸ ಸಾಲದೆ ನಿನಗೀಗ
ನಾನಂದೆ ಈ ಕೆಲಸ ನನ್ನ ಜೀವ ನೋಡವ್ವ
ಆದರೂ ಏನಾದರೂ ಸಾಧನೆ ಮಾಡಬೇಕಲ್ಲವ್ವ
ಸಾಧನೆಯಾಗಲಿ ಮಗ ನಿನ್ನ ಬಯಕೆ ಈಡೇರಲಿ ಎಂದಿದ್ದರಂದು ಅವ್ವ
ನನ್ನ ಹರಸಿದ್ದರು ಹುರಿದುಂಬಿಸಿದ್ದರಂದು ಮನದುಂಬಿ ಅವ್ವ
ಮುಂದೊಂದು ದಿನ ನನ್ನ ಉಪ ಪ್ರಬಂಧಕರ ಪರೀಕ್ಷೆ ಬಂದಾಗ
ಅವ್ವನಿಗೆ ಹೇಳಿದ್ದೆ ನನ್ನ ಸಾಧನೆಯ ಪರೀಕ್ಷೆ ಬಂದಾಯ್ತು ನೋಡವ್ವ ಎಂದಾಗ
ಅವ್ವ ಹೇಳಿದ್ದರು ಈ ಪರೀಕ್ಷೆಯಲ್ಲಿ ನೀನೇ ಗೆಲುವೆ ಮಗ ಎಂದು ಹರಸಿದ್ದರಾಗ
ಅವ್ವನ ಹರಕೆ ಗಟ್ಟಿಯಾಗಿತ್ತು ನಾನು ಪರೀಕ್ಷೆಯಲ್ಲಿ ಪಾಸಾದಾಗಾ
ಮತ್ತೆ ಮುಂದೆ ಸಂದರ್ಶನದ ಪರೀಕ್ಷೆ ಎದುರಾದಾಗ
ಮತ್ತೆ ಅವ್ವ ಹೇಳಿದ್ದರು ಗೆಲುವು ನಿನಗೇ ಬಿಡು ಮಗ
ದೇವರಲ್ಲಿ ಹರಕೆಯನ್ನಿರಿಸಿದ್ದೇನೆ ನಿಶ್ಚಿಂತೆಯಿಂದ ಸಿದ್ಧತೆ ಮಾಡು ಮಗ
ಅವ್ವನ ಹರಕೆ ಮತ್ತೊಮ್ಮೆ ಫಲಿಸುವುದೇನೋ ಎಂಬ ಪ್ರಶ್ನೆ ಕಾಡಿತ್ತು ಮನದಲ್ಲಾಗ
ಸಂದರ್ಶನದ ದಿನ ಅವ್ವನಿಗೆ ದೂರದಿಂದಲೇ ಪೋನಾಯಿಸಿದಾಗ
ಅವ್ವ ಹೇಳಿದ್ದರು ದೃಢವಾಗಿರು ಧೈರ್ಯದಿಂದಿರು ಮಗ
ದೇವರಲ್ಲಿ ನನ್ನ ಹರಕೆ ಇದೆ ನೀನೆ ಗೆಲುವೆ ಮಗ
ಅವ್ವನ ಮಾತನ್ನು ನಂಬಿ ದೇವರನ್ನು ನಂಬಿ ಹೊರಟಿದ್ದೆ ಸಂದರ್ಶನಕೆ ನಾನಾಗ
ಫಲಿತಾಂಶ ಹೊರಬಿದ್ದು ಅವ್ವನಿಗೆ ಪೋನಾಯಿಸಿದಾಗ
ಅವ್ವ ಹೇಳಿದರು ನಾ ಹೇಳಿರಲಿಲ್ಲವೆ ಮಗ
ನೀನೆ ಗೆಲುವೆ ದೇವರು ನಿನ್ನ ಕೈ ಬಿಡುವುದಿಲ್ಲವೆಂದು ಆಗ
ಅವ್ವನ ಹರಕೆ ಬಲುಗಟ್ಟಿ ಎಂದೆನಿಸಿ ಕಣ್ತುಂಬಿ ಬಂದಿತ್ತಾಗ
ದೂರದಿಂದಲೇ ಅವ್ವನಿಗೆ ಸಲ್ಲಿಸಿದೆ ನೂರೊಂದು ನಮನ
ಅವ್ವ ನಂಬಿದ ದೇವರಿಗೂ ಸಲ್ಲಿಸಿದೆ ನೂರೊಂದು ನಮನ
ಅವ್ವನ ಹರಕೆಯಲಿ ನನ್ನ ಪರಿಶ್ರಮದಲ್ಲಿ ಪುಳಕಗೊಂಡಿತ್ತು ಮೈಮನ
ಅವ್ವ ಮತ್ತೊಮ್ಮೆ ಹರಸಿದಂತಾಯ್ತು ನೀನಾಗು ಸಜ್ಜನ, ನೀನಾಗು ಸಜ್ಜನ
–ವೆಂಕಟೇಶ್ , ಕಾರವಾರ
Very nice…
ತುಂಬ ಚೆನ್ನಾಗಿದೆ ಕವನದ ಸಾಲುಗಳು
Super