ಹುಡುಕು ಜೀವನ
ಸಿಕ್ಕಿದ್ದೆಲ್ಲವ ಒಂದೆಡೆ ಇರಿಸಿ ನೋಡುತ್ತಿದ್ದೆಮನಸೆಂದಿತು ನೀ ಹುಡುಕುತ್ತಿದ್ದದ್ದು ಇಲ್ಲಿಲ್ಲ!ಹುಡುಕುವುದೆಲ್ಲಾ ಹಾಗೆ ಸಿಗುವುದೂ ಅಲ್ಲಸಿಕ್ಕಿರುವುದನ್ನು ನೀನುಹುಡುಕ್ಕುತ್ತಲೂ ಇರಲಿಲ್ಲ!ಇರುವುದೆಲ್ಲ ನಿನ್ನನ್ನು ಹುಡುಕಿಬಂದಿರುವುದುಬಂದದ್ದನ್ನು ನೀ ಸ್ವೀಕರಿಸಿರುವುದು.ಅದೂ ಎರವಲು,ಯಾವುದೂ ಬರುವುದಲ್ಲಜೊತೆಯಲ್ಲಿ ನೀ ಹೊರಡಲುನಿರಾಕರಿಸುವುದೂ ನಿನ್ನಹದ್ದುಬಸ್ತಿನಲ್ಲೇನಿಲ್ಲಹಾಗಿದ್ದರೆ ಹುಡುಕುತ್ತಿದ್ದದ್ದಾದರೂ ಏನು?ಹಾಗೆ ಹುಡುಕಲಿಕ್ಕಿದೆಯಾದರೂ ಏನು?ತಿಳಿಯದೆ ಬಳಲುವುದೇ ಬದುಕೇನು?ತಿಳಿದೋ ತಿಳಿಯದೆಯೋಎಲ್ಲವ ತಿಳಿಯಬೇಕೆಂಬ,ಇಲ್ಲದ್ದ ಹುಡುಕಿ ಪಡೆಯಬೇಕೆಂಬಭ್ರಮೆ ಏಕೆ ನಿನಗೆ ಇನ್ನೂ?...
ನಿಮ್ಮ ಅನಿಸಿಕೆಗಳು…