ಹುಡುಕು ಜೀವನ
ಸಿಕ್ಕಿದ್ದೆಲ್ಲವ ಒಂದೆಡೆ ಇರಿಸಿ ನೋಡುತ್ತಿದ್ದೆ
ಮನಸೆಂದಿತು ನೀ ಹುಡುಕುತ್ತಿದ್ದದ್ದು ಇಲ್ಲಿಲ್ಲ!
ಹುಡುಕುವುದೆಲ್ಲಾ ಹಾಗೆ ಸಿಗುವುದೂ ಅಲ್ಲ
ಸಿಕ್ಕಿರುವುದನ್ನು ನೀನು
ಹುಡುಕ್ಕುತ್ತಲೂ ಇರಲಿಲ್ಲ!
ಇರುವುದೆಲ್ಲ ನಿನ್ನನ್ನು ಹುಡುಕಿ
ಬಂದಿರುವುದು
ಬಂದದ್ದನ್ನು ನೀ ಸ್ವೀಕರಿಸಿರುವುದು.
ಅದೂ ಎರವಲು,
ಯಾವುದೂ ಬರುವುದಲ್ಲ
ಜೊತೆಯಲ್ಲಿ ನೀ ಹೊರಡಲು
ನಿರಾಕರಿಸುವುದೂ ನಿನ್ನ
ಹದ್ದುಬಸ್ತಿನಲ್ಲೇನಿಲ್ಲ
ಹಾಗಿದ್ದರೆ ಹುಡುಕುತ್ತಿದ್ದದ್ದಾದರೂ ಏನು?
ಹಾಗೆ ಹುಡುಕಲಿಕ್ಕಿದೆಯಾದರೂ ಏನು?
ತಿಳಿಯದೆ ಬಳಲುವುದೇ ಬದುಕೇನು?
ತಿಳಿದೋ ತಿಳಿಯದೆಯೋ
ಎಲ್ಲವ ತಿಳಿಯಬೇಕೆಂಬ,
ಇಲ್ಲದ್ದ ಹುಡುಕಿ ಪಡೆಯಬೇಕೆಂಬ
ಭ್ರಮೆ ಏಕೆ ನಿನಗೆ ಇನ್ನೂ?
-ನಟೇಶ
ಅರ್ಥಪೂರ್ಣವಾದ ಕವನ. ಧನ್ಯವಾದಗಳು
ಕವನ ಚೆನ್ನಾಗಿದೆ ಸಾರ್
ಬದುಕಿನ ಸತ್ಯವನ್ನು ಚೆನ್ನಾಗಿ ತಿಳಿಸಿದ್ದೀರ. ಅಭಿನಂದನೆಗಳು.
ಎಲ್ಲವು ತಾತ್ಕಾಲಿಕ, ನಶ್ವರ ಅನ್ನುವುದೇ ಸತ್ಯ
ಹುಡುಕಲಾರದನ್ನು ಹುಡುಕುತ್ತ, ಸಿಕ್ಕಿದ್ದನ್ನು ದಕ್ಕಿಸಿಕೊಳ್ಳದ ಬದುಕಿನ ವಿಪರ್ಯಾಸಕ್ಕೊಂದು ಕನ್ನಡಿ ಈ ಸುಂದರ ಕವನ.
ಇಲ್ಲದುದನ್ನು.., ನಮ್ಮದಲ್ಲದುದನ್ನು ಹುಡುಕುವುದೇ ಜೀವನವಾಗಿದೆ. ಆ ಮಧ್ಯೆ ಸಿಕ್ಕಿದ್ದು..ದಕ್ಕಿದ್ದು ಮಾತ್ರ ನಮ್ಮವು. ಜೀವನ ವೇದಾಂತವನ್ನು ಕವನದಲ್ಲಿ ಹಿಡಿದಿಟ್ಟ ಪರಿ ಚೆನ್ನಾಗಿದೆ.
ಇಲ್ಲದ್ದ ಹುಡುಕಿ ಪಡೆಯಬೇಕೆಂಬ ಭ್ರಮೆ ನಮ್ಮವು ಎನ್ನುವುದು ಸತ್ಯವಿರಬಹುದೇನೋ?!