ಸುಂದರ ದೇಶ-ನಮ್ಮ ಭಾರತ ದೇಶ

Spread the love
Share Button

ಸುಂದರ ದೇಶ
ನಮ್ಮ ಭಾರತ.ದೇಶ,.
.
ಪರಮೋಚ್ಚ ಸಂಸ್ಕ್ರತಿಯ
ಪರಮಶ್ರೇಷ್ಠ ಪುರುಷರು ಜನಿಸಿದ
ಪ್ರಕೃತಿ ಸಿರಿಯ ಹೊಂದಿದ,
ಪ್ರಜಾಪ್ರಭುತ್ವದ ಹಿರಿಮೆ ಸಾಧಿಸಿದ,
ಸುಂದರ ದೇಶ
ನಮ್ಮ ಭಾರತ ದೇಶ,
.
ಪ್ರಾಣವನ್ನು ಲೆಕ್ಕಿಸದೇ
ಪರಕೀಯರೊಂದಿಗೆ ಹೋರಾಡಿ
ಗುಲಾಮಗಿರಿಯಿಂದ ನಮ್ಮನ್ನು ಪಾರುಮಾಡಿದ
ಸ್ವಾತಂತ್ರ ಯೋಧರಿಂದ ಕೂಡಿದ
ಸುಂದರ ದೇಶ
ನಮ್ಮ ಭಾರತ ದೇಶ
.
ಶತ್ರು ರಾಷ್ಟ್ರ ಗಳ ದಾಳಿಯಿಂದ ನಮ್ಮ ರಕ್ಷಿಸಲು
ಹಗಲಿರುಳೆನ್ನದೇ
ಗಡಿ ಕಾಯುವ ವೀರಯೋಧರಿರುವ
ಸುಂದರ ದೇಶ
ನಮ್ಮ ಭಾರತ ದೇಶ,
ದೇಶದ ಜನತೆಗೆ ಅನ್ನವ ನೀಡಲು
ಹೊಲಗದ್ದೆಗಳಿಗೆ ತೆರಳಿ
ಸತತ ದುಡಿಯುವಂಥ  ಅನ್ನದಾತರಿರುವ,
ಸುಂದರ ದೇಶ
ನಮ್ಮ ಭಾರತ ದೇಶ,
.
ಚಾಣಾಕ್ಷ ರೀತಿಯಲಿ
ಕ್ಲಿಷ್ಟ ರಾಜಕೀಯ ಸಮಸ್ಯೆಗಳ ಬಗೆಹರಿಸುವಂಥ
ಚಾಣಕ್ಯರಿರುವ,
ಸುಂದರ ದೇಶ
ನಮ್ಮ ಭಾರತ ದೇಶ,
.
ಚಂದ್ರಯಾನದ ಮೂಲಕ ಚಂದ್ರನೆಡೆ ಹೆಜ್ಜೆ  ಹಾಕಿ
ಇಡೀ ವಿಶ್ವದ ಗಮನ ಸೆಳೆದ ವಿಜ್ನಾನಿಗಳಿರುವ
ಸುಂದರ ದೇಶ
ನಮ್ಮ ಭಾರತ ದೇಶ.
.
ಭಾರತೀಯ ಕಲೆ,ಸಂಸ್ಕೃತಿ,ಯನು ಎಲ್ಲೆಡೆ ಪಸರಿಸಿದ ಕವಿ,ಕಲಾವಿದರಿರುವ,
ಸುಂದರ ದೇಶ
ನಮ್ಮ ಭಾರತ ದೇಶ.
.
ಭೀಕರ ನೆರೆ, ಬರ ಸಂದರ್ಭದಲ್ಲಿ ಸಂತ್ರಸ್ತರಿಗೆ
ನಿಮ್ಮ ಜತೆ ನಾವಿದ್ದೇವೆಂದು ಧೈರ್ಯ ತುಂಬಿ ಸಹಾಯ ಮಾಡುವ
ಸಹೃದಯಿ ನಾಗರಿಕರಿರುವ
ಸುಂದರ ದೇಶ
ನಮ್ಮ ಭಾರತ ದೇಶ

.

-ಮಾಲತೇಶ, ಹುಬ್ಬಳ್ಳಿ

2 Responses

  1. ನಯನ ಬಜಕೂಡ್ಲು says:

    Nice sir

  2. Shankari Sharma says:

    ದೇಶಾಭಿಮಾನ ಉಕ್ಕಿಸುವ ಸುಂದರ ಕವನ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: