Monthly Archive: September 2020

3

ನೆನಪು 13 : ಪ್ರೊ.ಅ ರಾ ಮಿತ್ರ ; ಕೆ ಎಸ್‌ ನ ರ ಕಾವ್ಯಮಿತ್ರ

Share Button

ಕನ್ನಡ ಸಾಹಿತ್ಯಲೋಕದ ವಿದ್ವಾಂಸ, ಲಲಿತ ಪ್ರಬಂಧಕಾರ, ಹಾಸ್ಯಪಟು, ವಿಮರ್ಶಕ ಹಾಗೂ ಶ್ರೇಷ್ಠ ಭಾಷಣಕಾರ  ಪ್ರೊ.ಅ ರಾ ಮಿತ್ರರವರು   ನಮ್ಮ ತಂದೆಯವರ  ಕಾವ್ಯಗಳಿಗೆ  ಸಹೃದಯ  ಪ್ರಚಾರ ನೀಡುತ್ತಿರುವ‌  ಮಹನೀಯರು. ತಮ್ಮ ಭಾಷಣಗಳಲ್ಲಿ  ಅವರು  ಕೆ ಎಸ್ ನ  ಅವರ  ಬಹುಪಾಲು  ಕವನಗಳನ್ನು  ಯಾವುದೇ  ಬರವಣಿಗೆಯ  ಸಹಾಯವಿಲ್ಲದೆ  ಉದ್ಧರಿಸಬಲ್ಲರು. ನಮ್ಮ ತಂದೆಯರಿಗೂ ಮಿತ್ರ ಅವರಿಗೂ ಒಂದು ನಿಕಟವಾದ ಸ್ನೇಹವಿತ್ತು.ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ  ತಮ್ಮ  ಕನ್ನಡ  ಅಧ್ಯಾಪನ  ವೃತ್ತಿ ಆರಂಭಿಸಿ, ಹಲವು  ಕಾಲದ  ನಂತರ ಸರ್ಕಾರಿ ...

5

ಬಿದಿರೆಂಬ ಸೋಜಿಗ

Share Button

  ಬಿದಿರು ಮೆಳೆಗಳು ಸುರಿಸಿದೆ ಅಕ್ಕರೆಯ ಅಕ್ಕಿಯನು ಉದರ ಪೊರೆಯಲು ಯೋಗ್ಯವಾಗಿಸಿ ಅಗುಳನು ಮೆದುವಾದ ಅನ್ನ ಹೊಕ್ಕಿತೆಂತು ಗಟ್ಟಿ ಬಿದಿರನು ಹುದುಗಿದೆ ಸೋಜಿಗ ನೋಡು ಮೇಳೈಸಿದೆ ತುತ್ತನು|| ಗಳೆಗಾರನ ಗಳಿಕೆಯದು ತುಂಬಿದೆ ಗಳಗೆಯೊಳು ಬೆಳೆದ ಗಳೆಗಳು ಕೆಳಗೆ ಗಳಿಯಿಸಿದೆ ಅಕ್ಕಿಗಳು ಕಳಮೆಯೊಳಗುಂಟು ರೋಗಹರ ಗುಣಸತ್ವದಗುಳು ಕಳಚುವುದು ಚಿಗುರೆಲೆ...

5

ಶಾಂತಿಯನ್ನೆಲ್ಲಿ ಹುಡುಕೋಣ..!??

Share Button

       ಸಂಘಜೀವಿಯಾದ ಮಾನವನಿಗೆ ತನ್ನ ಸಮಾಜದಲ್ಲಿ ಬದುಕಲು ಬೇಕಾದುದೆಲ್ಲವೂ ಈ ಪ್ರಕೃತಿಯಲ್ಲಿ ಧಾರಾಳವಾಗಿ ಲಭ್ಯವಿದೆ. ಆದರೂ ಅತ್ಯಂತ ಸ್ವಾರ್ಥ ನಡವಳಿಕೆಯು ಆತನಲ್ಲಿ ಹಾಸುಹೊಕ್ಕಾಗಿರುವುದು ವಿಪರ್ಯಾಸ. ಆದ್ದರಿಂದ, ಪರಸ್ಪರ ವೈಮನಸ್ಸಿನ ಭಾವನೆಯನ್ನು ಮನಸ್ಸಲ್ಲಿ ತುಂಬಿಕೊಂಡು, ಕ್ಲೇಶದಿಂದ ಜೀವಿಸುವುದನ್ನು ಎಲ್ಲೆಲ್ಲೂ ಕಾಣಬಹುದು. ಅಸೂಯೆ, ಅಸಮಾಧಾನ, ಅನ್ಯಾಯ, ಮೋಸ, ದುರಾಸೆ, ದುರಹಂಕಾರ...

8

ಬಿದಿರು – ಒಂದು ಚಿಂತನೆ

Share Button

ಮಾನವ ಈ ಭೂಮಿಗೆ ಬಿದ್ದಾಕ್ಷಣ ಬಿದಿರಿನ ತೊಟ್ಟಿಲೇ ಮೊದಲ ಆಸರೆ. ಹಾಗೆ ಇಹಲೋಕದ ಪಯಣಗಳನ್ನು ಮುಗಿಸಿದ ಮೇಲೆ ಪರಲೋಕ ಯಾತ್ರೆಗೆ ಪ್ರಯಾಣಿಸುವುದು ಬಿದಿರಿನ ಚಟ್ಟದ ಮೇಲೆ ಎಂತಹ ವಿಪರ್ಯಾಸ. ಈ ಜನನ ಮರಣದ ನಡುವೆ ಮನುಷ್ಯ ಜೀವನದ ಅವಿರ್ಭಾವ ಅಂಗ ಈ ಬಿದಿರು ಎಂದರೆ ಅತಿಶಯೋಕ್ತಿಯಲ್ಲ. ಬಿದಿರು...

11

ಐವತ್ತರ ಮೇಲೆ ಆವರಿಸಿಕೊಳ್ಳುವ ಆಲ್ಜೀಮರ್‍ಸ್ ಕಾಯಿಲೆ

Share Button

‘ನನ್ನನ್ನು ಮೈಸೂರಿಗೆ ಕರೆದುಕೊಂಡು ಹೋಗು’ ಎಂದು ಕೆಲವು ದಿನಗಳಿಂದ ಮಗನ ಜೊತೆ ವರಾತ ಹಿಡಿದಿದ್ದರು ವೆಂಕಟೇಶರಾಯರು. ಮಗ ಸುರೇಶನಿಗೆ ಅಪ್ಪನಿಗೆ ತಿಳಿಹೇಳಿ ಸಾಕೋ ಸಾಕಾಗಿತ್ತು. ಅಪ್ಪ, ನೀವು ಮೈಸೂರು ಮನೆಯಲ್ಲೇ ಇದ್ದೀರ. ಇನ್ನೆಲ್ಲಿಯ ಮೈಸೂರು? ಅದಕ್ಕೆ ತಂದೆ ಉತ್ತರ ಇಲ್ಲ ನಾವು ಬೆಂಗಳೂರಿನಲ್ಲಿದ್ದೇವೆ. ಇದು ಮೈಸೂರು ಅಲ್ಲ,...

3

ಆತ್ಮದೀಪ

Share Button

ಪ್ರೀತಿಸುವದಿಲ್ಲ ಯಾವುದನ್ನೂ ಪ್ರಜ್ವಲಿಸುವೆ ಈ ನೆಲದ ಆತ್ಮದೀಪವಾಗಿ ಬಯಸುವುದು ಜಗತ್ತು ಎಲ್ಲಿಯವರೆಗೆ ನೀಡುವೆನು ಬೆಳಕನು ಅಲ್ಲಿಯವರೆಗೆ ತೆರೆದರೆ ಜ್ವಾಲೆಯ ಬಾಗಿಲು ಕುರುಡಾಗುವವು ವಿಶ್ವದ ಕಣ್ಣುಗಳು ಛಿದ್ರತೆಯ‌ಲಿ ಬೆರಗುಗೊಂಡ ನೋಟ ನಂದಿಸಿ ಜ್ವಾಲೆಯ‌ನು, ನಿರಾಕರಣೆಯಿಲ್ಲ ಪರಿಗಣಿಸಿರಿ ಆ ಜೀವನವನು ಮಾತ್ರ ಅರಿಯಿರಿ ಅಂತರವ ಮಣ್ಣಿನ ದೀಪಗಳಲಿ ಸಾಲ ನೀಡಿದೆ...

6

ಅನುಸಂಧಾನದ ದಾರಿಗುಂಟ

Share Button

ಆಶಾ ಜಗದೀಶ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ, ಪ್ರತಿಭಾವಂತ, ಸದ್ದುಗದ್ದಲವಿಲ್ಲದೇ ನಿರಂತರವಾಗಿ ಕಥೆ, ಕಾವ್ಯ, ಅಂಕಣ, ಪ್ರಬಂಧ, ವಿಮರ್ಶೆ ಬರೆಯುತ್ತಿರುವ, ಬೆರಗು ಹುಟ್ಟಿಸುವ ಬರಹಗಾರ್ತಿ. “ನಾದಾನುಸಂಧಾನ” ಇದು ‌ಇವರ ಪ್ರಥಮ‌ ಅಂಕಣ ಬರಹದ ಸಂಕಲನ. ಬಹುಶಃ ಈ ಎಲ್ಲಾ ಬರಹಗಳೂ “ಕೆಂಡ ಸಂಪಿಗೆ” ಯ ಅಂಕಣಗಳೇ. ಇಲ್ಲಿ ಪ್ರಮುಖವಾಗಿ ಪ್ರಸ್ತುತ...

9

ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ!

Share Button

ನಿನಗೆ ಅತಿ ಪ್ರಿಯವಾದ ಬ್ರೇಕ್ ಫಾಸ್ಟ್ ಅಥವಾ ಟಿಫನ್ ಯಾವುದೆಂದು ಯಾರಾದರು ಪ್ರಶ್ನಿಸಿದರೆ ನನ್ನ ಉತ್ತರ ಇದೇ ಆಗಿರುತ್ತದೆ. ಅದು ಅಮ್ಮ ಮಾಡಿಕೊಡುತ್ತಿದ್ದ ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ! ರಾತ್ರಿಯ ಅನ್ನ ಉಳಿದರೆ ಬೆಳಿಗ್ಗೆ ಅದೇ ತಂಗಳನ್ನಕ್ಕೆ ಎರಡೇ ಎರಡು ಈರುಳ್ಳಿ ಹಚ್ಚಿ, ಬಿಸಿ ಎಣ್ಣೆಯಲ್ಲಿ ಸಾಸಿವೆ...

6

ನಿದಿರೆಯ ಹಾಡು

Share Button

ಜೀಕಿ ನಿದಿರೆಯು ಕಣ್ಣಕೊಳದಲಿ ತಾಕಿ ಕಣ್ಣೆವೆ ಎದುರುಬದುರಲಿ ಹಾಕಿ ತಾಳವ ನವಿಲ ರೀತಿಯೆ ಮೂಕ ನರ್ತನ ಮಾಡಿದೆ… ಇರುಳ ಶಾಂತ ನಿದಿರೆ ಚಂದ ಸವಿಯ ಕನಸು ಮತ್ತೂ ಅಂದ ಕನಸು ತುಟಿಯ ಮೇಲೆ ಬರೆದ ಮುಗುಳು ನಗೆಯ ಸೂಸಿದೆ.. ಹಚ್ಚಿ ಮನದ ಒಳಗೆ ಸೊಡರು ಬಿಚ್ಚಿ ಗತದ...

28

ಸಾಂಬಾರು

Share Button

ಅದೇ ಮೆಣಸಿನಪುಡಿಯ ಘಾಟು ಮೂಗು ಹೊಕ್ಕಾಗಲೆಲ್ಲಾ ಅವನ ಖಾರದ ಮಾತುಗಳು ಜ್ಞಾಪಕಾರ್ಥವಾಗಿ…! ಹುಣಸೆ ಹಿಂಡುವಾಗೆಲ್ಲಾ ಹುಳಿ ಹಿಂಡಲು ಬಂದವಳೆಂಬ ಅತ್ತೆಯ ಧೋರಣೆಯ ನುಡಿಗಳು ಕಿವಿಗಪ್ಪಳಿಸಿ ಒಡಲಾಗ್ನಿ ಜ್ವಲಿಸುವುದು..!! ಬೆಂದ ಬೇಳೆಯ, ಕುದಿಗೆ ಬೆರಸುವಾಗ ತವರ ಹಂಗಿಸಿದ ಹೆತ್ತವರ ನಿಂದಿಸಿದ ಕರ್ಣಕಠೋರ ವ್ಯಂಗ್ಯಗಳು ಉಕ್ಕೇರಿಸುತ ಎದೆಯ ಲಾವಾ..! ಕೊತ...

Follow

Get every new post on this blog delivered to your Inbox.

Join other followers: