ಮುಂಜಾವಿನ ಮಂಜು ಹನಿಗಳು…!!
ಪ್ರಕೃತಿಯು ಪರಮಾತ್ಮನ ನಿಗೂಢ ಚಿತ್ರ
ಅದರೊಳಗೆ ನಾವೊಂದು ಹಾಸ್ಯ ಪಾತ್ರ
ಪ್ರತಿಯೊಂದು ಹಂತದಲಿ ಪಾತ್ರ ವಿಚಿತ್ರ
ಅದ ನಾವು ತಿಳಿದೊಡೆ ಜೀವನ ಸುಸೂತ್ರ
ಶುಭ ಸುಪ್ರಭಾತ..!!
ತಿಳಿಗೊಳದ ನೀರಿನಲಿ ಅಲೆಗಳೊಡಮೂಡಿರಲು
ಉದಯಕಾಲದ ಹೊಂಗಿರಣಗಳ ಥಳಕು
ತಿಳಿಮನದ ಕೊಳದಲ್ಲಿ ನೆನಪಿನಲೆ ಮೂಡಿರಲು
ಕರಗದಿರೆ ಸವಿನೆನಪ ಮೆಲುಕು
ಶುಭೋದಯ!
ಮುಂಜಾವ ಮಂಜಿನಲಿ ನೆನೆದಿದ್ದ ವನಸಿರಿಯು
ಕಾಯುತಿದೆ ಸೂರ್ಯ ಹೊಂಗಿರಣಗಳ ಬೆಳಕ
ಸೂಸಿ ಕಿರಣಗಳು ಬರೆ ಬೆಳ್ಳಿರೇಖೆಗಳ ಸಿರಿಯು
ಸೃಷ್ಟಿಯಾಯಿತು ಅದೊ ದಿವ್ಯ ಲೋಕ
ಶುಭ ಸುಪ್ರಭಾತ!
.
-ಶಂಕರಿ ಶರ್ಮ, ಪುತ್ತೂರು.
ಹನಿಗವನಗಳು ಸೊಗಸಾಗಿವೆ.
ನನ್ನ ಕಿರು ಕವನಗಳನ್ನು ಪ್ರಕಟಿಸಿದ ಹಾಗೂ ಮೆಚ್ಚುಗೆ ಸೂಸಿದ ಮಾಲಾ…ನಿಮಗೆ ಹೃತ್ಪೂರ್ವಕ ಧನ್ಯವಾದಗಳು…
ತುಂಬಾ ಚೆನ್ನಾಗಿದೆ!