ಜೋಕಾಲಿ
ಮೈಮರೆತು ಮೈಚಾಚಿದಾಗ
ಮನಸು ಜೀಕುತ್ತದೆ ಜೋಕಾಲಿ
ಜೀಕುತ್ತ ಆಗಸಕೆ ನೂರಾರು ಕನಸುಗಳ ಕಾಣುತ್ತ
ವಿಹರಿಸುತ್ತ ಜೀಕು ನಿಲ್ಲುತ್ತಲೇ
ಮೈಎಚ್ಚರ ಅದೇ ವಾಸ್ತವತೆಯ ಅರಿವು
ಮತ್ತೆ ಅದೇ ನಿಟ್ಟುಸಿರು ಬೇಗೆ ಬವಣೆ
ಜೀವನದ ಜೋಕಾಲಿ ಎಲ್ಲೆಲ್ಲ
ಬಿಸಿ ಉಸಿರಿನ ಹುಸಿ ಉಸಿರಿನ ಕ್ಷಣಭಂಗುರ
ಸುಖದ ಏರಿಳತಗಳು
ಮತ್ತೆ ಮತ್ತೆಮೀಟಿ ಜೀಕಬೇಕು
ಮತ್ತೆ ಮತ್ತೆ ಕಾಣಬೇಕು
ಭವಿಷ್ಯದ ಕನಸುಗಳ
ಸಾಕಾರ ವಾಗಿಸಬೇಕು
ಆಗಲೇ ಸಾಥ೯ಕತೆ ಜೀಕಿದಕೆ
ಜೋಕಾಲಿಗೆ.
‘
– ರಾಧಾ ಶ್ಯಾಮರಾವ್ , ಧಾರವಾಡ