Daily Archive: July 13, 2017
ಮದುರೈ ಕ್ಷೇತ್ರ ತಲುಪಿದಾಗ ಸಂಜೆ 3.40 ಗಂಟೆ. ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ. ಬಿಗಿ ಸೆಕ್ಯುರಿಟಿಯಲ್ಲಿ ಚಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು. ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ ಸ್ಥಳ ಮದುರೈ. ವೈಗೈ...
ಮೈಮರೆತು ಮೈಚಾಚಿದಾಗ ಮನಸು ಜೀಕುತ್ತದೆ ಜೋಕಾಲಿ ಜೀಕುತ್ತ ಆಗಸಕೆ ನೂರಾರು ಕನಸುಗಳ ಕಾಣುತ್ತ ವಿಹರಿಸುತ್ತ ಜೀಕು ನಿಲ್ಲುತ್ತಲೇ ಮೈಎಚ್ಚರ ಅದೇ ವಾಸ್ತವತೆಯ ಅರಿವು ಮತ್ತೆ ಅದೇ ನಿಟ್ಟುಸಿರು ಬೇಗೆ ಬವಣೆ ಜೀವನದ ಜೋಕಾಲಿ ಎಲ್ಲೆಲ್ಲ ಬಿಸಿ ಉಸಿರಿನ ಹುಸಿ ಉಸಿರಿನ ಕ್ಷಣಭಂಗುರ ಸುಖದ ಏರಿಳತಗಳು ಮತ್ತೆ...
ನನ್ನ ಮಾತೇ ನನಗೆ ಒಮ್ಮೊಮ್ಮೆ ಅರ್ಥವಾಗಲ್ಲ ಅದಕ್ಕೆ ಹುಡುಕುವೇ ಖಾಲಿಪುಟವನ್ನ ಬಿಡುವಿದ್ದಾಗೆಲ್ಲ ನಿಮ್ಮನ್ನು ಮೆಚ್ಚಿಸಲು ಪ್ರಶಂಸೆಗಾಗಿ ಬರೆಯುವನು ನಾನಲ್ಲ ಬರಹವೇ ನನ್ನುಸಿರು ಅದು ಇರುವವರೆಗೂ ನಿಲ್ಲಿಸಲ್ಲ ನವಜಾತ ಶಿಶುವಿನಂತೇ ಜೀವನದ ಪೂರ್ಣಪಾಠ ಅರಿತಿಲ್ಲ ತುಂತುರು ಮಳೆಹನಿಯಂತೇ ಮನಸು ಲೇಖನಿಯನ್ನ ಬಿಡಲ್ಲ ಅನುಭವದ ಪರದೆಯಲ್ಲಿ ಕಂಡ ಸುಖ-ದುಃಖಗಳನ್ನ ಮರೆತಿಲ್ಲ...
ಆಫೀಸಿಗೆ ಹೊರಟು ನಿಂತಿದ್ದೆ. ಎಂದಿನಂತೆ ಬ್ಯಾಗ್ ಒಳಗೆ ಕೈ ಹಾಕಿ ಐಡಿ ಕಾರ್ಡ್, ಪರ್ಸ್ ಹಾಗು ಮೊಬೈಲ್ ಇದೆಯೆಂದು ಖಾತರಿ ಪಡಿಸಿಕೊಂಡೆ. ಬಸ್ ಹತ್ತಾಯಿತು. ಫೋನ್ ತೆಗೆದು ನೋಡಿದೆ. ಗೆಳತಿಯ ಮೆಸೇಜ್ ಕಾದಿತ್ತು. ಉತ್ತರಿಸಿದೆ. ಅವಳ ಮರು ಉತ್ತರ ಬಂತು “ಯಾಕೆ ರಿಪ್ಲೈ ಮಾಡಿಲ್ಲ ಇಷ್ಟು ಹೊತ್ತು?”...
ಪ್ರಕೃತಿಯು ಪರಮಾತ್ಮನ ನಿಗೂಢ ಚಿತ್ರ ಅದರೊಳಗೆ ನಾವೊಂದು ಹಾಸ್ಯ ಪಾತ್ರ ಪ್ರತಿಯೊಂದು ಹಂತದಲಿ ಪಾತ್ರ ವಿಚಿತ್ರ ಅದ ನಾವು ತಿಳಿದೊಡೆ ಜೀವನ ಸುಸೂತ್ರ ಶುಭ ಸುಪ್ರಭಾತ..!! ತಿಳಿಗೊಳದ ನೀರಿನಲಿ ಅಲೆಗಳೊಡಮೂಡಿರಲು ಉದಯಕಾಲದ ಹೊಂಗಿರಣಗಳ ಥಳಕು ತಿಳಿಮನದ ಕೊಳದಲ್ಲಿ ನೆನಪಿನಲೆ ಮೂಡಿರಲು ಕರಗದಿರೆ ಸವಿನೆನಪ ಮೆಲುಕು ಶುಭೋದಯ!...
ಭಾವ ಸಾಗರದಲಿ ಅರಳಿದ ತಾವರೆ ಪ್ರೀತಿ ಅದರ ಹೆಸರು ಹನಿ ಹನಿ ನಗೆಯ ಬೆಳದಿಂಗಳ ಶಶಿ ಒಲವೇ ಅದರ ಉಸಿರು ಮಣ್ಣ ವಾಸನೆಯಲಿ ಕಲಸಿದ ನೆನಪುಗಳು ಇಳೆಯ ಬಿರಿದು ಮೊಳಕೆ ಹಸಿರ ಮರೆಯಲ್ಲಿ ನಾಚಿದ ಮಲ್ಲಿಗೆ ಬೇರೆ ಹೆಸರು ಬೇಕೆ ಕಡಲ ನೊರೆಯೊಡನೆ ನಕ್ಕ ಕನಸುಗಳು ಮೀಟಿ...
ಮಾರುಕಟ್ಟೆಯಲಿ ಮಾರುವಂತಿದ್ದರೆ ದೇಶದ ಬಡತನವನ್ನೇ ಮಾರುತ್ತಿದ್ದೆ, ಬದಕೊಂದು ಸಗಟು ವ್ಯಾಪಾರದ ಚಿಲ್ಲರೆ ಮಾರಾಟಗಾರನ ಲಾಭವಿಲ್ಲದ ಸಾಲ ಸೋಲದ ಕುಂಟ ಕಾಲಿನ ಯೋಗವಾಗಿದೆ… ಮಾರುಕಟ್ಟೆಯಲಿ ಮಾರುವಂತಿದ್ದರೆ ಬರಗಾಲದ ಬಿಸಿಲನ್ನೆ ಮಾರುತ್ತಿದ್ದೆ… ಅನ್ನಕ್ಕೊಂದು ಸರ್ಕಾರಿ ಸೀಲಿರದ ಉಸಿರು ನಿಂತ ದೇವರನು ಬೀದಿಯಲಿಟ್ಟು ಟನ್ನುಗಟ್ಟಲೆ ಕಪ್ಪು ಮೋಡವನ್ನೆ ಕೊಂಡುಕೊಳ್ಳುತ್ತಿದ್ದೆ… ಮಾರುಕಟ್ಟೆಯಲಿ...
ಎರಡು ದಶಕಗಳ ಹಿಂದೆ, ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು. ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ ನೆರೆಹೊರೆಯವರೂ...
ನಿಮ್ಮ ಅನಿಸಿಕೆಗಳು…