Daily Archive: August 15, 2019
‘ರೀ, ರತ್ನಮ್ಮೋರೇ, ನಾಳೆ ರಾಖಿ ಹಬ್ಬ, ನನಗಿರುವವರು ಇಬ್ಬರು ಗಂಡು ಮಕ್ಕಳು, ನಿಮ್ಮ ಹೆಣ್ಣುಮಕ್ಕಳ ಕೈಯಿಂದ ರಾಖಿ ಕಟ್ಟಿಸ್ರೀ’ ಎಂದು ಈಗ್ಗೆ ಮೂರು ದಶಕಗಳ ಕೆಳಗೆ ಹೊಸದಾಗಿ ಅಪ್ಪನಿಗೆ ಕೆಲಸ ಸಿಕ್ಕು ಹುಬ್ಬಳ್ಳಿಯ ಕ್ವಾಟ್ರಸ್ಸಿನಲ್ಲಿ ಶಿಫ್ಟ್ ಆಗಿದ್ದಾಗ ಮನೆಯ ಪಕ್ಕದ ಆಂಟಿ ಹೀಗೆ ಕೇಳಿಕೊಂಡಿದ್ದರು. ಅಮ್ಮನಿಗೆ...
ಬಾವುಟವಿಲ್ಲದ ಭಾರತದ ಪರಿಕಲ್ಪನೆ ಅಸಂಭವವೆ? ಹೌದು. ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾದ ಭಾರತ ಮಹಾಕಾವ್ಯಗಳ ಕಾಲದಿಂದಲೂ ಬಾವುಟವನ್ನು ಕುರಿತು ಪ್ರಸ್ತಾಪಿಸುತ್ತದೆ. ಗುಪ್ತರ ಕಾಲದಿಂದ ಮಧ್ಯಯುಗೀನ ಮುಸ್ಲಿಂ ಆಳ್ವಿಕೆಯವರೆಗಿನ ಬಾವುಟಗಳ ಕಥೆ ಒಂದಾದರೆ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಸಂಪೂರ್ಣ ಸ್ವರಾಜ್ಯದ ಹೋರಾಟದವರೆಗಿನ ಬಾವುಟದ ಕಥೆ ಮತ್ತೊಂದು...
ಕತ್ತಲೆಯ ಗರ್ಭದಲ್ಲಿ ಹುಗಿದು ಹಾಕಿದರೂ, ಕಾದು ಕಾದು ಸಮಯಕ್ಕೆ ಸರಿಯಾಗಿ ಮೇಲೆದ್ದು ಬರುವ ಬಗೆಯನು…. , ಕಡಿಯುವ, ಕತ್ತಿ ಸವರುವ ಮಂದಿ ಪಕ್ಕದಲ್ಲಿದ್ದರೂ; ತಂಪು ಗಾಳಿ ತೂಗಿಕೊಂಡು, ಹಕ್ಕಿ ಅಳಿಲುಗಳ ಬಳಿಗೆ ಕರೆಯುವ ಒಲವನು…. . ‘ಕಳೆ’ಯ ಗೆಳೆತನದೊಡನೆ ಕಳೆಯದೇ ಬಾಳಲು; ಮೇಯಲು ಬರುವ ಪಶುಗಳ ಸಾಲುಸಾಲಿನ ನಡುವೆ...
ಸುಂದರ ದೇಶ ನಮ್ಮ ಭಾರತ.ದೇಶ,. . ಪರಮೋಚ್ಚ ಸಂಸ್ಕ್ರತಿಯ ಪರಮಶ್ರೇಷ್ಠ ಪುರುಷರು ಜನಿಸಿದ ಪ್ರಕೃತಿ ಸಿರಿಯ ಹೊಂದಿದ, ಪ್ರಜಾಪ್ರಭುತ್ವದ ಹಿರಿಮೆ ಸಾಧಿಸಿದ, ಸುಂದರ ದೇಶ ನಮ್ಮ ಭಾರತ ದೇಶ, . ಪ್ರಾಣವನ್ನು ಲೆಕ್ಕಿಸದೇ ಪರಕೀಯರೊಂದಿಗೆ ಹೋರಾಡಿ ಗುಲಾಮಗಿರಿಯಿಂದ ನಮ್ಮನ್ನು ಪಾರುಮಾಡಿದ ಸ್ವಾತಂತ್ರ ಯೋಧರಿಂದ ಕೂಡಿದ ಸುಂದರ ದೇಶ...
ಭುವ(ಬ)ನೇಶ್ವರದಲ್ಲಿರುವ ಅತೀ ಹಳೆಯ ಶ್ರೀ ಲಿಂಗರಾಜದೇವರ ದೇಗುಲದ ವೀಕ್ಷಣೆಗೆ ಹೊರಟಾಗ ಪೂರ್ತಿ ಕತ್ತಲಾವರಿಸಿತ್ತು. ವಿದ್ಯುಚ್ಛಕ್ತಿಯಿಲ್ಲದೆ ನಗರವಿಡೀ ದಾರಿ ದೀಪಗಳೂ ಇರಲಿಲ್ಲ. ಆ ಕತ್ತಲಲ್ಲೇ ಮೊಬೈಲ್ ಬಳಕಿನಲ್ಲಿ ನಮ್ಮನ್ನು ದೇವಸ್ಥಾನದೆಡೆಗೆ ಕರೆದೊಯ್ದರು ಗಣೇಶಣ್ಣ. ಮಾರ್ಗದೆಲ್ಲೆಡೆ ವಿದ್ಯುತ್ ಕಂಬಗಳು, ತಂತಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುದನ್ನು ಅಸಹಾಯಕರಾಗಿ ನೋಡುವುದು ಮನಸ್ಸಿಗೆ ಕಷ್ಟವೆನಿಸಿತು. ಮಾರ್ಗಗಳು ಸೇರುವಲ್ಲಿ...
ಬರುತ್ತಿದೆ ಸಿಂಹ ಸಂಕ್ರಮಣ. ತುಳುನಾಡಿನಲ್ಲಿ ಸೋಣ ಸಂಕ್ರಮಣ ಎಂದೇ ಜನಜನಿತ. ಅನಂತರ ಬರುವುದೇ ತುಳುವರ ಸೋಣ ತಿಂಗಳು. ಚಾಂದ್ರಮಾನ ಪಂಚಾಂಗದ ಪ್ರಕಾರ ಶ್ರಾವಣ ತಿಂಗಳು, ಸೌರಮಾನ ಪಂಚಾಂಗ ಅನುಸರಿಸುವ ತುಳುವರ ಪಾಲಿಗೆ ಸೋಣ ತಿಂಗಳು (ಅಲ್ಲಿ ಹದಿನೈದು ದಿನದ ವ್ಯತ್ಯಾಸ ಇದೆ). ಸೋಣ ಸಂಕ್ರಮಣಕ್ಕೆ ತುಳುನಾಡಿನಲ್ಲಿ ವಿಶೇಷ...
ಕಡಿಮೆ ಮಾತನಾಡಿ,ಮೆಲ್ಲಗೆ ಮಾತನಾಡಿ, ಯೋಚಿಸಿ ಮಾತನಾಡಿ, ಮಧುರವಾಗಿ ಮಾತನಾಡಿ, ಪ್ರೀತಿಯಿಂದ ಮಾತನಾಡಿ, ಗೌರವದಿಂದ ಮಾತನಾಡಿ. ಇದು ಮಾತಿನ ಬಗ್ಗೆ ಶ್ರೀ ಆರ್ಷ ಋಷಿಮುನಿಗಳು ನುಡಿದ ಬಿಂದುಗಳು. ಆದರೆ ಜನ ಸಾಮಾನ್ಯರು ಇದನ್ನು ಚಾ-ಚೂ ತಪ್ಪದೆ ಪಾಲಿಸುತ್ತಾರಾ?ಪಾಲಿಸುವುದಕ್ಕೆ ಆಗುತ್ತಾ? ಎಂದು ಕೇಳಿದರೆ ಇಲ್ಲ ಎನ್ನದೆ ವಿಧಿಯಿಲ್ಲ.ಕೆಲವು ವೇಳೆ...
ಟಿವಿ ಧಾರಾವಾಹಿಯಲ್ಲಿ ಮದುವೆಗಳನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಧಾರಾವಾಹಿಗಳಲ್ಲೂ ಕಂಡು ಬರುತ್ತಿದೆ . ನಿಜ ಮದುವೆಗಳಂತೆಯೇ ಅದ್ದೂರಿಯಿಂದ ಮಾಡುತ್ತಿರುವುದನ್ನು ನೋಡುತ್ತಿದ್ದೆವೆ. ಆದರೆ ಒಂದು ವಿಪರ್ಯಾಸದ ಸಂಗತಿ ಅಂದರೆ ಈ ಮದುವೆಗಳು ನಡೆಯುವುದಕ್ಕೆ ಮುಂಚೆ ಗಂಡು ಮತ್ತು ವಅವರ ಕಡೆಯವರು ಹೆಣ್ಣು ನೋಡಲು ಬರಬೇಕಲ್ಲವೇ....
ನಿಮ್ಮ ಅನಿಸಿಕೆಗಳು…