Daily Archive: May 2, 2019
ಹೇ ದೇವಾ… ಹತ್ತವತಾರಗಳಲಿ ಮತ್ತೊಮ್ಮೆಯೂ ಹೆಣ್ಣಾಗದ ನಿನಗೆ ಬೇಕು – ಹೊಸದೊಂದವತಾರ ; ಹೆಣ್ಣ ಅರಿಯಲು. ನಿನ್ನ ನಾಟಕ ಶಾಲೆಗೆ ನೀನೇ ಸೂತ್ರ, ನಿನ್ನದೇ ಮುಖ್ಯ ಪಾತ್ರ. ಉಳಿದ ಖಾಲಿಯ ತುಂಬಲು ತಂದ ಹಾಗಿದೆ ಇತರೆ ಸ್ತ್ರೀ ಪಾತ್ರ.. ಒಂದೊಂದು ಗುಣಗಳಿಗೆ ಬೇಕಾಯ್ತು ಒಬ್ಬೊಬ್ಬ ದೇವ ! ಸೃಷ್ಟಿಗೊಬ್ಬ ಸ್ಥಿತಿಗೊಬ್ಬ ಲಯಕ್ಕೊಬ್ಬ.., ಅಬ್ಬಬ್ಬಾ..!! ಹೆಣ್ಣಿಗೆ ಬೇಕಿಲ್ಲ...
ಚಂದ್ರು ಆರ್ ಪಾಟೀಲರ “ಬಡ್ತಿ” ಕಥಾ ಸಂಕಲನ ಓದಿಯಾಯ್ತು. ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಹನ್ನೆರಡು ಕತೆಗಳು ಈ ಸಂಕಲನದಲ್ಲಿವೆ. ಮೂಢನಂಬಿಕೆಯ ಕಾರಣಕ್ಕಾಗಿ ನಡೆಯಲಿರುವ ತನ್ನ ಬಲಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಗೀತಾ ಎಂಬ ಹುಡುಗಿಯ ಕತೆ ಹೇಳುವ “ನೆಲವೆ ಹಸಿದು ನಿಂತೊಡೆ” ಎಂಬ ಕತೆಯ ಕ್ಲೈಮ್ಯಾಕ್ಸ್ ತನಕವೂ ಅವಳ...
ಈ ರಣ ಬಿಸಿಲಿಗೆ ಕರುಣೆಯೂ ಇಲ್ಲ ಭೇಧವೂ ಇಲ್ಲ ಏಕ ಪ್ರಕಾರವಾಗಿ ವ್ಯಾಪಿಸುತ್ತಿದೆ. ಬಿಸಿಲ ಚಾದರದೊಳಗೆ ಹೆಂಚು ಮಾಡು ಬಹು ಮಹಡಿಯ ತಾರಸಿ ಮುಳಿ ಹುಲ್ಲಿನ ಜೋಪಡಿ ಒಂದೇ ಸಮಗೆ ಬೆವರಿಳಿಸಿ ಬೇಯುತ್ತಿದೆ. ನಿಗಿ ನಿಗಿ ಉರಿಯುವ ನಡು ಹಗಲಿನೊಳಗೆ ರೆಪ್ಪೆ ಅಲುಗದೇ ನಿಂತು ಕಾಲು ನಡೆಯದೇ...
ನಮ್ಮ ಹಿರಿಯರ ಜೀವನಾನುಭವದ ಮೂಸೆಯಲ್ಲಿ ಬೆಂದು ಹೊರಹೊಮ್ಮಿದ ಅನರ್ಘ್ಯ ನುಡಿಮುತ್ತುಗಳೇ ಗಾದೆ ಮಾತುಗಳಾಗಿ, ಮುಂದಿನ ಪೀಳಿಗೆಯ ಜೀವನ ಪಥಕ್ಕೆ ಹಿಡಿದ ಪ್ರಣತಿಯಂತಿವೆ. ಕೆಲವೇ ಕೆಲವು ಶಬ್ದಗಳಲ್ಲಿ ರಚಿತವಾಗುವ ವಾಮನಾಕಾರದ ವಾಕ್ಯವು ತ್ರಿವಿಕ್ರಮನೆತ್ತರದ ಅಗಾಧ ಅರ್ಥವನ್ನು ಒಳಗೊಂಡಿರುವುದೇ ಇದರ ವಿಶೇಷತೆ. ಇದೊಂದು ಗಾದೆ ಮಾತು..’ಹಾಸಿಗೆ ಇದ್ದಷ್ಟು ಕಾಲು ಚಾಚು’....
ನಾನಾಗ ತಾಲ್ಲೂಕಾದ ಸಾಗರದಲ್ಲಿ 1997-98 ರಲ್ಲಿ ಸೆಕೆಂಡ್ ಇಯರ್ ಡಿಗ್ರಿ ಓದುತ್ತಿದ್ದೆ. ಮಲೆನಾಡಿನಲ್ಲಿ ಜೂನ್ ನಿಂದ 3 ತಿಂಗಳು ಮಳೆಗಾಲ. ಅದರಲ್ಲೇ ಸೈಕಲ್ ತುಳಿದುಕೊಂಡು ಕಾಲೇಜ್ ಹೋಗುತ್ತಿದ್ದೆವು. ಒಂದು ದಿನ ಕೆಮ್ಮು, ನೆಗಡಿ ಶುರುವಾಗಿ ಜ್ವರ ಬಂದಿತು. ಸರಿ 3 ದಿನ ಮಾಮೂಲಿ ಕ್ರೋಸಿನ್ ತಿಂದಾಯ್ತು, ಆದರೂ...
ನಿಮ್ಮ ಅನಿಸಿಕೆಗಳು…